ತೆಲಂಗಾಣದಲ್ಲಿ ಗ್ಯಾರಂಟಿಗೆ ಹಣ ಹೊಂದಿಸಲು ಕಾಂಗ್ರೆಸ್‌ ಸರ್ಕಾರದ ಪರದಾಟ.. ಸಿಎಂ ರೇವಂತ್ ರೆಡ್ಡಿ ಹೇಳಿದ್ದೇನು?

author-image
Gopal Kulkarni
Updated On
ತೆಲಂಗಾಣದಲ್ಲಿ ಗ್ಯಾರಂಟಿಗೆ ಹಣ ಹೊಂದಿಸಲು ಕಾಂಗ್ರೆಸ್‌ ಸರ್ಕಾರದ ಪರದಾಟ.. ಸಿಎಂ ರೇವಂತ್ ರೆಡ್ಡಿ ಹೇಳಿದ್ದೇನು?
Advertisment
  • ’ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತನ ನಂತರ ಅಸಲಿ ವಿಷಯ ಗೊತ್ತಾಗಿದ್ದು’
  • ’ಗ್ಯಾರಂಟಿಗಳಿಗೆ ಮಾತ್ರವಲ್ಲ ಸಾಲ ಮರುಪಾವತಿಸಲು ಕೂಡ ಈಗ ಹಣವಿಲ್ಲ’
  • ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಹಾಯಕ ಮಾತುಗಳನ್ನಾಡಿದ ರೇವಂತ್ ರೆಡ್ಡಿ

ಕರ್ನಾಟಕದ ಮಾದರಿಯಲ್ಲಿಯೇ ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆ ಘೋಷಿಸಿ, ತೆಲಂಗಾಣದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್​ ಸರ್ಕಾರ ಈಗ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಿದೆ. ಈ ಬಗ್ಗೆ ಖುದ್ದು ತೆಲಂಗಾಣದ ಸಿಎಂ ರೇವಂತ್ ರೆಡ್ಡಿಯವರೇ ಹೇಳಿದ್ದಾರೆ.

ಖಾಸಗಿ ವಾಹಿನಿ ಸಂದರ್ಶನದಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ನಾವು ಈಗಾಗಲೇ 7 ಲಕ್ಷ ಕೋಟಿ ಸಾಲದಲ್ಲಿ ಮುಳುಗಿದ್ದೇವೆ. ಇದು ನಾನು ಸಿಎಂ ಸ್ಥಾನದಲ್ಲಿ ಕುಳಿತ ಮೇಲೆ ಇದೆಲ್ಲಾ ಗೊತ್ತಾಯ್ತು ಎಂದು ರೇವಂತ್​ ರೆಡ್ಡಿ ಹೇಳಿದ್ದಾರೆ. ಇಂಡಿಯಾ ಟುಡೆ ಕಾನ್​ಕ್ಲೇವ್​ನಲ್ಲಿ ಮಾತನಾಡಿರುವ ರೇವಂತ್ ರೆಡ್ಡಿ, ಸಾಲ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡುತ್ತಿದ್ದೇವೆ. ರೇಸ್​ನಲ್ಲಿ ಇಳಿದ ಮೇಲೆ ಇದೇ ರೀತಿ ಮಾಡುವುದು ಅನಿವಾರ್ಯ. ಈ ಹಿಂದಿನ ಸಿಎಂ ಕೆ.ಸಿ. ಚಂದ್ರಶೇಖರಾವ್​ 6.5 ಲಕ್ಷ ಕೋಟಿ ರೂಪಾಯಿ ಸಾಲವನ್ನು ನಮ್ಮ ನೆತ್ತಿಯ ಮೇಲೆ ಹಾಕಿ ಹೋಗಿದ್ದರು. ಸದ್ಯ ತೆಲಂಗಾಣ ಸರ್ಕಾರ 7 ಲಕ್ಷ ಕೋಟಿ ರೂಪಾಯಿ ಸಾಲದಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಾಹ್ನದ ಬಿಸಿಯೂಟಕ್ಕೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ; ಎಲ್ಲಾ ರಾಜ್ಯಗಳಿಗೂ ಇದು ಅನ್ವಯ!

ನಿರುದ್ಯೋಗಿ ಯುವಕರಿಗೆ 4 ಸಾವಿರ ರೂಪಾಯಿ ಹೇಗೆ ಕೊಡ್ತೀರಿ, ಗ್ಯಾರಂಟಿಗಳಿಗೆ ಹಣ ಹೇಗೆ ಹೊಂದಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ರೇವಂತ್ ರೆಡ್ಡಿ, ನಾನು ಕೂಡ ಆರಂಭದಲ್ಲಿ ಸರ್ಕಾರ ಕೇವಲ 3.75 ಲಕ್ಷ ಕೋಟಿ ಸಾಲದಲ್ಲಿದೆ ಅಂತ ನಂಬಿದ್ದೇ, ಆದ್ರೆ ಕುರ್ಚಿಯಲ್ಲಿ ಕುಳಿತ ಮೇಲೆಯೇ ನನಗೆ ಅಸಲಿ ರೂಪ ಗೊತ್ತಾಗಿದ್ದು. ಗ್ಯಾರಂಟಿಗಳಿಗೆ ಮಾತ್ರವಲ್ಲ, ಸಾಲ ಮರುಪಾವತಿ ಮಾಡುವುದಕ್ಕೂ ಆಗುತ್ತಿಲ್ಲ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ತಿಂಗಳ ಖರ್ಚು ಎಷ್ಟು ಎಂದು ನೋಡುವುದಾದ್ರೆ. ತೆಲಂಗಾಣಕ್ಕೆ ಮಾಸಿಕವಾಗಿ ಬರುವ ಆದಾಯ 18,500 ಕೋಟಿ ರೂಪಾಯಿ. ಇದರಲ್ಲಿ ಪಿಂಚಣಿ, ವೇತನಕ್ಕೆ 6,500 ಕೋಟಿ ರೂಪಾಯಿ ಖರ್ಚಾಗುತ್ತದೆ. ಸಾಲ, ಬಡ್ಡಿ ಪಾವತಿಗೆ 6,500 ಕೋಟಿ ರೂಪಾಯಿ ಬೇಕು. ಪ್ರತಿ ತಿಂಗಳು 10ನೇ ತಾರೀಖಿನೊಳಗಡೆ 13 ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತದೆ. ಉಳಿಯುವುದು ಕೇವಲ 5 ಸಾವಿರ ಕೋಟಿ. ವಿವಿಧ ಯೋಜನೆಗಳಿಗೆ ಅದೇ ಹಣ ಬಳಕೆ ಮಾಡಬೇಕು ಹೀಗಾಗಿ ಗ್ಯಾರಂಟಿಗಳಿಗೆ ಮೀಸಲಿಡಲು ಹಣವಿಲ್ಲದ ಸ್ಥಿತಿಯಲ್ಲಿ ಈಗ ತೆಲಂಗಾಣ ಸರ್ಕಾರವಿದೆ

ಇದನ್ನೂ ಓದಿ:ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದ ಸಂಸದ ತೇಜಸ್ವಿ ಸೂರ್ಯ ದಂಪತಿ; ಫೋಟೋಗಳು ಇಲ್ಲಿವೆ!

ಒಟ್ಟಿನಲ್ಲಿ ರೇಸ್​ನಲ್ಲಿ ಇಳಿದ ಮೇಲೆ ಏನಾದರೂ ಮಾಡಲೇಬೇಕು ಅಲ್ವಾ, ಈಗ ರೇಸ್ ನಡೆಯುತ್ತಿದೆ. ಏನಾದರೊಂದು ಮಾಡುತ್ತೇವೆ. ಸ್ಪೀಡ್​ ಥ್ರಿಲ್ಸ್​ ಬಟ್ ಕಿಲ್ಸ್ ಅಂತ ಗಾದೆಯೇ ಇದೆಯಲ್ಲಾ ಎಂದು ರೇವಂತ್ ರೆಡ್ಡಿ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಅಸಹಾಯಕತೆ ತೋಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment