newsfirstkannada.com

×

ಕರೆಂಟ್​ ಇಲ್ಲ! ಮೊಬೈಲ್​​ ಟಾರ್ಚ್​​ನಲ್ಲೇ ರೋಗಿಗೆ ಚಿಕಿತ್ಸೆ! ಈ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಹೀಗಿದೆ ನೋಡಿ

Share :

Published July 9, 2024 at 10:28am

Update July 9, 2024 at 10:29am

    ರಕ್ತಸ್ರಾವವಾಗುತ್ತಿದ್ದ ರೋಗಿಗೆ ಮೊಬೈಲ್​ ಟಾರ್ಚ್ ಬಳಸಿ ಚಿಕಿತ್ಸೆ

    7 ಗಂಟೆ ಕರೆಂಟ್​ ಇಲ್ಲ.. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಪರದಾಟ

    ಜಿಲ್ಲಾ ಆಸ್ಪತ್ರೆಯಲ್ಲಿ ಕರೆಂಟ್​ ಹೋದರೆ ಪರ್ಯಾಯ ವ್ಯವಸ್ಥೆ ಇಲ್ಲ

ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಮಾತಿದೆ. ಆದರೆ ಇಲ್ಲೊಂದು ಜಿಲ್ಪಾ ಆಸ್ಪತ್ರೆಯಲ್ಲಿ ಕತ್ತಲಿನಲ್ಲೇ ರೋಗಿಗೆ ಚಿಕಿತ್ಸೆ ನೀಡಲಾಗಿದೆ. ಮೊಬೈಲ್​ ಫ್ಲಾಷ್​ ಲೈಟ್​ನಲ್ಲಿ ರೋಗಿಯನ್ನು ಉಪಚರಿಸಲಾಗಿದೆ. ಸದ್ಯ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ದೃಶ್ಯವನ್ನು ಪತ್ರಕರ್ತರೊಬ್ಬರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಅಂದಹಾಗೆಯೇ ಇದು ಮಧ್ಯ ಪ್ರದೇಶದಲ್ಲಿ ಬೆಳಕಿಗೆ ಬಂದ ಘಟನೆ. ಅಲ್ಲಿನ ಸಿಧಿ ಆಸ್ಪತ್ರೆಯಲ್ಲಿ ವಿದ್ಯುತ್​ ವ್ಯತ್ಯಯವಾಗಿ ಕೊನೆಗೆ ಮೊಬೈಲ್​ ಟಾರ್ಚ್​ ಬಳಸಿ ರೋಗಿಯನ್ನು ಶುಶ್ರೂಷೆ ಮಾಡಲಾಗಿದೆ.

ಮಾಹಿತಿ ಪ್ರಕಾರ, ಸಿಧಿ ಜಿಲ್ಲೆಯ ನಿವಾಸಿಗಳು 7 ಗಂಟೆಗಳ ಕಾಲ ವಿದ್ಯುತ್​ ಕಡಿತವನ್ನು ಅನುಭವಿಸಿದ್ದಾರೆ. ಈ ಸಮಯದಲ್ಲಿ ಜಿಲ್ಪಾಸ್ಪತ್ರೆಗೂ ವಿದ್ಯುತ್​ ಸಮಸ್ಯೆ ಎದುರಾಗಿದೆ. ಪರಿಣಾಮ ಅಪಘಾತದಲ್ಲಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ರೋಗಿಯನ್ನು ಮೊಬೈಲ್​ ಟಾರ್ಚ್​ ಬಳಸಿ ಚಿಕಿತ್ಸೆ ನೀಡಲಾಗಿದೆ.

ವಿಡಿಯೋ ಕ್ರೆಡಿಟ್​: ಕಾಶಿಫ್​ ಖಕ್ವಿ

ರೋಗಿಯ ಪತ್ನಿ ಈ ಕುರಿತಾಗಿ ಆಕ್ರೋಶ ಹೊರಹಾಕಿದ್ದಾರೆ. ಈ ಜಿಲ್ಲೆಯಲ್ಲಿ ಎಂತಹ ರಾಜಕಾರಣಿ ಇದ್ದಾರೆ. ಕರೆಂಟ್​ ಹೋದರೆ ಪರ್ಯಾಯ ವ್ಯವಸ್ಥೆ ಬೇಕಲ್ಲವೇ ಎಂದು ನೋವು ತೋಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರೆಂಟ್​ ಇಲ್ಲ! ಮೊಬೈಲ್​​ ಟಾರ್ಚ್​​ನಲ್ಲೇ ರೋಗಿಗೆ ಚಿಕಿತ್ಸೆ! ಈ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಹೀಗಿದೆ ನೋಡಿ

https://newsfirstlive.com/wp-content/uploads/2024/07/Sidhi.jpg

Load More