/newsfirstlive-kannada/media/post_attachments/wp-content/uploads/2025/07/CORONA.jpg)
ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳು ಆತಂಕ ಸೃಷ್ಟಿಸಿವೆ. ಇದರ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ. ಹಠಾತ್ ನಿಧನಕ್ಕೆ (sudden deaths) ಏನು ಕಾರಣ ಎಂಬುದನ್ನು ಹೇಳಲು ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಈ ಪ್ರಕರಣಗಳಿಗೂ, ಕೊರೊನಾ ವ್ಯಾಕ್ಸಿನ್‌ಗೂ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಈ ಬಗ್ಗೆ ಕೇಂದ್ರದ ಆರೋಗ್ಯ ಇಲಾಖೆಯು ಸ್ಪಷ್ಟನೆ ನೀಡಿದೆ. ದೇಶದಲ್ಲಿ ಕೊರೊನಾ ವ್ಯಾಕ್ಸಿನ್‌ಗೂ ಇಂಥ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ ಅಂತಾ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿನ ಹಠಾತ್ ನಿಧನದ ಬಗ್ಗೆ ವಿವಿಧ ಏಜೆನ್ಸಿಗಳು ತನಿಖೆ ನಡೆಸಿವೆ. ಇಂಥ ಪ್ರಕರಣಗಳಿಗೂ ಕೊರೊನಾ ವ್ಯಾಕ್ಸಿನ್‌ಗೂ ಯಾವುದೇ ಸಂಬಂಧ ಇಲ್ಲ ಎಂಬುವುದು ಐಸಿಎಂಆರ್ ಹಾಗೂ ಎನ್‌ಸಿಡಿಸಿ ಅಧ್ಯಯನದಲ್ಲಿ ದೃಢಪಟ್ಟಿದೆ. ಕೋವಿಡ್ ವ್ಯಾಕ್ಸಿನ್ನಿಂದ ಹಠಾತ್ ಸಾವುಗಳು ಹೆಚ್ಚಾಗಿಲ್ಲ. ವಿವಿಧ ಸಂಶೋಧನೆ, ಅಧ್ಯಯನಗಳಲ್ಲಿ ಕೋವಿಡ್ ವ್ಯಾಕ್ಸಿನ್‌ಗೂ ಈ ರೀತಿಯ ನಿಧನಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಹಾಗಿದ್ದರೆ ಕಾರಣ ಏನು..?
ಕಾರ್ಡಿಯಾಕ್ ಸಾವುಗಳಿಗೆ ಜೆನೆಟಿಕ್ಸ್, ಲೈಫ್ ಸ್ಟೈಲ್, ಮುಂಚೆಯೇ ಇದ್ದ ಆರೋಗ್ಯ ಸ್ಥಿತಿ, ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳು ಕಾರಣ ಎಂದು ಕೇಂದ್ರದ ಆರೋಗ್ಯ ಇಲಾಖೆ ಹೇಳಿದೆ. ರಿಸ್ಕಿ ಲೈಫ್ ಸ್ಟೈಲ್ ಸಡನ್ ಸಾವುಗಳಿಗೆ ಕಾರಣವಾಗುತ್ತೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ. ಭಾರತದಲ್ಲಿ ನೀಡಲಾದ ಕೋವಿಡ್ ವ್ಯಾಕ್ಸಿನ್ ಸೇಫ್ ಮತ್ತು ಪರಿಣಾಮಕಾರಿ ಎಂಬುದು ಐಸಿಎಆರ್ ಅಧ್ಯಯನದಿಂದ ದೃಢಪಟ್ಟಿದೆ. ದೇಶದಲ್ಲಿ ಸಡನ್ ಸಾವುಗಳಿಗೆ ಕೋವಿಡ್ ವ್ಯಾಕ್ಸಿನ್ ಕಾರಣ ಎಂಬುದು ಸುಳ್ಳು, ತಪ್ಪು ದಾರಿಗೆಳೆಯುವಂಥದ್ದು. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಕೇಂದ್ರ ಹೇಳಿದೆ. ಕೋವಿಡ್ ವ್ಯಾಕ್ಸಿನ್ನಿಂದ ಕೋಟ್ಯಾಂತರ ಜನರ ಜೀವ ಉಳಿದಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆ ಹೇಳಿದೆ.
ಇದನ್ನೂ ಓದಿ: ಪೋಷಕರೇ ಎಚ್ಚರ.. ಈ ಲಕ್ಷಣ ನಿಮ್ಮ ಮಕ್ಕಳಿಗೆ ಬಂದಿದ್ರೆ ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ..!
ಕರ್ನಾಟಕದ ಸಿಎಂ ಸಿದ್ದರಾಮಯ್ಯ ನಿನ್ನೆಯಷ್ಟೇ ಹಠಾತ್ ನಿಧನಗಳಿಗೆ ಕೋವಿಡ್ ಲಸಿಕೆಯ ದುಷ್ಪರಿಣಾಮ ಇರಬಹುದೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದು ಕೇಂದ್ರದ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಕರ್ನಾಟಕದ ಹಾಸನ ಜಿಲ್ಲೆಯ ಹಾರ್ಟ್ ಅಟ್ಯಾಕ್ ಕೇಸ್ಗಳಿಗೂ ಕೋವಿಡ್ ವ್ಯಾಕ್ಸಿನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ಪ್ರತಿಷ್ಠಿತ HCG ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅಕ್ರಮ ಕ್ಲಿನಿಕಲ್ ಟ್ರಯಲ್ ಆರೋಪ; ಬಡ ರೋಗಿಗಳೇ ಟಾರ್ಗೆಟ್..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ