newsfirstkannada.com

ಅಯ್ಯೋ.. ವಿದ್ಯುತ್​ ಇಲ್ಲ, ಟಾರ್ಚ್​ ಲೈಟ್​ನಲ್ಲಿ ಹೆರಿಗೆ, ತಾಯಿ ಮಗು ಸಾವು.. ಇದು ಸರ್ಕಾರಿ ಹೆರಿಗೆ ಆಸ್ಪತ್ರೆಯ ಕರ್ಮಕಾಂಡ

Share :

Published May 3, 2024 at 7:28am

    ಸರ್ಕಾರಿ ಹೆರಿಗೆ ಆಸ್ಪತ್ರೆಯ ಅವಾಂತರ ಬಟಾ ಬಯಲು

    ವಿದ್ಯುತ್​ ಇಲ್ಲ, ಕೈಕೊಡೋ ಜನರೇಟರ್​ ನಂಬಿಕೊಂಡು ಹೆರಿಗೆ

    ವಿಡಿಯೋ ಸಮೇತ ಬೆಳಕಿಗೆ ಬಂದ ಸರ್ಕಾರಿ ಹೆರಿಗೆ ಆಸ್ಪತ್ರೆಯ ಕರ್ಮಕಾಂಡ

ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗು ಸಾವನ್ನಪ್ಪಿದ ಅಹಿತಕರ ಘಟನೆ ಮುಂಬೈನ ಭಾಂಡೂಪ್​ ಮುನ್ಸಿಪಲ್​ ಹೆರಿಗೆ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಸುಷ್ಮಾ ಸ್ವರಾಜ್​ ಹೆರಿಗೆ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದೆ ಮಗು ಸಾವನ್ನಪ್ಪಿದೆ ಎಂದು ಮೃತ ಮಹಿಳೆಯ ಕುಟುಂಬ ಆರೋಪಿಸಿದೆ. ವಿದ್ಯುತ್​ ಇಲ್ಲದೆ ಹೆರಿಗೆ ಮಾಡಿಸಲುನ ವೈದ್ಯರು ಮುಂದಾಗಿದ್ದಾರೆ ಎಂದು ಮನೆಯವರು ದೂರಿದ್ದಾರೆ. ಸದ್ಯ ಬೃಹಾನ್​ಮುಂಬೈ​ ಮುನ್ಸಿಪಲ್​ ಕಾರ್ಪೋರೇಷನ್​ ತಾಯಿ-ಮಗುವಿನ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿದೆ.

26 ವರ್ಷದ ಗರ್ಭಿಣಿ ಮಹಿಳೆ ಸಾವು

ಸಾವನ್ನಪ್ಪಿದ ಗರ್ಭಿಣಿ ಮಹಿಳೆಯನ್ನು ಸಹೀದುನ್​ ಅನ್ಸಾರಿ (26) ಎಂದು ಗುರುತಿಸಲಾಗಿದ್ದು, ಭಾಂಡೂಪ್​ ನಿವಾಸಿಯಾಗಿದ್ದಾರೆ. ಇವರು ಹನುಮಾನ್​ ನಗರದಲ್ಲಿರುವ ಸುಷ್ಮಾ ಸ್ವರಾಜ್​ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈಕೆಯ ಕುಟುಂಬವಂತೂ ಸಹೀದುನ್​ನಿಂದ ಮೊದಲ ಮಗುವಿನ ನೀರಿಕ್ಷೆಯಲ್ಲಿತ್ತು.

ಮಗು ಹೆರಲು ಸರ್ಕಾರಿ ಆಸ್ಪತ್ರೆಗೆ ದಾಖಲು

ಏಪ್ರಿಲ್​ 29ರಂದು ಸಹೀದುನ್​ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಹೆರಿಕೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಏಪ್ರಿಲ್​ 30ರಂದು 12:30ಕ್ಕೆ ಹೆರಿಗೆಯಾಗಿದೆ. ಆದರೆ ಹೆರಿಗೆಯಾದ ಕೆಲ ಹೊತ್ತಿನಲ್ಲೇ ಮಗು ಸಾವನ್ನಪ್ಪಿದೆ. ಬಳಿಕ ತಾಯಿಯ ಆರೋಗ್ಯದಲ್ಲೂ ಏರುಪೇರು ಕಾಣಿಸಿಕೊಂಡಿದ್ದು, ಸಹೀದುನ್​ನನ್ನು ಎಲ್​ಟಿಎಂಜಿ ಸಿಯಾನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.

ಟಾರ್ಚ್​ ಹಿಡಿದು ಕೆಲಸ ಮಾಡ್ತಾರೆ

ಸಹೀದುನ್​ ಸೋದರ ಮಾವ ಶಾರುಖ್​ ಅನ್ಸಾರಿ ‘‘ಇಲ್ಲಿ ದಿನನಿತ್ಯ ಹೆರಿಕೆ ಪ್ರಕ್ರಿತೆ ನಡೆಯುತ್ತದೆ. ಅದರಂತೆ ಸಹೀದುನ್​ ಹೆರಿಗೆ ನೋವು ಕಾಣಿಸಿದಾಗ ಮಗುವಿನ ಹೃದಯ ಬಡಿತ ಕಡಿಮೆಯಾಗಿದೆ. ಅದಕ್ಕೆ ವೈದ್ಯರು ಸಿಸೇರಿಯನ್​ ಅನ್ನು ಆಯ್ಕೆ ಮಾಡುತ್ತಾರೆ. ಆದರೆ ಅಲ್ಲಿ ಬೆಳಕಿನ ಕೊರತೆ ಇದ್ದರೂ ಸಹ ನಿರ್ಲಕ್ಷದಿಂದ ಸಿಸೇರಿಯನ್​ಗೆ ಮುಂದಾಗುತ್ತಾರೆ. ಟಾರ್ಚ್​ ಹಿಡಿದು ಕೆಲಸ ಮಾಡಿದ್ದಾರೆ’’ ಎಂದು ಆರೋಪಿಸಿದ್ದಾರೆ.

ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು

ಮಹಿಳೆ ಸಹೀದುನ್​ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. 9 ತಿಂಗಳ ಗರ್ಭಿಣಿಯಾದಾಗ ಉತ್ತಮ ಆರೋಗ ಹೊಂದಿದ್ದಳು. ಆದರೆ ಹೆರಿಗೆ ಆಸ್ಪತ್ರೆಗೆ ಕರೆ ತಂದ ಬಳಿಕ ಹೇಗೆ ಸತ್ತಳು?. ಈ ಸರ್ಕಾರಿ ಆಸ್ಪತ್ರೆಯ ಯಾವ ರೀತಿ ಸೇವೆ ನೀಡುತ್ತಿದೆ? ನಿರ್ಲಕ್ಷ ಬಹಿಸುತ್ತಿದ್ದಾರೆ ಎಂದು ಮೃತ ಸಹೀದುನ್​ ಸಹೋದರ ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ.. ವಿದ್ಯುತ್​ ಇಲ್ಲ, ಟಾರ್ಚ್​ ಲೈಟ್​ನಲ್ಲಿ ಹೆರಿಗೆ, ತಾಯಿ ಮಗು ಸಾವು.. ಇದು ಸರ್ಕಾರಿ ಹೆರಿಗೆ ಆಸ್ಪತ್ರೆಯ ಕರ್ಮಕಾಂಡ

https://newsfirstlive.com/wp-content/uploads/2024/05/Mumbai-Hospital.jpg

Load More