/newsfirstlive-kannada/media/post_attachments/wp-content/uploads/2025/07/kangana_ranaut_NEW.jpg)
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯೂ ಭಾರೀ ಮಳೆ, ದಿಢೀರ್ ಪ್ರವಾಹದಿಂದ ತತ್ತರಿಸಿ ಹೋಗಿದೆ. ಆದರೇ, ಮಂಡಿ ಲೋಕಸಭಾ ಕ್ಷೇತ್ರದ ಸದಸ್ಯೆ ಕಂಗನಾ ರಣಾವತ್ ಮಾತ್ರ ಕ್ಷೇತ್ರಕ್ಕೂ ಭೇಟಿ ಕೊಟ್ಟಿಲ್ಲ, ಜನರ ಕಷ್ಟಕ್ಕೂ ಸ್ಪಂದಿಸಿಲ್ಲ, ಜನರ ಕಷ್ಟ ಸುಖ ಅಲಿಸದೇ ನಾಪತ್ತೆ ಆಗಿದ್ದಾರೆ ಎಂದು ಮಂಡಿ ಜನರು ದೂರಿದ್ದರು. ಇದಾದ ಬಳಿಕ ಮಂಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂಗನಾ ರಣಾವತ್ ಭೇಟಿ ನೀಡಿ ಖುದ್ದಾಗಿ ಎಲ್ಲವನ್ನೂ ವೀಕ್ಷಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಜನರಿಗೆ ಹಣಕಾಸಿನ ನೆರವು ನೀಡಲು ನನ್ನ ಬಳಿ ಕ್ಯಾಬಿನೆಟ್ ಮಂತ್ರಿ ಸ್ಥಾನ ಇಲ್ಲ ಹಾಗೂ ವಿಪತ್ತು ರಿಲೀಫ್ ಫಂಡ್ ಕೂಡ ನನ್ನ ಬಳಿ ಇಲ್ಲ ಎಂದು ಹೇಳಿದ್ದರು. ಕಂಗನಾ ರಣಾವತ್ ಹೇಳಿಕೆಗೆ ಈಗ ಭಾರೀ ಆಕ್ಷೇಪ ವ್ಯಕ್ತವಾಗುತ್ತಿದೆ.
ಈಗ ನಟಿ ಕಂಗನಾ ರಣಾವತ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಯಲ್ಲಿ ಯಾವುದೇ ವಿವಾದಾತ್ಮಕ ಅಂಶ ಇಲ್ಲ. ಇದು ಅಭಿಪ್ರಾಯವನ್ನು ವ್ಯಕ್ತಪಡಿಸುವ ನನ್ನ ವಿಧಾನ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾನು ಜನರಿಗೆ ವಾಸ್ತವಾಂಶವನ್ನು ಹೇಳಿದ್ದೇನೆ. ನನ್ನ ಕೈಯಲ್ಲಿ ಏನಿದೆ, ಏನಿಲ್ಲ ಎಂಬ ಬಗ್ಗೆ ಹೇಳಿದ್ದೇನೆ. ಸಂಸದರಾಗಿ ನಾವು ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಫಂಡ್ ತರಬೇಕು. ನನಗೆ ನನ್ನದೇ ಆದ ವ್ಯಾಪ್ತಿ ಇದೆ. ನಮ್ಮ ಪಕ್ಷ ಜನರ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತೆ ಎಂದು ಜನರಿಗೆ ಹೇಳಿದ್ದೇನೆ. ಹಿಮಾಚಲ ಪ್ರದೇಶದ ಮಳೆ ಹಾನಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಹಿಮಾಚಲ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡುತ್ತೇನೆ ಎಂದು ನಟಿ, ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಕಾಂಗ್ರೆಸ್​ ನನ್ನ ವಿರುದ್ಧ ಮಾತಾಡುತ್ತಿದೆ
ಕಾಂಗ್ರೆಸ್ ಪಕ್ಷ ನನ್ನ ಎರಡು ಲೈನ್ ಎತ್ತಿಕೊಂಡು, ನನ್ನ ವಿರುದ್ಧ ಮಾತನಾಡಿದೆ. ಆದರೇ, ಕಾಂಗ್ರೆಸ್ ಸರ್ಕಾರ ಎಲ್ಲ ಫಂಡ್ ಬಳಕೆ ಮಾಡಿದೆ ಎಂಬುದನ್ನು ನೋಡಬೇಕು. ಜನರನ್ನು ತಲುಪುವಲ್ಲಿ ನಾನು ವಿಳಂಬ ಮಾಡಿಲ್ಲ.
ಇದನ್ನೂ ಓದಿ: ‘ರಾಮಾಯಣ’ದಲ್ಲಿ ನಟನೆಗಾಗಿ ರಣಬೀರ್ ಕಪೂರ್​, ಸಾಯಿ ಪಲ್ಲವಿಗೆ ಕೋಟಿ ಕೋಟಿ ದುಡ್ಡು..!
ನಿನ್ನೆಯ ಭಾನುವಾರ( ಜುಲೈ6) ಮಂಡಿಗೆ ಭೇಟಿ ನೀಡಿದ್ದ ಕಂಗನಾ ರಣಾವತ್, ಸಂಸದರ ಕೆಲಸ ಪಾರ್ಲಿಮೆಂಟ್​ನಲ್ಲಿ ಕೆಲಸ ಮಾಡುವುದಕ್ಕೆ ಸೀಮಿತ. ಬಹಳಷ್ಟು ವಿಷಯಗಳಲ್ಲಿ ನಾವು ಏನೂ ಮಾಡಲಾಗಲ್ಲ. ಆದರೇ, ಕೇಂದ್ರದಿಂದ ವಿಪತ್ತು ಫಂಡ್ ತರಲು ಸಹಾಯ ಮಾಡುತ್ತೇನೆ ಎಂದು ನಟಿ, ಸಂಸದೆ ಕಂಗನಾ ಹೇಳಿದ್ದರು.
ಮಂಡಿ ಜಿಲ್ಲೆಯೊಂದರಲ್ಲೇ ಭಾರೀ ಮಳೆ, ಭೂಕುಸಿತ, ಮೇಘ ಸ್ಪೋಟ, ಧೀಡೀರ್ ಪ್ರವಾಹದಿಂದ 14 ಮಂದಿ ಜೀವ ಕಳೆದುಕೊಂಡಿದ್ದಾರೆ. 31 ಮಂದಿ ನಾಪತ್ತೆಯಾಗಿದ್ದಾರೆ. 150 ಮನೆಗಳು, 106 ದನದ ಕೊಟ್ಟಿಗೆಗಳು, 31 ವಾಹನಗಳು, 41 ಬ್ರಿಡ್ಜ್​ಗಳು ಸರ್ವನಾಶ ಆಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ