/newsfirstlive-kannada/media/post_attachments/wp-content/uploads/2024/12/MIR-OSMAN-ALIKHAN.jpg)
ಒಂದು ಕಾಲವಿತ್ತು, ಆಗ ರಾಜ- ಮಹಾರಾಜರು, ನವಾಬರು, ಸಾಮ್ರಾಟರು ಸುಲ್ತಾನರು ದೇಶದ ಹಿತಕ್ಕಾಗಿ ಚಿನ್ನದ ಇಲ್ಲವೇ ಚಿನ್ನದ ನಾಣ್ಯಗಳನ್ನು ದಾನವಾಗಿ ಕೊಡುತ್ತಿದ್ದರು. ಇಂತಹ ಹಲವು ದಾನಗಳು ದೇಶದ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿವೆ. ಅದರಲ್ಲೂ ಹೈದ್ರಾಬಾದ್​ನ 7ನೇ ನಿಜಾಮ ಮೀರ್ ಒಸ್ಮಾನ್ ಅಲಿಖಾನ್​, ದೇಶ ಸಂಕಷ್ಟದಲ್ಲಿದ್ದಾಗ ಮಾಡಿದ ದಾನ ಹಲವು ಬಾರಿ ಚರ್ಚೆಗೆ ಬರುತ್ತಲಿದೆ. ಯುದ್ಧ ಸಮಯದಲ್ಲಿ ಮೀರ್ ಒಸ್ಮಾನ್ ಅಲಿಖಾನ್ ಭಾರತದ ಸರ್ಕಾರಕ್ಕೆ ಸುಮಾರು 5000 ಕೆಜಿ ಬಂಗಾರವನ್ನು ದಾನವಾಗಿ ನೀಡಿ ಆಪತ್ತಿಗೆ ಹೆಗಲಾಗಿದ್ದರು ಎಂಬ ಮಾತುಗಳಿವೆ. ಆದರೆ ಈ ಕಥೆಯ ಹಿಂದಿರುವ ಸತ್ಯವೆಷ್ಟು ಸುಳ್ಳು ಎಷ್ಟು ಅನ್ನೋದು ಹಲವರಿಗೆ ಗೊತ್ತಿಲ್ಲ. ಐದು ಸಾವಿರ ಕೆಜಿ ಚಿನ್ನವನ್ನು ದಾನ ನೀಡುವುದು ಅಂದ್ರೆ ನಂಬಲು ಕಷ್ಟವಾದ ಮಾತು. ಹೀಗಾಗಿ ಈ ಗಾಳಿ ಮಾತಿನ ಹಿಂದೆ ಎಷ್ಟು ಸತ್ಯ ಎಷ್ಟು ಸುಳ್ಳು ಅಡಗಿದೆ ಎಂಬುದನ್ನು ನಾವು ಈ ಲೇಖನದಲ್ಲಿ ನಿಮಗೆ ಹೇಳುತ್ತೇವೆ.
ಇದನ್ನೂ ಓದಿ: 10 ಪತ್ನಿಯರು, 350 ಪ್ರೇಯಸಿಯರು, 88 ಮಕ್ಕಳು; ರಸಿಕತೆಯನ್ನೇ ಉಸಿರಾಡಿದ ಆ ರಾಜ ಯಾರು ಗೊತ್ತಾ?
ಒಂದಂತೂ ಸತ್ಯ, ಹೈದ್ರಾಬಾದ್​ನ ನಿಜಾಮ ಮೀರ್ ಒಸ್ಮಾನ್ ಅಲಿಖಾನ್​ ಬಳಿ ಭಾರೀ ಸಂಪತ್ತು ಇತ್ತು. ನಿಜಾಮನ ಬಳಿ ಬಂಗಾರವೆಂಬುದು ದಂಡಿ ದಂಡಿಯಾಗಿ ದಾಸ್ತಾನುವಿನಲ್ಲಿ ಬಿದ್ದಿತ್ತು. ವಜ್ರ ಮುತ್ತು ಹವಳಗಳ ಬಂಢಾರವೇ ಇತ್ತು. ಇದು ಆ ನಿಜಾಮ ದೇಶಕ್ಕೆ 5 ಸಾವಿರ ಕಿಲೋ ಗ್ರಾಂ ಚಿನ್ನವನ್ನು ದೇಶಕ್ಕಾಗಿ ನೀಡಿದ ಎಂಬುದು ಸತ್ಯ ಎನ್ನುವುದಕ್ಕೆ ಪುಷ್ಠಿ ಕೊಡುತ್ತದೆ. ಆದ್ರೆ ಈ ಕಥೆಯ ಹಿಂದೆ ಬೇರೆಯದ್ದೇ ಸತ್ಯವಿದೆ.
/newsfirstlive-kannada/media/post_attachments/wp-content/uploads/2024/12/MIR-OSMAN-ALIKHAN-1.jpg)
ಅದು 1965, ಯುದ್ಧದ ಸಮಯ. ಭಾರತ-ಪಾಕ್​ ಗಡಿಯಲ್ಲಿ ಗುಂಡಿನ ಮೊರೆತ ಜೋರಾಗಿತ್ತು. ಎರಡು ಪಡೆಗಳು ರಣರಂಗದಲ್ಲಿ ಹಸಿದ ಸಿಂಹಗಳಂತೆ ಕಾದಾಡುತ್ತಿದ್ವು. ಇದೇ ಸಮಯದಲ್ಲಿ ಅಂದಿನ ಭಾರತದ ಪ್ರಧಾನಿ ಲಾಲ್ ಬಾಹದ್ದೂರ್ ಶಾಸ್ತ್ರೀಯವರು ಸಾರ್ವಜನಿಕರಲ್ಲಿ ಸೇನೆಗಾಗಿ ದೇಣಿಗೆ ಬೇಡಿದರು. ದೇಶದಿಂದ ನೆರವು ಹರಿದು ಬಂತು. ಇದೇ ಸಮಯದಲ್ಲಿ ಶಾಸ್ತ್ರೀಜೀಯವರು ಮೀರ್ ಒಸ್ಮಾನ್ ಅಲಿಖಾನ್​ರನ್ನು ಭೇಟಿಯಾಗಿದ್ದರು. ಈ ಒಂದು ಭೇಟಿ ಅನೇಕ ಗಾಳಿ ಸುದ್ದಿಗೆ ಕಾರಣವಾಯ್ತು. ಶಾಸ್ತ್ರೀಯವರು ಮೀರ್ ಒಸ್ಮಾನ್ ಅಲಿಖಾನ್ ಬಳಿ ದೇಣಿಗೆ ಬೇಡಿದ್ದರಿಂದ ಹೈದ್ರಾಬಾದ್​ ನಿಜಾಮ ಸುಮಾರು 5 ಸಾವಿರ ಕೆಜಿಯಷ್ಟು ಚಿನ್ನವನ್ನು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದ್ದಾರೆ ಎಂದು ಹೇಳಲಾಯ್ತು. ಇತ್ತೀಚೆಗೆ ಅಂದ್ರೆ, 2020ರಲ್ಲಿ ಒಸ್ಮಾನ್​ನ ಮೊಮ್ಮಗ ನವಾಬ್ ನಜಫ್ ಅಲಿ ಖಾನ್​ ಕೂಡ ಇದನ್ನು ದೃಢಪಡಿಸಿದ್ದರು. ಈ ಒಂದು ಕಥೆಯ 50-60 ವರ್ಷಗಳಿಂದ ಹೀಗೆಯೇ ಸಾಗಿ ಬಂತು. ಆದ್ರೆ ಪೂರ್ಣ ಸತ್ಯ ಯಾರಿಗೂ ಗೊತ್ತಾಗಲೇ ಇಲ್ಲ.
ಇದನ್ನೂ ಓದಿ:‘ಕೆಂಪುಕೋಟೆ ನಮಗೆ ಬಿಟ್ಟು ಕೊಡಬೇಕು’- ಹೈಕೋರ್ಟ್‌ನಲ್ಲಿ ಮೊಘಲ್ ವಂಶಸ್ಥರ ಅರ್ಜಿ; ಏನಿದು ವಿವಾದ?
ಹೈದ್ರಾಬಾದ್​ನ 7 ನಿಜಾಮ ಅಂದು ಚಿನ್ನವನ್ನು ಕೊಟ್ಟಿದ್ದು ನಿಜ ಆದ್ರೆ ಅದು ದೇಣಿಗೆಯಾಗಿ ಅಲ್ಲ, ಅದರ ಬದಲು ಅವರು ರಾಷ್ಟ್ರೀಯ ರಕ್ಷಣಾ ಚಿನ್ನದ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರು. ಆದ್ರೆ 5000 ಕೆಜಿಯಲ್ಲ ಸುಮಾರು 425 ಕೆಜಿಯಷ್ಟು ಬಂಗಾರವನ್ನು ಹೂಡಿಕೆ ಮಾಡಿದ್ದರು ಅದು ಕೂಡ ಶೇಕಡಾ 6.5 ರಷ್ಟು ಬಡ್ಡಿ ನೀಡಬೇಕು ಎಂಬ ಷರತ್ತಿನ ಮೇಲೆ. ಈ ಒಂದು ಅಂಶ ಇತ್ತೀಚಿಗೆ ಮಾಹಿತಿ ಹಕ್ಕಿನಿಂದ ಪಡೆದುಕೊಂಡ ದಾಖಲೆಯಲ್ಲಿ ಗೊತ್ತಾಗಿದೆ.
ಮೀರ್ ಓಸ್ಮಾನ್ ಅಲಿಖಾನ್​ರನ್ನು ಭಾರತದ ಮೊದಲ ಬಿಲಿಯೆನೀಯರ್ ಎಂದು ಕರೆಯಲಾಗುತ್ತದೆ. ಯಾಕಂದ್ರೆ ಅಂದಿನ ಕಾಲದಲ್ಲಿ ಆ ನಿಜಾಮನ ಬಳಿ ಅಷ್ಟೊಂದು ಸಂಪತ್ತು ಇತ್ತು. ಅದು ಯಾವ ಪ್ರಮಾಣದಷ್ಟು ಅಂದರೆ ಯುನೈಟೆಡ್ ಸ್ಟೇಟ್​ ಶೇಕಡಾ 2 ರಷ್ಟು ಜಿಡಿಪಿಯ ಸಂಪತ್ತು ಈ ಒಬ್ಬ ನಿಜಾಮನ ಬಳಿ ಇತ್ತು ಅಂತ 1937ರಲ್ಲಿ ಟೈಮ್ಸ್​ ಮ್ಯಾಗ್ಜಿನ್ ವರದಿ ನೀಡಿತ್ತು. ಆದ್ರೆ ಆತನಿಂದ ಭಾರತ ಸರ್ಕಾರಕ್ಕೆ ಬಂದಿದ್ದು ದೇಣಿಗೆಯಲ್ಲ ಅದೊಂದು ಹೂಡಿಕೆ ಅದು ಕೂಡ 425 ಕೆಜಿ ಬಂಗಾರದಷ್ಟು ಎಂಬುದು ಈಗ ಸ್ಪಷ್ಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us