/newsfirstlive-kannada/media/post_attachments/wp-content/uploads/2025/07/UMOJA-VILLAGE-2.jpg)
ಹಿಂದೆ ಲಿಂಗದ ಆಧಾರದ ಮೇಲೆ ತಾರತಮ್ಯ ಇತ್ತು. ಮಹಿಳೆ ಮನೆಯಿಂದ ಹೊರಬರುವಂತಿರಲಿಲ್ಲ. ಪುರುಷನ ಎದುರು ತಲೆ ಎತ್ತಿ ನಿಲ್ಲುವಂತಿರಲಿಲ್ಲ. ಇತ್ತೀಚೆಗೆ ಜಗತ್ತಿನಲ್ಲಿ ಪುರುಷನಿಗೆ ಸರಿ ಸಮನಾಗಿ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಈಗಲೂ ಪುರುಷ ಪ್ರಧಾನ ಸಮಾಜವೇ ಇದ್ದರೂ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷನಿಗೆ ಸರಿ ಸಮನಾಗಿ ಅವಕಾಶ ಪಡೆದುಕೊಳ್ಳುತ್ತಿದ್ದಾಳೆ.
ಈ ಹಳ್ಳಿಯಲ್ಲಿ ಪುರುಷರಿಗೆ ಇಲ್ಲ ಎಂಟ್ರಿ
ಆದರೆ ಬುಡಕಟ್ಟು, ಆದಿವಾಸಿಗಳಲ್ಲಿ ಇಂದಿಗೂ ಪುರಷರದ್ದೇ ಪ್ರಾಬಲ್ಯ. ಅವರು ಇಂದಿಗೂ ಅವರದ್ದೇ ಸಂಸ್ಕೃತಿ, ನಿಯಮಗಳನ್ನು ಪಾಲಿಸುತ್ತ ಬದುಕುತ್ತಿದ್ದಾರೆ. ಅಂಥದ್ದೇ ಒಂದು ಬುಡಕಟ್ಟು ಜನಾಂಗದ ಹಳ್ಳಿಯಲ್ಲಿ ಸಂಪೂರ್ಣವಾಗಿ ಪುರುಷರಿಗೆ ನಿಷೇಧವಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು; ಬಾಗಪ್ಪ ಹರಿಜನ ಹಳೇ ಶಿಷ್ಯನ ಬರ್ಬರ ಹತ್ಯೆ, ಫೈರಿಂಗ್..
ಕೀನ್ಯಾದ ಉತ್ತರ ಭಾಗದಲ್ಲಿರುವ ಉಮೋಜೋ ಉಸೋ ಎಂಬ ಹಳ್ಳಿಯಲ್ಲಿ ಪುರುಷರಿಗೆ ನಿರ್ಬಂಧವಿದೆ. ಇಲ್ಲಿ ಮಹಿಳೆಯರದ್ದೇ ಪಾರುಪತ್ಯೆ. ಹಾಗಂತ ಇದೇನು ಬುಡಕಟ್ಟು ಸಾಂಬರು ಜನಾಂಗದ ಸಂಪ್ರದಾಯ ಅಂತೇನೂ ಇಲ್ಲ. ಇವರೆಲ್ಲ ದೌರ್ಜನ್ಯ, ಅತ್ಯಾಚಾರ, ಬಲವಂತದ ವಿವಾಹಗಳಿಗೆ ಬಲಿಯಾಗಿ ಪುರುಷರ ದೌರ್ಜನ್ಯದಿಂದ ರೋಸಿ ಹೋಗಿ ಹೊರಬಂದವರು.
1990ರಲ್ಲಿ ಆಗಿದ್ದೇನು..?
1990ರ ಸುಮಾರಿಗೆ ಬ್ರಿಟಿಷ್ ಸೈನಿಕರು ಕೀನ್ಯಾಕ್ಕೆ ಮಿಲಿಟರಿ ತರಬೇತಿಗೆ ಬರುತ್ತಿದ್ದರು. ಹಾಗೆ ಬಂದ ಸೈನಿಕರು ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಆ ಸೈನಿಕರ ದೌರ್ಜನ್ಯ ತಡೆಯಲು ಅತ್ಯಾಚಾರದ ಬಳಿಕ ನ್ಯಾಯ ಪಡೆಯಲು ಆ ಮಹಿಳೆಯರು ಶಕ್ತಿಹೀನರಾಗಿದ್ದರು.
ಅದೊಂದು ದಿನ ಬ್ರಿಟಿಷ್ ಸೈನಿಕರಿಂದ ಸಾಂಬುರು ಜನಾಂಗದ 14 ಯುವತಿಯರ ಮೇಲೆ ಅತ್ಯಾಚಾರ ಆಯ್ತು. ಆ ನಂತರ ಬುಡಕಟ್ಟು ಸಮುದಾಯ ಆ ಮಹಿಳೆಯರನ್ನು ಅವಮಾನಿಸಿತು. ಅವರನ್ನು ಮದುವೆ, ಕುಟುಂಬಕ್ಕೆ ಅನರ್ಹರೆಂದು ಘೋಷಿಸಲಾಯಿತು.
ಇದನ್ನೂ ಓದಿ: ನಿಮಗಿದು ಗೊತ್ತೇ.. ನೇರಳೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು?
ಇದನ್ನು ಪ್ರತಿಭಟಿಸಿದ್ದ ಬುಡಕಟ್ಟಿನ ಮಹಿಳೆ ರೆಬೆಕ್ಕಾ ಲೋಲೋಸೋಲಿ ಮಹಿಳೆಯರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವ ಮೂಲಕ ಅವರಿಗೆ ಸಹಾಯ ಮಾಡಲು ಯತ್ನಿಸಿದ್ದಳು. ಇದರಿಂದ ಸಾಂಬರು ಪುರುಷರು ಅವರನ್ನ ಕ್ರೂರವಾಗಿ ಥಳಿಸಿದರು. ಸಿಡಿದೆದ್ದ ಲೋಲೋಸೋಲಿ ತನ್ನ ಗಂಡನನ್ನು ತೊರೆದು ಆ 14 ಜನ ಸಂತ್ರಸ್ತರೊಂದಿಗೆ ಗ್ರಾಮದಿಂದ ಓಡಿ ಹೋಗಿ ಹೊಸ ಜೀವನ ಆರಂಭಿಸಿದಳು.
200ಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ
ಸಂತ್ರಸ್ತ ಮಹಿಳೆಯರ ಒಗ್ಗೂಡಿಸಿ ಉಮೋಜಾ ಹೆಸರಿನ ಮಹಿಳೆಯರದ್ದೇ ಗ್ರಾಮ ಸ್ಥಾಪಿಸಿದಳು. ಸ್ವಾಹಿಲಿ ಭಾಷೆಯಲ್ಲಿ ಉಮೋಜಾ ಎಂದರೆ ಏಕತೆ. 14 ಸಂತ್ರಸ್ತರ ಆಶ್ರಯ ಸ್ಥಳವಾದ ಉಮೋಜಾ ಬರುಬರುತ್ತಾ ಪುರುಷನ ದೌರ್ಜನ್ಯದಿಂದ ನಲುಗಿದವರಿಗೆ ಸಾಂತ್ವನದ ಗ್ರಾಮವಾಗಿದೆ. ಇಲ್ಲೀಗ ಮಕ್ಕಳು ಸೇರಿ 200ಕ್ಕೂ ಹೆಚ್ಚು ಜನರಿದ್ದಾರೆ.
ಇದನ್ನೂ ಓದಿ: ‘ನನ್ನ ಲೈಫ್ನಲ್ಲಿ ಅದನ್ನ ತಿನ್ನೋ ಆಸೆ ಇತ್ತು’ ನ್ಯೂಸ್ಫಸ್ಟ್ನಲ್ಲಿ ನಟಿ ಲಕ್ಷ್ಮಿ ಒಲವು-ಗೆಲುವಿನ ಮಾತು..
ಆದರೂ ಕೀನ್ಯಾದ ಹಲವೆಡೆ ಈಗಲೂ ಪುರುಷರೇ ಪ್ರಧಾನ. ಸಾಂಬುರು ಜನಾಂಗದ ಪದ್ಧತಿಯಂತೆ ಮಹಿಳೆಯರು ಯಾವುದೇ ಹಣ, ಭೂಮಿಗೆ ಅನುಮತಿ ಇಲ್ಲ. ಸಮಾನತೆಯ ಕಲ್ಪನೆಯನ್ನು ಇಲ್ಲಿನ ಪುರುಷರೂ ಹಿಂಸಾತ್ಮಕವಾಗಿ ವಿರೋಧಿಸುತ್ತಾರೆ. ಆದರೆ ಉಮೋಜಾ ಗ್ರಾಮದಲ್ಲಿ ಮಾತ್ರ ಮಹಿಳೆಯರೇ ಸರ್ವಸ್ವ..
ವಿಶೇಷ ವರದಿ: ಜಿ.ವಿಶ್ವನಾಥ್, ಸಿನಿಯರ್ ಕಾಪಿ ಎಡಿಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ