ಬಿಗ್​ಬಾಸ್​​ ಬೆಡಗಿ ನಿವೇದಿತಾ ಗೌಡ ರೀಲ್ಸ್​, ಡಿವೋರ್ಸ್ ಕಾಂಟ್ರವರ್ಸಿಗೆ ಬೇಸತ್ತಿದ್ಯಾ ಕುಟುಂಬ?

author-image
Veena Gangani
Updated On
ಬಿಗ್​ಬಾಸ್​​ ಬೆಡಗಿ ನಿವೇದಿತಾ ಗೌಡ ರೀಲ್ಸ್​, ಡಿವೋರ್ಸ್ ಕಾಂಟ್ರವರ್ಸಿಗೆ ಬೇಸತ್ತಿದ್ಯಾ ಕುಟುಂಬ?
Advertisment
  • ಪ್ರಪೋಸ್​ ದಿನದಿಂದ ಹಿಡಿದು ಇಲ್ಲಿಯವರೆಗೂ ನಿವೇದಿತಾಗೆ ಸಂಕಷ್ಟ
  • ಮೊಟ್ಟ ಮೊದಲ ಬಾರಿಗೆ ಮನನೊಂದು ಮಾತನಾಡಿದ ನಿವೇದಿತಾ ಗೌಡ
  • 4 ವರ್ಷಗಳ ದಾಂಪತ್ಯಕ್ಕೆ ಜೀವನಕ್ಕೆ ಅಂತ್ಯ ಹಾಡಿದ್ರು ನಿವಿ ಹಾಗೂ ಚಂದನ್​

ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿರೋ ನಿವೇದಿತಾ ಗೌಡ ಏನೇ ಮಾಡಿದ್ರು ಸುದ್ದಿಯಲ್ಲಿ ಇರುತ್ತಾರೆ. ಬೋಲ್ಡ್​ ರೀಲ್ಸ್​ಗಳು ನೋಡುಗರ ಕೆಂಗಣ್ಣಿಗೆ ಗುರಿಯಾಗಿದೆ. ಕಿರುತೆರೆಯ ಗೊಂಬೆ ಅಂತಾನೇ ಫೇಮಸ್​ ಆಗಿದ್ದ ನಿವೇದಿತಾ ಗೌಡಗೆ ಆ ಹೆಸರು ಉಳಿದಿಲ್ಲ. ಡಿವೋರ್ಸ್​ ನಂತರ ಅಂತೂ ಸಾಕಷ್ಟು ಟೀಕೆಗೆ ಗುರಿಯಾಗಿದ್ರು. ಕಾಂಟ್ರವರ್ಸಿಗಳಿಂದ ಕುಟುಂಬ ಬೇಸರದಲ್ಲಿದೆ.

ಇದನ್ನೂ ಓದಿ: ಸೀರಿಯಲ್​ ಮುಗಿಯುತ್ತಿದ್ದಂತೆ ಸಖತ್​ ಬ್ಯುಸಿಯಾದ ಲಕ್ಷ್ಮೀ; ನಟಿ ಭೂಮಿಕಾ ರಮೇಶ್ ನೆಕ್ಸ್ಟ್ ಪ್ಲಾನ್​ ಏನು?

publive-image

ಬಿಗ್​ಬಾಸ್ ಸೀಸನ್​ 5ರ ಮೂಲಕ ಜನಪ್ರಿಯತೆ ಪಡೆದ ಚಲುವೆ ನಿವೇದಿತಾ. ಚಿಕ್ಕವಸ್ಸಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ನಟಿ. ಹಲವು ವಿಚಾರವಾಗಿ ಟ್ರೋಲ್​ ಆಗಿದ್ದಾರೆ, ನಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚಂದನ್​ ಶೆಟ್ಟಿ ನಿವೇದಿತಾ ಪ್ರಪೋಸ್​ ದಿನದಿಂದ ಹಿಡಿದು ಇಲ್ಲಿಯವರೆಗೂ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ದೇ ಹೆಚ್ಚು.

publive-image

ಬೋಲ್ಡ್​ ಲುಕ್​, ಬೋಲ್ಡ್​ ರೀಲ್ಸ್​ ನಿವೇದಿತಾಗೆ ಮುಳ್ಳಾಗಿ ಕಾಡ್ತಿವೆ. ಅದೆಷ್ಟೋ ಕೆಟ್ಟ ಕೆಟ್ಟದಾಗಿ ಕಾಮೆಂಟ್​ ಮಾಡಿದ್ರು, ಕ್ಯಾರೆ ಅಂತಿರಲಿಲ್ಲ. ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಲೈಫ್​ನ ಎಂಜಾಯ್​ ಮಾಡ್ತಿದ್ದ ನಟಿ, ಇದೇ ಮೊದಲ ಬಾರಿಗೆ ಮನನೊಂದು ಮಾತಾಡಿದ್ದಾರೆ. ತನ್ನ ಕುಟುಂಬಕ್ಕೆ ಆಗಿರೋ ನೋವನ್ನ ತೋಡಿಕೊಂಡಿದ್ದಾರೆ.

publive-image

ಹೌದು, ಚಿಕ್ಕ ವಯಸ್ಸಿಗೆ ಚಂದನ್​ ಶೆಟ್ಟಿ ಅವರ ಕೈಹಿಡಿದ್ರು ನಿವೇದಿತಾ. ಇಬ್ಬರೂ ಸದಾ ಆ್ಯಕ್ಟಿವ್​ ಆಗಿ ಇರ್ತಿದ್ರು. ಜೊತೆಗೆ ರೀಲ್ಸ್, ಸಾಂಗ್​ ಕಾಂಪೋಸ್​, ಸಿನಿಮಾ, ರಿಯಾಲಿಟಿ ಶೋ ಅಂತೆಲ್ಲಾ ಬ್ಯುಸಿ ಇದ್ರು. ಆದ್ರೇ ಇಬ್ಬರ ನಡುವೆ ಹೊಂದಾಣಿಕೆ ಕೊರತೆ ಇದೆ ಅಂತ ಕಳೆದ ವರ್ಷ, 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ರು.

publive-image

ಡಿವೋರ್ಸ್​ ಬಳಿಕ ಇನ್ನಿಲ್ಲದಂತೇ ನಿವೇದಿತಾ ಟೀಕೆಗಳ ಪ್ರಹಾರ ಶುರುವಾದ್ವು. ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಬಾಯ್ಸ್​ ವರ್ಸಸ್​ ಗರ್ಲ್ಸ್​ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ನಟಿ ಕಣ್ಣೀರಿಟ್ಟಿದ್ದಾರೆ. ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ತಂದೆಯೇ ಕಾರಣ. ನಾನು ನಿನ್ನ ಜೊತೆಗೆ ಇದೀನಿ, ತಲೆ ಕೆಡಿಸಿಕೊಳ್ಳಬೇಡ ಅಂತ ಹೇಳ್ತಾರೆ. ಇದು ಅವರಿಗೆ ನಿಜಕ್ಕೂ ಕಷ್ಟ ಎಂದು ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ.

publive-image

ನಾನ್​ ಇದ್ದೀನಿ ಅಂತ ಅಪ್ಪ ಹೇಳಿರೋದ್ರ ಹಿಂದೆ ಸಂಕಟ ಇದೆ. ಆದ್ರೆ ಅದನ್ನ ನನ್ನ ಮುಂದೆ ತೋರಿಸಿಕೊಳ್ಳಲ್ಲ. ನನ್ನ ಬದುಕಿನ ಬಗ್ಗೆ, ಡಿವೋರ್ಸ್​ನಿಂದ ಆಗ್ತಿರೋ ಪರಿಣಾಮದ ಬಗ್ಗೆ ನಿವೇದಿತಾ ತಂದೆ ಚಿಂತಿಸುತ್ತಿದ್ದಾರೆ ಅನ್ನೋದನ್ನ ಸ್ಪಷ್ಟವಾಗಿ ಹೇಳಿದ್ರು, ಇದರಿಂದ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಸೂಕ್ಷ್ಮವಾಗಿಯೇ ತೆರೆದಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment