ಚಂದನ್​ ಶೆಟ್ಟಿ ಪಕ್ಕದಲ್ಲೇ ಇದ್ರೂ ಐ ಡೋಂಟ್ ಕೇರ್ ಎಂದ ನಿವೇದಿತಾ ಗೌಡ.. ಏನಿದು ಹೊಸ ಟ್ವಿಸ್ಟ್‌?

author-image
Veena Gangani
Updated On
ಚಂದನ್​ ಶೆಟ್ಟಿ ಪಕ್ಕದಲ್ಲೇ ಇದ್ರೂ ಐ ಡೋಂಟ್ ಕೇರ್ ಎಂದ ನಿವೇದಿತಾ ಗೌಡ.. ಏನಿದು ಹೊಸ ಟ್ವಿಸ್ಟ್‌?
Advertisment
  • 9 ತಿಂಗಳ ಬಳಿಕ ಮತ್ತೆ ಮುಖಾಮುಖಿಯಾದ ನಿವೇದಿತಾ ಗೌಡ, ಚಂದನ್ ಶೆಟ್ಟಿ
  • ಸುದ್ದಿಗೋಷ್ಠಿಯಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತಾಡಿದ ನಿವೇದಿತಾ ಗೌಡ
  • ಮಾನವೀಯತೆ ಎಲ್ಲರಲ್ಲೂ ಇರಲ್ಲ ಆದ್ರೆ.. ನಟಿ ನಿವೇದಿತಾ ಗೌಡ ಹೇಳಿದ್ದೇನು?

ಬಿಗ್​ಬಾಸ್​ ಮಾಜಿ ಸ್ಪರ್ಧಿ, ಗಿಚ್ಚಿ ಗಿಲಿಗಿಲಿ ಮೂಲಕ ಸಖತ್ ಫೇಮಸ್​ ಆಗಿದ್ದ ನಿವೇದಿತಾ ಗೌಡ ವಿಚ್ಛೇದನದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿದ್ದಾರೆ. ಸುಮಾರು 9 ತಿಂಗಳ ಬಳಿಕ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮತ್ತೆ ಮುಖಾಮುಖಿಯಾಗಿದ್ದಾರೆ.

ಇದನ್ನೂ ಓದಿ: ತಾಯಿ- ಮಗನ ಬಗ್ಗೆ ಸುಮಲತಾ ಸ್ಪಷ್ಟನೆ; ದರ್ಶನ್ ಅನ್​ಫಾಲೋ ವಿಚಾರಕ್ಕೂ ಉತ್ತರ..!

publive-image

ಹೌದು, ‘ಮುದ್ದು ರಾಕ್ಷಸಿ’ ಚಿತ್ರದಲ್ಲಿ ಚಂದನ್ ಹಾಗೂ ನಿವೇದಿತಾ ಒಟ್ಟಾಗಿ ನಟಿಸಿದ್ದಾರೆ. ವಿಚ್ಛೇದನದ ಬಳಿಕವೂ ಇವರು ಒಟ್ಟಾಗಿ ನಟಿಸುತ್ತಿದ್ದಾರೆ. ಹೀಗಾಗಿ ಇದೇ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್​ಗೆ ಈ ಇಬ್ಬರು ಭಾಗಿಯಾಗಿದ್ದರು. ಇದೇ ಶೂಟಿಂಗ್​ನ ಕೊನೆಯ ಸೀನ್​ನಲ್ಲಿ ನಿವೇದಿತಾ ಗೌಡ ಕಣ್ಣೀರು ಹಾಕಿದ್ದಾರೆ. ಇದನ್ನೇ ನೋಡಿದ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ.

publive-image

ಇನ್ನೂ, ಈ ಚಿತ್ರದ ಶೂಟಿಂಗ್​ ಬಳಿಕ ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಗೌಡ ಕೆಲವು ಟ್ರೋಲ್​ಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದರು. ಮಹಿಳೆಯ ಮೇಲೆ ಬ್ಲೇಮ್ ಗೇಮ್ ನಡೆಯುತ್ತಲೇ ಇರುತ್ತದೆ. ಈ ರೀತಿ ಕೆಟ್ಟದಾಗಿ ಕಮೆಂಟ್ ಮಾಡಬಾರದು ಎಂದು ಅವರಿಗೇ ಅನಿಸಬೇಕು. ಏಕೆಂದರೆ, ಮಾನವೀಯತೆ ಎಲ್ಲರಲ್ಲೂ ಇರಲ್ಲ. ನನ್ನ ಕೆಲಸದ ಮೇಲೆ ಗಮನ ಹರಿಸುತ್ತೇನೆ. ಈ ಮೂಲಕ ನಾನು ಇದರಿಂದ ಓವರ್​ಕಮ್ ಮಾಡುತ್ತೇನೆ. ಯಾರಾದರೂ ನನ್ನ ಬಗ್ಗೆ ಏನಾದರೂ ತಿಳಿದುಕೊಂಡರೆ ಅದು ಅವರ ಪ್ರಾಬ್ಲಂ. ಇದಕ್ಕೆ ನಾನು ಕುಗ್ಗಲ್ಲ. ಏಕೆಂದರೆ ನಾನು ಅಷ್ಟು ವೀಕ್ ಅಲ್ಲ. ನನ್ನ ಕೆಲಸವನ್ನು ಪ್ಯಾಷನೇಟ್ ಆಗಿ ಮಾಡುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment