ತನ್ನದೇ ಸ್ವಂತ ರೈಲು ಹೊಂದಿದ ಭಾರತದ ಏಕೈಕ ವ್ಯಕ್ತಿ ಈತ! ರೈಲ್ವೆ ಇಲಾಖೆಯ ಒಂದು ತಪ್ಪಿನಿಂದಾದ ಯಡವಟ್ಟು ಏನು?

author-image
Gopal Kulkarni
Updated On
ತನ್ನದೇ ಸ್ವಂತ ರೈಲು ಹೊಂದಿದ ಭಾರತದ ಏಕೈಕ ವ್ಯಕ್ತಿ ಈತ! ರೈಲ್ವೆ ಇಲಾಖೆಯ ಒಂದು ತಪ್ಪಿನಿಂದಾದ ಯಡವಟ್ಟು ಏನು?
Advertisment
  • ಪಂಜಾಬ್​​ನ ಸಾಧಾರಣ ರೈತನೊಬ್ಬ ಒಂದು ರೈಲಿನ ಮಾಲೀಕನಾಗಿದ್ದು ಹೇಗೆ?
  • ಸ್ವರ್ಣ ಶತಾಬ್ದಿಯ ಇಡೀ ರೈಲು ರೈತನ ಮಾಲೀಕತ್ವದ ವಶಕ್ಕೆ ಹೋಗಿದ್ದು ಯಾಕೆ?
  • ಮೋಸದಿಂದ ಪಡೆದ ಮಾಲೀಕತ್ವವಲ್ಲ, ಕೋರ್ಟ್​ ಮೂಲಕ ಬಂತು ಸ್ವಂತ ರೈಲು

ಒಬ್ಬ ವ್ಯಕ್ತಿ ತನ್ನದೇ ಆದ ವೈಯಕ್ತಿಕ ಟ್ರೈನ್ ಹೊಂದಿರುವ ಬಗ್ಗೆ ನೀವು ಹಿಂದೆ ಎಲ್ಲಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ. ಭಾರತದ ಪ್ರತಿ ರೈಲುಗಳ ಮೇಲೆ ಭಾರತ ಸರ್ಕಾರದ್ದು ಮಾತ್ರ ಮಾಲೀಕತ್ವ ಇದೆ. ಆದರೆ ರೈಲ್ವೆ ಇಲಾಖೆಯ ಒಂದೇ ಒಂದು ಯಡವಟ್ಟಿನಿಂದಾಗಿ ವ್ಯಕ್ತಿಯೊಬ್ಬ ತನ್ನದೇ ಒಂದು ವೈಯಕ್ತಿಕ ಟ್ರೈನ್ ಹೊಂದುವ ಅದೃಷ್ಟ ಖುಲಾಯಿಸಿದೆ. ಇವರು ಸ್ವಂತದೊಂದು ರೈಲು ಹೊಂದಿರುವ ಭಾರತದ ಏಕೈಕ ವ್ಯಕ್ತಿ ಹೆಸರು ಸಂಪೂರಣ್ ಸಿಂಗ್. ಆದರೆ ಯಾವುದೋ ಮೋಸ ವಂಚನೆ ಮಾಡಿ ಈ ರೀತಿಯಾಗಿ ಇವರು ವೈಯಕ್ತಿಕವಾಗಿ ಸ್ವಂತ ರೈಲು ಹೊಂದಿಲ್ಲ. ಇದು ಕಾನೂನಾತ್ಮಕವಾಗಿ ಪಡೆದುಕೊಂಡಿರುವ ಹಾಗೂ ರೈಲ್ವೆ ಇಲಾಖೆಯ ತಪ್ಪಿನಿಂದಾಗಿ ಈ ವ್ಯಕ್ತಿ ಇಡೀ ಒಂದು ರೈಲಿನ ಮಾಲೀಕನಾಗಲು ಸಾಧ್ಯವಾಗಿದೆ.

ಇದನ್ನೂ ಓದಿ:ಯಾವ ರಾಜ್ಯಗಳು ಅತ್ಯಂತ ದುಬಾರಿ ಸೀರೆಗಳನ್ನು ಉತ್ಪಾದಿಸುತ್ತವೆ? ಇಲ್ಲಿದೆ ಅಪರೂಪದ ಮಾಹಿತಿ

ಸಂಪೂರ್ಣ ಸಿಂಗ್​ ಪಂಜಾಬ್​ನ ಲುದಿಯಾನಾದ ಕಟನಾ ಎಂಬ ಗ್ರಾಮ ಸಾಮಾನ್ಯ ರೈತ. ಈಗ ಒಂದು ರೈಲಿನ ಮಾಲೀಕನಾಗಿ ಬದಲಾಗಿದ್ದಾರೆ. ಆದರೆ ಆ ಮಾಲೀಕತ್ವ ಕೆಲವು ಗಂಟೆಗಳಿಗಾಗಿ ಮಾತ್ರ ಸಿಮೀತವಾಗಿತ್ತು. 2007ರಲ್ಲಿ ಭಾರತೀಯ ರೈಲ್ವೆ ಇಲಾಖೆ ಲುದಿಯಾನಾದಿಂದ ಚಂಡಿಗಢಕ್ಕೆ ರೈಲು ಮಾರ್ಗ ನಿರ್ಮಾಣಕ್ಕಾಗಿ ರೈತರಿಂದ ಜಮೀನು ಪಡೆದಿತ್ತು. ಇದರಲ್ಲಿ ಸಂಪೂರ್ಣ ಸಿಂಗ್ ಅವರ ಜಮೀನು ಕೂಡ ಇತ್ತು. ಸಂಪೂರ್ಣ ಸಿಂಗ್ ಅವರ ಜಮೀನನ್ನು ಎಕರೆಗೆ 25 ಲಕ್ಷ ರೂಪಾಯಿ ನೀಡುವುದಾಗಿ ರೈಲ್ವೆ ಇಲಾಖೆ ಹೇಳಿ ಈತನ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಂಡಿತ್ತು.

ಆದರೆ ಕೆಲವು ದಿನಗಳ ನಂತರ ಸಂಪೂರ್ಣ ಸಿಂಗ್​ ಅವರಿಗೆ ತಿಳಿದು ಬಂದ ವಿಷಯ ಅಂದ್ರೆ. ತನ್ನಷ್ಟೇ ಪ್ರಮಾಣದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಪಕ್ಕದ ಗ್ರಾಮದ ರೈತನನಿಗೆ ರೈಲ್ವೆ ಇಲಾಖೆ 71 ಲಕ್ಷ ರೂಪಾಯಿ ನೀಡಿತ್ತು. ರೈಲ್ವೆ ಇಲಾಖೆಯ ಈ ದ್ವಂದ್ವನೀತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು ಸಂಪೂರ್ಣ ಸಿಂಗ್​. ನ್ಯಾಯಾಲಯ ಪರಿಹಾರದ ಮೊತ್ತವನ್ನು 25 ಲಕ್ಷ ರೂಪಾಯಿಂದ 50 ಲಕ್ಷ ರೂಪಾಯಿಗೆ ಹೆಚ್ಚಿಸುವಂತೆ ಸೂಚಿಸಿತ್ತು. ನಂತರ ಅದರ ಮೊತ್ತವನ್ನು 1.47 ಕೋಟಿಗೆ ಏರಿಸಲಾಯ್ತು.

publive-image

ಉತ್ತರ ರೈಲ್ವೆ ವಿಭಾಗಕ್ಕೆ ನ್ಯಾಯಾಲಾಯ 2015ರಲ್ಲಿ ಹಣವನ್ನು ನೀಡುವಂತೆ ಆದೇಶ ನೀಡಿತ್ತು. ಆದರೆ ರೈಲ್ವೆ ಇಲಾಖೆ ನ್ಯಾಯಾಲಯದ ಆದೇಶವನ್ನು ಮೀರಿ ಸಂಪೂರ್ಣ ಸಿಂಗ್​​ಗೆ ಕೇವಲ 42 ಲಕ್ಷ ರೂಪಾಯಿ ನೀಡಿ ಬಾಕಿ ಮೊತ್ತ 1.05 ಕೋಟಿ ರೂಪಾಯಿಯನ್ನು ನಂತರ ನೀಡುವುದಾಗಿ ಹೇಳಿತು. ಇದಾದ ಬಳಿಕ ಮತ್ತೆ ನ್ಯಾಯಾಲಯದ ಮೆಟ್ಟಿ ಏರಿದ ಸಂಪೂರ್ಣ ಸಿಂಗ್​​ಗೆ ನ್ಯಾಯಾಧೀಶ ಜಸ್ಪಾಲ್ ವರ್ಮಾ ಅವರು ಲುಧಿಯಾನಾ ರೈಲ್ವೆ ಸ್ಟೇಷನ್​ನಲ್ಲಿರುವ ಟ್ರೈನ್​ನನ್ನು ವಶಕ್ಕೆ ಪಡೆಯಲು ಆದೇಶ ನೀಡಿತು. ಇವರ ಜೊತೆಗೆ ಸ್ಟೇಷನ್ ಮಾಸ್ಟರ್​ ಕೂಡ ಅದೇ ಆದೇಶ ನೀಡಿದ.

ಇದನ್ನೂ ಓದಿ:ಶತಾಬ್ದಿಯೂ ಅಲ್ಲ, ವಂದೇ ಭಾರತ್ ಅಲ್ಲ.. ಭಾರತದಲ್ಲಿಯೇ ಅತಿಹೆಚ್ಚು ಆದಾಯ ಗಳಿಸುವ ಟ್ರೈನ್​​ಗಳು ಇವು

ಕೋರ್ಟ್ ಆದೇಶ ಬಂದಿದ್ದೇ ತಡ ಸಂಪೂರ್ಣ ಸಿಂಗ್ ಲುಧಿಯಾನಾ ರೈಲು ನಿಲ್ದಾಣಕ್ಕೆ ಬಂದು ಅಮೃತ್​ಸರ ಸ್ವರ್ಣ ಶತಾಬ್ದಿಯನ್ನು ವಶಕ್ಕೆ ಪಡೆದುಕೊಂಡು ನಾನು ಇದರ ಮಾಲೀಕ ಎಂದು ಘೋಷಿಸಿಕೊಂಡ. ಕೆಲವು ಗಂಟೆಗಳ ನಂತರ ಸೆಕ್ಷನ್ ಇಂಜನೀಯರ್​ ನ್ಯಾಯಾಲಯದ ಸಹಾಯದಿಂದ ಟ್ರೈನ್​ನನ್ನು ಬಿಡುಗಡೆಗೊಳಿಸಿಕೊಂಡರು. ಆದರೂ ಕೂಡ ಇಂದಿಗೂ ಈ ಒಂದು ಕೇಸ್​ ತಾರ್ಕಿಕ ಅಂತ್ಯ ಕಂಡಿಲ್ಲ. ಅಮೃತ್​ಸರ ಸ್ವರ್ಣ ಶತಾಬ್ದಿ ಎಕ್ಸ್​ಪ್ರೆಸ್​ ಯಾರ ಮಾಲೀಕತ್ವಕ್ಕೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕಾರಣ ಇಂದಿಗೂ ಆ ಕೇಸ್ ಕೋರ್ಟ್​ನಲ್ಲಿ ಪೆಂಡಿಂಗ್ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment