Advertisment

ಹೊಸ ಅವತಾರ ತಾಳಿದ ನಿವೇದಿತಾ ಗೌಡ; ನೆಟ್ಟಿಗರ ಗಮನ ಇಲ್ಲೆ ಎಲ್ಲೋ..!

author-image
Veena Gangani
Updated On
ಹೊಸ ಅವತಾರ ತಾಳಿದ ನಿವೇದಿತಾ ಗೌಡ; ನೆಟ್ಟಿಗರ ಗಮನ ಇಲ್ಲೆ ಎಲ್ಲೋ..!
Advertisment
  • ಮೈ ಚಳಿ ಬಿಟ್ಟು ಸೀರೆಯಲ್ಲಿ ಮಿರ ಮಿರ ಮಿಂಚಿದ ಬಿಗ್​ಬಾಸ್​ ಬೆಡಗಿ
  • ಬಿಗ್​ಬಾಸ್, ಗಿಚ್ಚಿ ಗಿಲಿಗಿಲಿ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದ ನಿವೇದಿತಾ
  • ಹೊಸ ರೀಲ್ಸ್​ ನೋಡಿ ನಿವಿ ಅಭಿಮಾನಿಗಳ ರಿಯಾಕ್ಷನ್ ಹೇಗಿತ್ತು..?

ಬಿಗ್‌ಬಾಸ್ ಹಾಗೂ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಸಖತ್ ಮಿಂಚಿದ್ದರು. ಅದು ಏನೋ ಗೊತ್ತಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ ರೀಲ್ಸ್ ಎಂದರೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ. ಡಿವೋರ್ಸ್ ನೀಡಿದ ಬಳಿಕವೂ ಹಾಟ್ ಬ್ಯೂಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುತ್ತಾರೆ.

Advertisment

ಇದನ್ನೂ ಓದಿ: ದರ್ಶನ್‌ ಫ್ಯಾನ್ಸ್‌ಗೆ ಬಿಸಿ, ಬಿಸಿ ಕಜ್ಜಾಯ.. ಪೊಲೀಸರ ಲಾಠಿ ಚಾರ್ಜ್‌ಗೆ ಕರಿಯನ ಹುಡುಗರು ಚೆಲ್ಲಾಪಿಲ್ಲಿ!

publive-image

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡು ಆಗಾಗ ಸುದ್ದಿಯಲ್ಲಿ ಇರುತ್ತಿದ್ದರು. ಅದರಲ್ಲೂ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಗಾಯಕ ಚಂದನ್ ಶೆಟ್ಟಿಗೆ ಡಿವೋರ್ಸ್‌ ಕೊಟ್ಟ ಬಳಿಕವಂತೂ ಸಾಕಷ್ಟು ಸದ್ದು ಮಾಡುತ್ತಿದ್ದ ನಿವೇದಿತಾ ಅವರು ಇದೀಗ ಹೊಸ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

Advertisment

ಶೇರ್​ ಮಾಡಿಕೊಂಡ ವಿಡಿಯೋದಲ್ಲಿ ನಿವೇದಿತಾ ಗೌಡ ಅವರು ಗಾಢ ಹಸಿರು ಬಣ್ಣದ ಸೀರೆ ತೊಟ್ಟುಕೊಂಡು ಮಿರ ಮಿರ ಮಿಂಚಿದ್ದಾರೆ. ಅದರಲ್ಲೂ ನಿವೇದಿತಾ ಗೌಡ ಅವರನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನೂ ಕೆಲವರು ಚಂದನ್​ ಶೆಟ್ಟಿಗೆ ಡಿವೋರ್ಸ್‌ ಕೊಟ್ಟಿದಕ್ಕೆ ಬೇಸರ ಹೊರ ಹಾಕಿದ್ದಾರೆ. ನೀವು ಚಂದು ಸರ್​ ಡಿವೋರ್ಸ್‌ ಏಕೆ ಕೊಟ್ರಿ, ನಿಮ್ಮ ಜೋಡಿ ತುಂಬಾ ಚೆನ್ನಾಗಿತ್ತು. ಡಿವೋರ್ಸ್‌ ಕೊಟ್ಟ ಮೇಲೆ ಫುಲ್ ಆಕ್ವೀವ್ ಆಗಿದ್ದೀರಿ ಎಂದು ಕಾಮೆಂಟ್ಸ್​ ಹಾಕಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment