/newsfirstlive-kannada/media/post_attachments/wp-content/uploads/2025/03/TEAM-INDIA-12.jpg)
ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರೋ ಖುಷಿಯಲ್ಲಿರುವ ಟೀಂ ಇಂಡಿಯಾ ಆಟಗಾರರು ಒಬ್ಬೊಬ್ಬರೇ ತವರಿಗೆ ಮರಳುತ್ತಿದ್ದಾರೆ. ಮಂಗಳವಾರ ಒಂದಷ್ಟು ಆಟಗಾರರು ಸೈಲೆಂಟ್ ಆಗಿ ಬಂದು ಕುಟುಂಬವನ್ನು ಸೇರಿಕೊಂಡಿದ್ದಾರೆ. ಸಾಮಾನ್ಯವಾಗಿ ಐಸಿಸಿ ಟೂರ್ನಿಗಳಲ್ಲಿ ಗೆಲುವು ಸಾಧಿಸಿ ಮರಳಿದಾಗ ಆಟಗಾರರಿಗೆ ಭರ್ಜರಿ ಸ್ವಾಗತ ನೀಡಲಾಗುತ್ತದೆ.
ಇದನ್ನೂ ಓದಿ: ಕಾಂತಾರ ಬೆಡಗಿ ಸಪ್ತಮಿ ಗೌಡ ಮನೆಯಲ್ಲಿ ನೀರವ ಮೌನ; ಅಸಲಿಗೆ ಆಗಿದ್ದೇನು?
ವಿಮಾನ ನಿಲ್ದಾಣದಲ್ಲಿಯೇ ಅದ್ದೂರಿ ಸ್ವಾಗತ ನೀಡಿ, ತೆರೆದ ವಾಹನ ಮೂಲಕ ಮೆರವಣಿಗೆ ಕೂಡ ಈ ಹಿಂದೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬಿಸಿಸಿಐ ಯಾವುದೇ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಿಲ್ಲ. ಅದಕ್ಕೆ ಕಾರಣವನ್ನೂ ಕೂಡ ಬಿಸಿಸಿಐ ತಿಳಿಸಿದೆ.
ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದೆ. ಅದಕ್ಕಾಗಿ ಆಟಗಾರರು ಸಿದ್ಧರಾಗಲಿದ್ದಾರೆ. ಹೀಗಾಗಿ ಯಾವುದೇ ಕಾರ್ಯಕ್ರಮವನ್ನು ಆಯೋಜನೆ ಮಾಡಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಹುತೇಕ ಆಟಗಾರರು ದುಬೈನಿಂದ ಹಿಂದಿರುಗಿದ್ದಾರೆ. ಕೆಲವು ಆಟಗಾರರು ಒಂದೆರಡು ದಿನ ಅಲ್ಲೇ ಉಳಿದು, ಆ ಬಳಿಕ ವಾಪಸ್ ಆಗಲಿದ್ದಾರೆ.
ಐಪಿಎಲ್ ಬರೋಬ್ಬರಿ 2 ತಿಂಗಳ ಕಾಲ ನಡೆಯಲಿದೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯ ಇದೆ. ಅವರು ಐಪಿಎಲ್ ತಂಡವನ್ನು ಕೂಡಿಕೊಳ್ಳುವ ಮುನ್ನ ಕೆಲ ದಿನಗಳು ವಿಶ್ರಾಂತಿ ಪಡೆಯಲಿದ್ದಾರೆ. ಇದೇ ಕಾರಣಕ್ಕೆ ಯಾವುದೇ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಒಂದೇ 1 ಪಂದ್ಯ ಆಡದೇ ಚಾಂಪಿಯನ್ ಆದ ಮೂವರು ಟೀಂ ಇಂಡಿಯಾ ಆಟಗಾರರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ