ಬಾಯ್​ಫ್ರೆಂಡ್​ ಜೊತೆ ಪತ್ನಿಯ ಅಶ್ಲೀಲ ಚಾಟ್ ಯಾವ ಪತಿಯೂ ಸಹಿಸಲ್ಲ; ಹೈಕೋರ್ಟ್​​ ಐತಿಹಾಸಿಕ ಆದೇಶ!

author-image
Gopal Kulkarni
Updated On
ಬಾಯ್​ಫ್ರೆಂಡ್​ ಜೊತೆ ಪತ್ನಿಯ ಅಶ್ಲೀಲ ಚಾಟ್ ಯಾವ ಪತಿಯೂ ಸಹಿಸಲ್ಲ; ಹೈಕೋರ್ಟ್​​ ಐತಿಹಾಸಿಕ ಆದೇಶ!
Advertisment
  • ‘ಪ್ರಿಯಕರನ ಜೊತೆ ನಡೆಸುವ ಅಶ್ಲೀಲ ಸಂಭಾಷಣೆ ಯಾವ ಪತಿಯೂ ಸಹಿಸಲ್ಲ‘
  • ಮದುವೆಯಾದ ಮೇಲೂ ಮಾಜಿ ಪ್ರಿಯಕರನೊಂದಿಗೆ ಅಶ್ಲೀಲ ಸಂಭಾಷಣೆ
  • ಕೋರ್ಟ್​ ಮೆಟ್ಟಿಲೇರಿದ್ದ ಮಹಿಳೆಗೆ ಮಧ್ಯಪ್ರದೇಶದ ಹೈಕೋರ್ಟ್ ಹೇಳಿದ್ದೇನು?

ಇತ್ತೀಚಿನ ದಾಂಪತ್ಯಗಳಾಗಲಿ, ಸ್ನೇಹಸಂಬಂಧಗಳಾಗಲಿ ವಿಪರೀತ ಸಂಕೀರ್ಣತೆಗೆ ಬಂದು ನಿಂತುಕೊಂಡುಬಿಟ್ಟಿವೆ. ಜಸ್ಟ್ ಫ್ರೆಂಡ್​ ಎಂಬ ಹೆಸರನಲ್ಲಿ ನಡೆಯಬಾರದ್ದೆಲ್ಲಾ, ನಡೆಯುತ್ತಿವೆ, ಸಂಭಾಷಣೆಗಳು ಜಾರಿಯಲ್ಲಿವೆ. ಇದಕ್ಕೆ ಆಧುನಿಕ ಜೀವನ ಶೈಲಿ ಎಂಬ ಟ್ಯಾಗ್​ ಬೇರೆ. ದಾಂಪತ್ಯದಲ್ಲಿ ಪಾವಿತ್ರ್ಯಗಳು ಈಗ ಹಳಸಲು ಕಿವಿಮಾತು ಎನ್ನುವ ಮಟ್ಟಕ್ಕೆ ಜೀವನ ಶೈಲಿ ಬಂದು ನಿಂತಿವೆ. ಪತಿ, ಪತ್ನಿಯ ಕಣ್ಣ ಹಿಂದೆ ಇನ್ಯಾರದೋ ಜೊತೆ ಜಸ್ಟ್​ ಫ್ರೆಂಡ್ ಎಂಬ ಹೆಸರಲ್ಲಿ ಮಾತುಕತೆ. ಪತಿಯ ಕಣ್ಣು ತಪ್ಪಿಸಿ ಪತ್ನಿಯದ್ದು ಇನ್ಯಾರದೋ ಜೊತೆ ಜಸ್ಟ್ ಫ್ರೆಂಡ್ ಎಂಬ ಮಾತುಕತೆ. ಅವು ಕೂಡ ಸಭ್ಯತೆ ಸೀಮೆ ದಾಟಿ ಹೋಗುವ ವಾಟ್ಸಪ್​, ಇನ್​ಸ್ಟಾ ಚಾಟ್​ಗಳು. ಈಗ ಇದೇ ವಿಚಾರವಾಗಿ ಈಗ ಮಧ್ಯಪ್ರದೇಶದ ಹೈಕೋರ್ಟ್ ಒಂದು ಐತಿಹಾಸಿಕ ಆದೇಶ ಹೊರಡಿಸಿದೆ.

ಪುರುಷ, ಮಹಿಳೆ ಮದುವೆಯ ನಂತರ ತಮ್ಮ ಸ್ನೇಹಿತರೊಂದಿಗೆ ಅಶ್ಲೀಲ ಸಂಭಾಷಣೆಗಳಲ್ಲಿ ತೊಡಗುವುದು ತಪ್ಪು. ಇದನ್ನು ಯಾವ ಪತಿಯೂ ಕೂಡ ಸಹಿಸಲಾರ ಎಂದು ಹೇಳಿದೆ. ಮಹಿಳೆಯೊಬ್ಬರು ಪತಿಯಿಂದ ಡಿವೋರ್ಸ್​ ಕೇಳಿ ಹೈಕೋರ್ಟ್​ಗೆ ಹೋದಾಗ ಈ ಮಾತನ್ನು​ ಹೇಳಿದೆ.

publive-image

ಕೌಟುಂಬಿಕ ನ್ಯಾಯಾಲಯ ಪತಿಯ ಕ್ರೌರ್ಯತೆಯನ್ನು ಗಣನೆಗೆ ತೆಗೆದುಕೊಂಡು ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆಗೆ ಡಿವೋರ್ಸ್​ಗೆ ಅನುಮತಿ ನೀಡಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಮಧ್ಯಪ್ರದೇಶದ ಹೈಕೋರ್ಟ್​ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ವಿವೇಕ್ ರುಸಿಯಾ ಹಾಗೂ ಗಜೇಂದ್ರ ಸಿಂಗ್​ ಅವರು, ಡಿವೋರ್ಸ್​ಗೆ ಒಪ್ಪಿಗೆ ನೀಡುವ ಮೊದಲು ನೀತಿ ಪಾಠ ಹೇಳಿದ್ದಾರೆ. ಡಿವೋರ್ಸ್​ ಕೇಳಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪತ್ನಿಯು, ತನ್ನ ಪ್ರಿಯತಮನ ಜೊತೆಗೆ ಲೈಂಗಿಕ ವಿಷಯವಾಗಿ ಅಶ್ಲೀಲ ಸಂಭಾಷಣೆಯಲ್ಲಿ ತೊಡಗಿದ್ದಳು ಎಂಬ ಆರೋಪವಿತ್ತು. ಇಂತಹ ವರ್ತನೆಯನ್ನು ಯಾವ ಪತಿಯೂ ಕೂಡ ಸಹಿಸಲಾರ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ:ಒಮನ್ ದೇಶದ ರಾಯಭಾರಿಯನ್ನು ಬಂಧಿಸಿದ್ರಾ ಪೊಲೀಸರು? ಇದರ ಹಿಂದಿರುವ ಸತ್ಯವೇನು ಗೊತ್ತಾ?

ಮದುವೆಯಾದ ಬಳಿಕ ಪತಿ ಮತ್ತು ಪತ್ನಿಗೆ ಇಬ್ಬರಿಗೂ ಮೊಬೈಲ್​ನಲ್ಲಿ ತಮ್ಮ ಸ್ನೇಹಿತರೊಂದಿಗೆ ಸಂಭಾಷಣೆಯಲ್ಲಿ ತೊಡಗಲು ಸ್ವಾತಂತ್ರ್ಯವಿದೆ. ಎಲ್ಲರೊಂದಿಗೂ ಕೂಡ ಚಾಟಿಂಗ್ ಮಾಡಬಹುದು. ಆದ್ರೆ ಇಬ್ಬರ ನಡುವಿನ ಸಂಭಾಷಣೆ ಹಂತ ಒಂದು ಘನತೆ ಹಾಗೂ ಸಭ್ಯತೆಯಿಂದ ಕೂಡಿರಬೇಕು. ಅದರಲ್ಲೂ ಪುರುಷ ಮತ್ತು ಮಹಿಳೆಯರ ಸ್ನೇಹದ ವಿಚಾರದಲ್ಲಿ ಇದು ತುಂಬಾ ಗಂಭೀರವಾದ ವಿಷಯ. ಸಭ್ಯತೆಯ ಎಲ್ಲೇ ಮೀರಿದಾಗ ಅದನ್ನು ಪತಿಯೂ ವಿರೋಧಿಸದೇ ಇರಲು ಸಾಧ್ಯ ಇಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಇನ್ನು ಮುಂದುವರಿದು ಹೇಳಿದ ನ್ಯಾಯಮೂರ್ತಿಗಳು ತನ್ನ ಸಂಗಾತಿಯ ವಿರೋಧದ ನಡುವೆಯೂ ಇಂತಹ ಅಶ್ಲೀಲ ಸಂಭಾಷಣೆಗಳನ್ನು ಮುಂದವರಿಸಿದಲ್ಲಿ ಇದು ಅವಳು ಅವನಿಗೆ ನೀಡುತ್ತಿರುವ ಮಾನಸಿಕ ಕ್ರೌರ್ಯತೆಯ ಗುರುತೇ ಹೊರತು ಬೇರೆನಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಿಂದಿ ಹೇರಿಕೆ ಸಮರ್ಥಿಸಿದ ಪವನ್ ಕಲ್ಯಾಣ್.. ತಮಿಳು ಸಿನಿಮಾ ತಾರೆಯರ ವಿರುದ್ಧ ಬೊಟ್ಟು ತೋರಿದ DCM

2018ರಲ್ಲಿ ಮದವೆಯಾಗಿದ್ದ ಜೋಡಿ, ಪತ್ನಿ ತನ್ನ ಮಾಜಿ ಪ್ರಿಯಕರನ ಜೊತೆ ನಿರಂತರವಾಗಿ ಮೊಬೈಲ್​ನಲ್ಲಿ ಮಾತಾಡುತ್ತಿದ್ದಳು. ವಾಟ್ಸಪ್​ನಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಅಶ್ಲೀಲ ಸಂಭಾಷಣೆ ನಡೆಸುತ್ತಿದ್ದಳು ಎಂದು ಆರೋಪಿಸಿದ್ದ. ಇದನ್ನು ಅಲ್ಲಗಳೆದ ಪತ್ನಿ ನನಗೆ ಆ ರೀತಿಯಾದ ಯಾವುದೇ ಸಂಬಂಧ ಇರಲಿಲ್ಲ. ನನ್ನ ಪತಿ ನನ್ನ ವಾಟ್ಸಾಪ್ ಹ್ಯಾಕ್ ಮಾಡಿ ಬೇರೆ ಪುರುಷನೊಂದಿಗೆ ತಾನೇ ಚಾಟ್​ ಮಾಡಿ ಸುಳ್ಳು ಸಾಕ್ಷಿ ಸೃಷ್ಟಿಸಿದ್ದಾನೆ ಎಂದು ವಾದಿಸಿದ್ದಾಳೆ. ಜೊತೆಗೆ ಗಂಡ ನನ್ನ ಖಾಸಗಿ ಬದುಕಿನ ನಿಯಮವನ್ನು ಉಲ್ಲಂಘಿಸಿದ್ದಾನೆ. ಅದು ಮಾತ್ರವಲ್ಲ 25 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಪೀಡಿಸಿದ್ದಾನೆ ಎಂದು ಆರೋಪ ಮಾಡಿದ್ದಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment