/newsfirstlive-kannada/media/post_attachments/wp-content/uploads/2024/12/CT-RAVI-1.jpg)
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಜೆಪಿ ಎಂಎಲ್​ಸಿ ಸಿ.ಟಿ ರವಿಯವರ ಅಶ್ಲೀಲ ಹೇಳಿಕೆ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಸಚಿವೆಗೆ ನಿಂದನೆ ಮಾಡಿದ್ದಕ್ಕೆ ಸಿ.ಟಿ.ರವಿ ಅರೆಸ್ಟ್​ ಆಗಿದ್ರು. ಆದ್ರೆ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಸಚಿವೆಯ ಬೆಂಗಲಿಗರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಇದು ಪೊಲೀಸರ ಮೇಲೆ ಸಂಶಯ ಮೂಡವಂತೆ ಮಾಡಿದೆ. ಇದರ ಜೊತೆಗೆ ರಾಜಕೀಯ ಕೆಸರೆರಚಾಟವೂ ಜೋರಾಗಿದೆ.
ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದವರ ಮೇಲಿಲ್ಲ ಕ್ರಮ
ಚಳಿಗಾಲ ಅಧಿವೇಶನದ ಕೊನೆ ದಿನ ಸುವರ್ಣಸೌಧದಲ್ಲಿ ಭಾರೀ ನಾಟಕೀಯ ಬೆಳವಣಿಗೆಗಳು ನಡೆದಿದ್ದವು. ಸಚಿವೆ ಹೆಬ್ಬಾಳ್ಕರ್​ಗೆ ಅಶ್ಲೀಲ ಪದ ಬಳಿಸಿದ್ದಕ್ಕೆ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಅದು ಬೇರೆಲ್ಲೂ ಅಲ್ಲ, ಅದು ಸುವರ್ಣಸೌಧದ ಒಳಗೆ. ಇದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆ ನಡೆದು ಮೂರು ದಿನವಾದ್ರೂ, ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದವರ ಮೇಲೆ ಯಾವುದೇ ಕ್ರಮ ಆಗದಿರುವುದು ಬೆಳಗಾವಿ ಪೊಲೀಸರ ನಡೆ ಬಗ್ಗೆ ಅನುಮಾನ ಹುಟ್ಟಿಸಿದೆ.
ಎಂಎಲ್​ಸಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ ಸಚಿವೆ ಹೆಬ್ಬಾಳ್ಕರ್​ ಆಪ್ತ ರಾಜಾರೋಷವಾಗಿ ಓಡಾಡ್ತಿದ್ದಾನೆ. ನಿನ್ನೆ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲೂ ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ. ಗುರುವಾರ ನಡೆದ ಘಟನೆ ಬಗ್ಗೆ ಸಿ.ಟಿ ರವಿ ಹಿರೇಬಾಗೇವಾಡಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕೂಡ ದೂರು ಸ್ವೀಕೃತ ಪತ್ರ ನೀಡಿದ್ದಾರೆ. ಆದ್ರೆ, ಇದುವರೆಗೂ ಮಾತ್ರ ಎಫ್​ಐಆರ್​ನೂ ಹಾಕಿಲ್ಲ. ಯಾರ ವಿರುದ್ಧವೂ ಕ್ರಮಕೈಗೊಂಡಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತರು ಎಂಬ ಕಾರಣಕ್ಕೆ ಕ್ರಮಕೈಗೊಳ್ಳಲು ಪೊಲೀಸರು ಹಿಂದೇಟು ಹಾಕ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಗಾವಿಯಿಂದ ಬದುಕಿ ಬಂದಿದ್ದೇ ಹೆಚ್ಚು ಎಂಬ ಪ್ರಭಾವಿ ಸಚಿವರೊಬ್ಬರ​ ಹೇಳಿಕೆಗೆ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ. ಹಮ್ಮುರಾಬಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು ಮಾತ್ರ ಕೊಲೆ ಮಾಡೋ ಕೆಲ್ಸ ಮಾಡ್ತಾರೆ ಎಂದು ಸಿಎಂ, ಡಿಸಿಎಂಗೆ ಪರೋಕ್ಷ ಟಾಂಗ್​ ಕೊಟ್ಟಿದ್ದಾರೆ. ಇನ್ನು ಬೆಳಗಾವಿ ಪೊಲೀಸರಿಗೆ ನಿಗೂಢ ವ್ಯಕ್ತಿಯಿಂದ ಡೈರಕ್ಷನ್​ ಬರ್ತಿತ್ತು. ಹೀಗಾಗಿ ಪೊಲೀಸರ ಕಾಲ್​ ರೆಕಾರ್ಡ್​ ಚೆಕ್​ ಮಾಡಿ ಎಂದು ಸಿ.ಟಿ ರವಿ ಆಗ್ರಹಿಸಿದ್ದಾರೆ.
ಸಿ.ಟಿ ರವಿಗೆ ಸಿಎಂ ಸಿದ್ದರಾಮಯ್ಯ ಕೌಂಟರ್​​
ರಿಲೀಸ್​ ಬಳಿಕ ಸರ್ಕಾರದ ವಿರುದ್ಧ ಮುಗಿ ಬೀಳ್ತಿರುವ ಸಿ.ಟಿ ರವಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸಿಟಿ ರವಿ ಅವಾಚ್ಯ ಶಬ್ದ ಬಳಸಿದ್ದು ಅದಕ್ಕೆ ಸಾಕ್ಷಿ ಇದೆ ಎಂದಿದ್ದಾರೆ. ಇನ್ನು ಮಾಜಿ ಸಂಸದ ಡಿ.ಕೆ ಸುರೇಶ್​, ಇದೇನಾ ಆರ್​ಎಸ್​ಎಸ್​ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಪರಿಷತ್​ನಲ್ಲಿ ಸಿ.ಟಿ ರವಿ ಆಡಿದ ಆ ಮಾತು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ರೆ. ಇತ್ತ ಸಿ.ಟಿ ರವಿ ಪತ್ನಿ ಸಮೇತ ಟೆಂಪಲ್​ ರನ್​ ಮಾಡ್ತಿದ್ದಾರೆ. ತಮ್ಮ ಮನೆಯ ಸಮೀಪದಲ್ಲೇ ಇರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಪತ್ನಿ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us