/newsfirstlive-kannada/media/post_attachments/wp-content/uploads/2024/10/Team-India-Dube.jpg)
ಟೀಮ್ ಇಂಡಿಯಾದಲ್ಲಿ ಡೆಡ್ಲಿ ಫಾಸ್ಟ್ ಬೌಲರ್ಗಳಿದ್ದಾರೆ. ಇವರ ವಯಸ್ಸು ತಂಡಕ್ಕೆ ಮಾರಕವಾಗ್ತಿದೆ. ಪ್ರತಿ ಸರಣಿಯಲ್ಲೂ ಒಬ್ಬರಲ್ಲ, ಒಬ್ಬರು ಇಂಜುರಿ ಆಗ್ತಿದ್ದಾರೆ. ಇದು ಟೀಮ್ ಇಂಡಿಯಾಗೆ ಸೆಟ್ ಬ್ಯಾಕ್ ಆಗ್ತಿದೆ.
ಇದೇ ಕಾರಣಕ್ಕೆ ಬಿಸಿಸಿಐ, ವರ್ಷದ ಹಿಂದೆಯೇ ಮೆಗಾ ಪ್ಲಾನ್ ರೂಪಿಸಿತ್ತು. 6 ಯಂಗ್ ಫಾಸ್ಟ್ ಬೌಲರ್ಗಳ ರೆಡಿ ಮಾಡಿ, ಸ್ಪೆಷಲ್ ಕಾಟ್ರಾಕ್ಟ್ನ ನೀಡಿತ್ತು. ಯುವ ವೇಗಿಗಳನ್ನು ಬೆಳೆಸುವುದು, ಟೀಮ್ ಇಂಡಿಯಾದ ಬೌಲಿಂಗ್ ಬೆಂಚ್ ಸ್ಟ್ರೆಂಥ್ ಹೆಚ್ಚಿದೋದು ಇದ್ರ ಹಿಂದಿನ ಉದ್ದೇಶವಾಗಿತ್ತು.
ಟೀಮ್ ಇಂಡಿಯಾಗೆ ಲಾಭ?
2024ರ ಫೆಬ್ರವರಿಯಲ್ಲಿ ಬಿಸಿಸಿಐ, ಫಾಸ್ಟ್ ಬೌಲಿಂಗ್ ಕಾಟ್ರಾಕ್ಟ್ ಜಾರಿ ಮಾಡ್ತು. ಈ ಸ್ಪೆಷಲ್ ಕಾಟ್ರಾಕ್ಟ್ನ ಅಡಿ ಜಮ್ಮು ಕಾಶ್ಮೀರದ ಉಮ್ರಾನ್ ಮಲಿಕ್, ಪಶ್ಚಿಮ ಬಂಗಾಳದ ಆಕಾಶ್ ದೀಪ್, ಕರ್ನಾಟಕದ ವೈಶಾಕ್ ವಿಜಯ್ ಕುಮಾರ್, ವಿದ್ವತ್ ಕಾವೇರಪ್ಪ, ಉತ್ತರ ಪ್ರದೇಶದ ಯಶ್ ದಯಾಳ್, ಡೆಲ್ಲಿಯ ಮಯಾಂಕ್ ಯಾದವ್ನ ಬೆಳೆಸಲು ಮುಂದಾಗಿತ್ತು. ಈ 6 ಮಂದಿಯಲ್ಲಿ ಟೀಮ್ ಇಂಡಿಯಾಗೆ ಉಪಯೋಗಿಯಾಗಿದ್ದು ಆಕಾಶ್ ದೀಪ್ ಮಾತ್ರ.
ಇದನ್ನೂ ಓದಿ:ರಜತ್- ಮಾಜಿ ಗೆಳತಿ ಫೋಟೋ ಇಟ್ಕೊಂಡು ವಸೂಲಿಗಿಳಿದ ಟ್ರೋಲರ್ಸ್.. ಫಿನಾಲೆ ವೇಳೆ ಹೊಸ ತಲೆನೋವು
ವೇಗಿ ಆಕಾಶ್ ದೀಪ್ ಹೊರತುಪಡಿಸಿದ್ರೆ ಈ ಸ್ಪೆಷಲ್ ಕಾಟ್ರಾಕ್ಟ್ನಿಂದ ಟೀಮ್ ಇಂಡಿಯಾಗೆ ಆಗಿದ್ದೇನಿಲ್ಲ. 2024ರ ಇಂಗ್ಲೆಂಡ್ ಸಿರೀಸ್ನಲ್ಲಿ ಡೆಬ್ಯು ಮಾಡಿದ ಆಕಾಶ್ ದೀಪ್, ರೆಗ್ಯೂಲರ್ ಆಗಿ ಟೆಸ್ಟ್ ಟೀಮ್ನಲ್ಲಿ ಉಳಿದುಕೊಂಡಿದ್ದಾರೆ. ಆಕಾಶ್ ದೀಪ್ ಬಿಟ್ರೆ, ಇನ್ನುಳಿದ ಐವರಲ್ಲಿ ಮೂವರು ಇಂಜುರಿಯಲ್ಲೇ ವರ್ಷ ಕಳೆದಿದ್ದಾರೆ.
ಎನ್ಸಿಎಗೆ ಹೊರೆ..!
ಈ ಸ್ಪೆಷಲ್ ಕಾಟ್ರಾಕ್ಟ್ನಿಂದ ಟೀಮ್ ಇಂಡಿಯಾಗೆ ಏನಾಯ್ತೋ..? ಏನೋ..? ಗೊತ್ತಿಲ್ಲ. ಎನ್ಸಿಎಗೆ ಮಾತ್ರ ವರ್ಕ್ಲೋಡ್ ಹೆಚ್ಚಾಯ್ತು.. ಪೇಸ್ ಸೆನ್ಸೇಷನ್ ಮಯಾಂಕ್ ಯಾದವ್ ಡೆಬ್ಯು ಮಾಡಿ ಬೌಲಿಂಗ್ ಮಾಡಿದ್ದಕ್ಕಿಂತ, ಇಂಜುರಿಗಳಿಂದ ಹೆಚ್ಚು ಪರದಾಡಿದ್ರು. ಇದರಿಂದ 150ರ ವೇಗದಲ್ಲಿ ಬೌಲಿಂಗ್ ಮಾಡ್ತಾನೆ, ಟೀಮ್ ಇಂಡಿಯಾಗೆ ಫ್ಯೂಚರ್ ಆಗ್ತಾನೆ ಎಂಬ ಕನಸಿನಲ್ಲಿದ್ದ ಬಿಸಿಸಿಐ ಕನಸು ಭಗ್ನವಾಯ್ತು.
ಮಯಾಂಕ್ ಯಾದವ್ ಮಾತ್ರವಲ್ಲ, ಉಮ್ರಾನ್ ಮಲಿಕ್ ಕಥೆಯೂ ಇದೆ. ಐಪಿಎಲ್ ವೇಳೆ ಫಿಟ್ ಇದ್ದ ಮಲಿಕ್, ನಂತರ ಬ್ಯಾಕ್ ಟು ಬ್ಯಾಕ್ ಇಂಜುರಿಗಳಿಂದ ನರಳಿದ್ದಾರೆ. ಟೀಮ್ ಇಂಡಿಯಾ ಆಯ್ಕೆಯಾಗಿದ್ದ ಯಶ್ ದಯಾಳ್, ಡೆಬ್ಯೂಗೂ ಮುನ್ನವೇ ಇಂಜುರಿಯಾಗಿ ಎನ್ಸಿಎನಲ್ಲೇ ಕಾಲಕಳೆಯುವಂತಾಗಿದೆ.
ಇದನ್ನೂ ಓದಿ:ಅಧ್ಯಕ್ಷರಾದ ಮೇಲೆ ಮೊದಲ ಭೇಟಿಯೇ ಭಾರತ, ಚೀನಾ.. ಟ್ರಂಪ್ ನಿರ್ಧಾರದ ಹಿಂದಿದೆ ರಹಸ್ಯ ಕಾರಣ..
ಎಲ್ಲಿದ್ದಾರೆ ವೈಶಾಕ್, ವಿದ್ವತ್ ಕಾವೇರಪ್ಪ..?
6 ಮಂದಿಯಲ್ಲಿ ಇಂಜುರಿ ಫ್ರೀ ಅಂದ್ರೆ, ಅದು ಒನ್ ಆ್ಯಂಡ್ ಒನ್ಲಿ ವೈಶಾಕ್ ವಿಜಯ್ ಕುಮಾರ್ ಮಾತ್ರ. ಕರ್ನಾಟಕದ ಇನ್ನೊಬ್ಬ ವೇಗಿ ವಿದ್ವತ್ ಕಾವೇರಪ್ಪ ಕೂಡ ಇಂಜುರಿಗೆ ತುತ್ತಾಗಿ ಮೈದಾನದಿಂದ ದೂರ ಉಳಿದಿದ್ದಾರೆ. ಫಿಟ್ ಇರೋ ವೈಶಾಕ್ ವಿಜಯ್ ಕುಮಾರ್ನ ಸೌತ್ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಿದ್ರು. ಅವಕಾಶ ಸಿಗಲಿಲ್ಲ.
ಬಿಸಿಸಿಐ ಭವಿಷ್ಯದ ಮೆಗಾ ಪ್ಲಾನ್
ಟೀಮ್ ಇಂಡಿಯಾ ಫಾಸ್ಟ್ ಬೌಲಿಂಗ್ ಯುನಿಟ್ಗೆ ವಯಸ್ಸಾಗ್ತಿದೆ. ಫಾಸ್ಟ್ ಬೌಲಿಂಗ್ ಡಿಪಾರ್ಟ್ಮೆಂಟ್ ಬದಲಾವಣೆಯ ಹಂತದಲ್ಲಿದೆ. ಈ ಕಾರಣಕ್ಕೆ ಭವಿಷ್ಯದ ಬೌಲಿಂಗ್ ಲೈನ್ ಅಪ್ ಕಟ್ಟಬೇಕೆಂಬ ದೂರದೃಷ್ಟಿಯಿಂದ ಬಿಸಿಸಿಐ, ಪ್ರತಿಭಾನ್ವಿತ ಯುವ ಬೌಲರ್ಗಳನ್ನ ಪರ್ಯಾಯವಾಗಿ ಬೆಳೆಸಲು ಮಹತ್ವದ ಹೆಜ್ಜೆ ಇಟ್ಟಿತ್ತು. ಬಿಸಿಸಿಐನ ಈ ಮೆಗಾ ಪ್ಲಾನ್, ಆರಂಭಿಕ ವರ್ಷದಲ್ಲೇ ಮಕಾಡೆ ಮಲಗಿದೆ. ಈ ವಿಚಾರವಾಗಿ ಮುಂದಾದ್ರೂ ಎಚ್ಚೆತ್ತುಕೊಳ್ಳಬೇಕಿದೆ. ಸೀರಿಯಸ್ಸಾಗಿ ತೆಗೆದುಕೊಳ್ಳದಿದ್ರೆ ಭವಿಷ್ಯದಲ್ಲಿ ಟೀಮ್ ಇಂಡಿಯಾಗೇ ಸಮಸ್ಯೆ ಎದುರಾಗಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ತಪ್ಪಿದ ದೊಡ್ಡ ದುರಂತ.. ಕೇವಲ 2 ನಿಮಿಷದ ಅವಧಿಯಲ್ಲಿ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ