/newsfirstlive-kannada/media/post_attachments/wp-content/uploads/2025/01/OYO.jpg)
ಓಯೋ ರೂಮ್​ ಬುಕ್​ ಮಾಡುವ ಅವಿವಾಹಿತರಿಗೆ ಶಾಕ್ ಸಿಕ್ಕಿದೆ. ಓಯೋ ರೂಮ್​ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ. ಹೀಗಾಗಿ ಹೊಸ ವರ್ಷದಿಂದ ಓಯೋ ಮಹತ್ವದ ನಿರ್ಧಾರ ಕೈಗೊಂಡಿದೆ.
ಓಯೋ ತನ್ನ ಚೆಕ್ ಇನ್ ನಿಯಮ ಬದಲಿಸಿದ್ದು, ಅವಿವಾಹಿತರಿಗೆ ರೂಮ್ ನೀಡಲ್ಲ ಎಂದು ಹೇಳಿದೆ. ಖಾಸಗಿ ಸಮಯ ಕಳೆಯಲು ಮೊದಲ ಆಯ್ಕೆಯಾಗಿದ್ದ ಓಯೋ ಇದೀಗ ತನ್ನ ನೆಚ್ಚಿನ ಗ್ರಾಹಕರಿಗೆ ಶಾಕ್ ನೀಡಿದೆ. ತನ್ನ ಪಾಲುದಾರ ಹೋಟೆಲ್‌ಗಳಿಗಾಗಿ ಹೊಸ ಚೆಕ್ ಇನ್ ಮಾರ್ಗಸೂಚಿ ಹೊರಡಿಸಿ, ಮೊದಲಿಗೆ ಮೀರತ್​ನಿಂದ ಜಾರಿಗೊಳಿಸಲು ಆರಂಭಿಸಿದೆ.
ಇತ್ತ ಹೊಸ ವರ್ಷದಲ್ಲಿ ಯುವ ಸಮೂಹ ಓಯೋ ರೂಮ್​ಗಳನ್ನ ಹೆಚ್ಚು ಬುಕ್ ಮಾಡಿದ್ದು, ಓಯೋಗೆ ಕೋಟಿ ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಇದ್ರ ನಡುವೆ ಓಯೋ ತನ್ನ ಚೆಕ್ ಇನ್ ನಿಯಮ ಬದಲಿಸಿದ್ದು ಚರ್ಚೆಗೆ ಗ್ರಾಸವಾಗ್ತಿದೆ.
ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಆಪ್ತ ಶಾಸಕ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us