/newsfirstlive-kannada/media/post_attachments/wp-content/uploads/2024/11/KL-Rahul_Gambhir_1.jpg)
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ಗೆ ಸ್ಥಾನ ಸಿಗೋದು ಬಹುತೇಕ ಡೌಟ್. ಒಂದು ವೇಳೆ ಚಾನ್ಸ್ ಸಿಕ್ರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಅನುಮಾನ.
ರಾಹುಲ್ಗಿಲ್ವಾ ಸ್ಥಾನ..?
ಚಾಂಪಿಯನ್ಸ್ ಟ್ರೋಫಿ ತಂಡದ ಆಯ್ಕೆ ಸಿದ್ಧತೆ ನಡೀತಿರೋದ್ರ ನಡುವೆ ದೊಡ್ಡ ಸುದ್ದಿ ಹೊರಬಿದ್ದಿದೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಕೆ.ಎಲ್.ರಾಹುಲ್ಗೆ ಸ್ಥಾನ ಸಿಗೋದು ಬಹುತೇಕ ಅನುಮಾನವಾಗಿದೆ. ಇದಕ್ಕೆ ಕಾರಣ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ರಿಷಭ್ ಪಂತ್ ಎಂಟ್ರಿ. ಡೆಡ್ಲಿ ಬ್ಯಾಟರ್ ರಿಷಭ್ ಪಂತ್ ಆಗಮನ ಕನ್ನಡಿಗನ ಸ್ಥಾನಕ್ಕೆ ಕುತ್ತು ತಂದಿದೆ.
ಇದನ್ನೂ ಓದಿ: Prabhas Marriag: ಪ್ರಭಾಸ್ ಮದ್ವೆ ಬಗ್ಗೆ ದೊಡ್ಡ ಸುಳಿವು ಬಿಟ್ಟುಕೊಟ್ಟ ಸ್ನೇಹಿತ ರಾಮ್ ಚರಣ್..!
ಕೆ.ಎಲ್.ರಾಹುಲ್ಗೆ ಸ್ಥಾನ ಕಷ್ಟ
ಕೆ.ಎಲ್.ರಾಹುಲ್.. ವಿಕೆಟ್ ಕೀಪರ್ ಆ್ಯಂಡ್ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಆಯ್ಕೆ ಆಗ್ತಾರೆ ಎನ್ನಲಾಗಿತ್ತು. ಆದ್ರೀಗ ವಿಕೆಟ್ ಕೀಪರ್ ಸ್ಥಾನಕ್ಕೆ ಪಂತ್ ಎಂಟ್ರಿ ಕೊಟ್ಟಿದ್ದಾರೆ. 5ನೇ ಸ್ಲಾಟ್ನಲ್ಲಿ ಪಂತ್ ಬ್ಯಾಟ್ ಬೀಸೋದು ಫಿಕ್ಸಾಗಿದೆ. ಮಿಡಲ್ ಆರ್ಡರ್ನಲ್ಲಿ 4ನೇ ಸ್ಲಾಟ್ನಲ್ಲಿ ಆಡಲು ಸಾಲಿಡ್ ಫಾರ್ಮ್ನಲ್ಲಿರೋ ಶ್ರೇಯಸ್ ಅಯ್ಯರ್ ರೆಡಿಯಾಗಿದ್ದಾರೆ. 6ನೇ ಸ್ಲಾಟ್ನಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿದ್ದಾರೆ. ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಧ್ರುವ್ ಜುರೇಲ್ ಕೂಡ ಮಿಡಲ್ ಆರ್ಡರ್ನಲ್ಲಿ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ.
ಹೀಗಾಗಿ ಮಿಡಲ್ ಆರ್ಡರ್ನಲ್ಲಾಗಲಿ ಅಥವಾ ವಿಕೆಟ್ ಕೀಪರ್ ಸ್ಥಾನದಲ್ಲಾಗಲಿ ಕೆ.ಎಲ್.ರಾಹುಲ್ ಸ್ಥಾನ ಪಡೆಯೋದು ಕಷ್ಟವೆನಿಸಿದೆ.
ಮಿಡಲ್ ಆರ್ಡರ್ನಲ್ಲಿ ವಿಕೆಟ್ ಕೀಪರ್ ಕೋಟಾದಲ್ಲಿ ಇಲ್ದಿದ್ರೆ ಏನು? ಆರಂಭಿಕನಾಗಿ ಕೆ.ಎಲ್.ರಾಹುಲ್ ಆಡ್ತಾರೆ ಅಂದ್ರೆ ಈ ಸ್ಲಾಟ್ನಲ್ಲೂ ಪೈಪೋಟಿ ಜೋರಾಗಿದೆ. ರೋಹಿತ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಸಾಲು ಸಾಲು ಆಟಗಾರರಿದ್ದಾರೆ. ಗಿಲ್, ಯಶಸ್ವಿ ಜೈಸ್ವಾಲ್, ಈಗಾಗಲೇ ಟವೆಲ್ ಹಾಕಿದ್ದಾರೆ. ಗಾಯಕ್ವಾಡ್, ಇಶಾನ್ ಕಿಶನ್ ಕೂಡ ಒಂದೇ ಒಂದು ಅವಕಾಶಕ್ಕಾಗಿ ಕಾಯ್ತಿದ್ದಾರೆ. ಹೀಗಾಗಿ ಕೆ.ಎಲ್.ರಾಹುಲ್ಗೆ ಆರಂಭಿಕನಾಗಿ ಸ್ಥಾನ ಸಿಗೋದು ಕಷ್ಟ.
ಇದನ್ನೂ ಓದಿ: ನೀವು ಸೇದುವ ಸಿಗರೇಟ್ ಕೂಡ ನಕಲಿ; ಧೂಮಪಾನಿಗಳಿಗೆ ಬಿಗ್ ಶಾಕ್..!
ಪೈಪೋಟಿ ಒಂದೆಡೆಯಾದ್ರೆ ಪರ್ಫಾಮೆನ್ಸ್ ಕೂಡ ರಾಹುಲ್ ಪಾಲಿಗೆ ವಿಲನ್ ಆಗಿದೆ. ಕಳೆದ ವರ್ಷ ಆಡಿದ ಎರಡೂ ಏಕದಿನ ಪಂದ್ಯದಲ್ಲಿ ರಾಹುಲ್ ಫೇಲ್ ಆಗಿದ್ದಾರೆ. ಇದು ಸಹಜವಾಗೇ ರಾಹುಲ್ ಅಗತ್ಯತೆ ತಂಡಕ್ಕಿದ್ಯಾ ಎಂಬ ಪ್ರಶ್ನೆ ಹುಟ್ಟಿಸಿದೆ.
ಲಂಕಾ ಸರಣಿಯಲ್ಲಿ ರಾಹುಲ್
ಕಳೆದ ವರ್ಷ 2 ಏಕದಿನ ಪಂದ್ಯಗಳನ್ನಾಡಿರುವ ಕೆ.ಎಲ್.ರಾಹುಲ್ 15ರ ಬ್ಯಾಟಿಂಗ್ ಅವರೇಜ್ನಲ್ಲಿ 31 ರನ್ ಗಳಿಸಿದ್ದಾರೆ. ಅದು ಕೂಡ 68.88ರ ಕಳಪೆ ಸ್ಟ್ರೈಕ್ರೇಟ್ನಲ್ಲಾಗಿದೆ. ಇದು ಸಹಜವಾಗೇ ಕೆ.ಎಲ್.ರಾಹುಲ್ಗೆ ಮುಳ್ಳಾಗುವ ಸಾದ್ಯತೆ ಇದೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಕೆ.ಎಲ್.ರಾಹುಲ್ಗೆ ಸ್ಥಾನ ಸಿಗೋದು ಸದ್ಯಕ್ಕಂತೂ ಅನುಮಾನ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದ್ರೂ ಬ್ಯಾಕ್ ಆಪ್ ಆಟಗಾರನಾಗಿ ಇರಬೇಕಾಗುತ್ತೆ. ಯಾರಾದ್ರೂ ಇಂಜುರಿಗೆ ತುತ್ತಾದ್ರೆ ಅಥವಾ ಕಳಪೆ ಪ್ರದರ್ಶನ ನೀಡಿದ್ರೆ, ಚಾನ್ಸ್ ಸಿಗೋ ಸಾಧ್ಯತೆಯಿದೆ.
ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಶರ್ಮಾ ಕರಿಯರ್ ಅಂತ್ಯಕ್ಕೆ ಮುಹೂರ್ತ ಫಿಕ್ಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್