ನಿವೇದಿತಾ ಗೌಡ ಸ್ಟ್ರಾಂಗ್​ ಆಗಿರೋದಕ್ಕೆ ಕಾರಣವೇನು? ಕಣ್ಣೀರು ಹಾಕುತ್ತಲೇ ಏನಂದ್ರು?

author-image
Veena Gangani
Updated On
ಬಿಗ್​ಬಾಸ್​​ ಬೆಡಗಿ ನಿವೇದಿತಾ ಗೌಡ ರೀಲ್ಸ್​, ಡಿವೋರ್ಸ್ ಕಾಂಟ್ರವರ್ಸಿಗೆ ಬೇಸತ್ತಿದ್ಯಾ ಕುಟುಂಬ?
Advertisment
  • ನಾನು ನಿನ್ನ ಜೊತೆಗೆ ಇದೀನಿ, ತಲೆ ಕೆಡಿಸಿಕೊಳ್ಳಬೇಡ ಎಂದಿದ್ದಾರೆ!
  • ನಿವೇದಿತಾ ಮಾತು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಐಶ್ವರ್ಯಾ ಶಿಂಧೋಗಿ
  • ನಿಜಕ್ಕೂ ಕಷ್ಟ ಎಂದು ವೇದಿಕೆ ಮೇಲೆ ನಿವೇದಿತಾ ಗೌಡ ಕಣ್ಣೀರು

ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಶೋವೊಂದರಲ್ಲಿ ತನ್ನ ಜೀವನದಲ್ಲಿ ನಡೆದ ಸಂಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ಅವರೇ ಕಾರಣ ಅಂತ ಹೇಳುತ್ತಾ ನಿವೇದಿತಾ ಭಾವುಕರಾಗಿದ್ದಾರೆ.

publive-image

ಗಾಯಕ ಚಂದನ್ ಶೆಟ್ಟಿ ಜೊತೆಗಿನ ಡಿವೋರ್ಸ್ ಬಳಿಕ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಸ್ಪರ್ಧಿಯಾಗಿ ನಿವೇದಿತಾ ಭಾಗಿಯಾಗಿದ್ದಾರೆ. ಡಿವೋರ್ಸ್ ಆದ್ಮೇಲೆ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮೊದಲ ಭಾರೀಗೆ ಮನಬಿಚ್ಚಿ ಮಾತನಾಡಿದ್ದಾರೆ. ಇನ್ನೂ, ಬಾಯ್ಸ್‌ v/s ಗರ್ಲ್ಸ್‌ ಶೋಗೆ ಅತಿಥಿಗಳಾಗಿ ಅದಿತಿ ಪ್ರಭುದೇವ, ನೆನಪಿರಲಿ ಪ್ರೇಮ್‌ ಅವರು ಬಂದಿದ್ದರು. ಇದೇ ವೇಳೆ ನಿವೇದಿತಾ ಗೌಡ ಹಾಗೂ ಬಿಗ್​ಬಾಸ್​ ಖ್ಯಾತಿಯ ಧನರಾಜ್ ಆಚಾರ್ಯ ಇಬ್ಬರೂ ತಂದೆ-ಮಗಳ ಬಾಂಧವ್ಯದ ಕುರಿತ ಮುಗಿಲು ಬೆಳ್ಮುಗಿಲು ನನ್ನ ಈ ಮಗಳು ಎಂಬ ಹಾಡಿಗೆ ಡ್ಯಾನ್ಸ್​ ಮಾಡಿದ್ದರು.

ಇದನ್ನೂ ಓದಿ: ರಾಮಾಚಾರಿ ಸೀರಿಯಲ್​ ಚಾರು ಸೀರೆ ಮೇಲೆ ಹೆಣ್ಮಕ್ಕಳ ಕಣ್ಣು; ನಟಿ ಮೌನ ಗುಡ್ಡೆಮನೆ ಕಲೆಕ್ಷನ್ ನೋಡಿ!

publive-image

ಈ ಡ್ಯಾನ್ಸ್​ ಬಗ್ಗೆ ಮಾತಾಡಿದ ನಟ ಪ್ರೇಮ್‌, ಪ್ರಪಂಚದಲ್ಲಿ ತಂದೆ ಅನ್ನೋ ಜೀವನೇ ಹಾಗೆ. ವಿಶೇಷವಾಗಿ ಹೆಣ್ಣು ಮಕ್ಕಳು ಏನಾದರೂ ಕೇಳಿದಾಗ ಜೀವ ಬಿಟ್ಟು, ಏನು ಬೇಕಿದ್ರೂ ತಂದುಕೊಡ್ತಾರೆ ಎಂದು ಹೇಳಿದ್ದರು. ಆಗ ನಿವೇದಿತಾ ಗೌಡ ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ತಂದೆಯೇ ಕಾರಣ. ನಾನು ನಿನ್ನ ಜೊತೆಗೆ ಇದೀನಿ, ತಲೆ ಕೆಡಿಸಿಕೊಳ್ಳಬೇಡ ಅಂತ ಹೇಳ್ತಾರೆ. ಇದು ಅವರಿಗೆ ನಿಜಕ್ಕೂ ಕಷ್ಟ ಎಂದು ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ. ಇನ್ನೂ ನಿವೇದಿತಾ ಮಾತು ಕೇಳಿ ಐಶ್ವರ್ಯಾ ಶಿಂಧೋಗಿ, ಅನುಪಮಾ ಗೌಡ, ರಜತ್‌ ಕಿಶನ್​ ಕಣ್ಣಲ್ಲೂ ನೀರು ತುಂಬಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment