/newsfirstlive-kannada/media/post_attachments/wp-content/uploads/2025/07/CONDIMENTS.jpg)
ಬೆಂಗಳೂರು: ಟ್ಯಾಕ್ಸ್ ವಿಚಾರವಾಗಿ ಸಣ್ಣ, ಪುಟ್ಟ ಅಂಗಡಿಗಳಿಗೂ ನೋಟಿಸ್ ನೀಡುತ್ತಿರುವ ಹಿನ್ನೆಲೆಯಲ್ಲಿ ಬೇಕರಿ, ಕಾಂಡಿಮೆಂಟ್ಸ್ ವ್ಯಾಪಾರಿಗಳು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಪ್ರತಿಭಟನೆಯನ್ನು ತೀವ್ರಗೊಳಿಸಿರುವ ದಿನಸಿ ಅಂಗಡಿ ಬ್ಯಾಪಾರಿಗಳು, ಜುಲೈ 25 ರಂದು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಇದನ್ನೂ ಓದಿ: ಆಯೋಗದ ವರದಿಯಿಂದ ಬಿಗ್ ಶಾಕ್.. ಮತದಾರರ ಪಟ್ಟಿಯಿಂದ 52 ಲಕ್ಷ ವೋಟರ್ಸ್ ಔಟ್
ಈ ಪ್ರತಿಭಟನೆಯ ಭಾಗವಾಗಿ ನಾಳೆಯಿಂದ ಸಿಗರೇಟ್, ಗುಟ್ಕಾ ಸೇರಿಂದಂತೆ ಇನ್ನಿತರ ಐಟಮ್ಸ್ ಸಿಗಲ್ಲ. ಅಂಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಮತ್ತೊಂದು ಕಡೆ ಕೈಗೆ ಕಪ್ಪು ಪಟ್ಟಿಧರಿಸಿ ವ್ಯಾಪಾರ ಮಾಡ್ತಿದ್ದಾರೆ.
ಇನ್ನು ಕೆಲವು ವ್ಯಾಪಾರಿಗಳು ಇಂದಿನಿಂದ ಮೂರು ದಿನ ನಮ್ಮ ಅಂಗಡಿಯಲ್ಲಿ ಹಾಲು, ಟೀ,ಕಾಫಿ, ಸಿಗಲ್ಲ. ಬ್ಲಾಕ್ ಟೀ, ಬ್ಲಾಕ್ ಕಾಫಿ, ಗ್ರೀನ್ ಟೀ, ಲೇಮನ್ ಟೀ ಮಾತ್ರ ಸಿಗುತ್ತದೆ. ಶುಕ್ರವಾರ ನಮ್ಮ ಅಂಗಡಿ ಕ್ಲೋಸ್ ಮಾಡಲಾಗುತ್ತದೆ ಎಂದು ಬೋರ್ಡ್ ಹಾಕಿದ್ದಾರೆ. ಅಂತೆಯೇ ಕೆಲವು ಕಾಂಡಿಮೆಂಟ್ಸ್, ಬೇಕರಿಯಲ್ಲಿ ಹಾಲು ಮೊಸರು ಮಜ್ಜಿಗೆ ಟೀ ಕಾಫಿ ಸಿಗೋದು ಡೌಟು.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ರೈತನ ಮಗ ಸಜ್ಜು.. ಇಂದು ಅವಕಾಶ ಸಿಕ್ರೆ ಪರಿಶ್ರಮಕ್ಕೆ ಸಿಕ್ಕ ಬೆಲೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ