ಸಾಕ್ಷಿದಾರರಿಗೆ ವಯೋಮಿತಿ ಎಂಬುದಿಲ್ಲ.. ಮಕ್ಕಳ ಸಾಕ್ಷಿಯನ್ನು ಪರಿಗಣಿಸಬಹುದು.. ಸುಪ್ರೀಂಕೋರ್ಟ್​

author-image
Gopal Kulkarni
Updated On
ನ್ಯಾಯಾಲಯದಲ್ಲಿ ಉದ್ಯೋಗ ಅವಕಾಶ.. 241 ಸರ್ಕಾರಿ ಕೆಲಸಗಳಿಗೆ ಇಂದಿನಿಂದ ಅರ್ಜಿ ಆರಂಭ
Advertisment
  • ಸಾಕ್ಷಿ ಹೇಳಲು ಇಂತಹುದೇ ವಯಸ್ಸಿನವರು ಇರಬೇಕೆಂದಿಲ್ಲ
  • ಮಕ್ಕಳ ಸಾಕ್ಷಿಯನ್ನು ಪರಿಗಣಿಸಬಹುದು ಎಂದ ಸುಪ್ರೀಂಕೋರ್ಟ್​
  • ಮಕ್ಕಳು ಹೇಳಿಕೆಯನ್ನು ದಾಖಲಿಸುವಾಗ ಈ ಎಚ್ಚರಿಕೆ ಇರಬೇಕು

ಒಂದು ವೇಳೆ ಮಗು ಸಾಕ್ಷಿ ಹೇಳಲು ಸಾಮರ್ಥ್ಯ ಹೊಂದಿದ್ದರೆ ಅಂತಹ ಮಕ್ಕಳ ಸಾಕ್ಷಿಯನ್ನು ಕೂಡ ಉಳಿದವರ ಸಾಕ್ಷಿಯಂತೆಯೇ ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಪತ್ನಿಯನ್ನು ಹತ್ಯೆ ಮಾಡಿದ ಹಂತಕನ ವಿರುದ್ಧ ಆತನ ಎಳು ವರ್ಷದ ಮಗಳು ಸಾಕ್ಷಿ ನೀಡುವವ ವೇಳೆ ಈ ಮಾತನ್ನು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ ಬಿ ಪರ್ಡಿವಾಲಾ ಹಾಗೂ ಮನೋಜಿ ಮಿಶ್ರಾ ಅವರ ಪೀಠ ಮಧ್ಯಪ್ರದೇಶದ ಹೈಕೋರ್ಟ್​ನ ಆದೇಶವನ್ನು ರದ್ದುಗೊಳಿಸಿದ ಏಳು ವರ್ಷದ ಮಗಳ ಸಾಕ್ಷಿಯನ್ನು ಪರಿಗಣನೆನಗೆ ತೆಗೆದುಕೊಂಡಿದೆ. ಇದರೊಂದಿಗೆ ಸುಪ್ರೀಂಕೋರ್ಟ್​ ಸಾಕ್ಷ್ಯ ಕಾಯ್ದೆ ಯಾವುದೇ ರೀತಿಯ ಕನಿಷ್ಠ ವಯಸ್ಸನ್ನು ಸೂಚಿಸುವುದಿಲ್ಲ. ಮಕ್ಕಳ ಸಾಕ್ಷಿಯನ್ನು ನ್ಯಾಯಾಲಯಗಳು ತಿರಸ್ಕರಿಸುವಂತಿಲ್ಲ ಎಂದು ಕೂಡ ಸುಪ್ರೀಂಕೋರ್ಟ್ ಸೂಚಿಸಿದೆ. ಆದ್ರೆ ಈ ಬಗ್ಗೆ ಒಂದು ಮುನ್ನೆಚ್ಚರಿಕೆಯನ್ನು ನಾವು ಕಾಯ್ದುಕೊಳ್ಳಬೇಕು. ಸಾಕ್ಷಿ ಹೇಳುತ್ತಿರುವ ಮಗುವಿನ ಹೇಳಿಕೆ ವಿಶ್ವಾಸಾರ್ಹವಾಗಿದೆಯೋ ಇಲ್ಲವೋ ಎಂಬುದನ್ನು ನೋಡಬೇಕು. ಇಲ್ಲವೇ ಆ ಮಗುವಿಗೆ ಹೀಗೆ ಹೇಳು ಎಂದು ಯಾರಾದರು ಹೇಳಿಕೊಟ್ಟಿರುವ ಸಾಧ್ಯತೆಯೂ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಭಾರತ ನಂತರ ಅತೀ ಹೆಚ್ಚು ಹಸುಗಳನ್ನು ಹೊಂದಿರುವ ದೇಶ ಯಾವುದು ಗೊತ್ತಾ?

ಹೀಗಾಗಿ ಮಕ್ಕಳ ಸಾಕ್ಷಿಯನ್ನು ತಿರಸ್ಕರಿಸುವುದು ನ್ಯಾಯ ಸಮ್ಮತವಲ್ಲ. ಆದ್ರೆ ಮಕ್ಕಳು ಹೇಳುತ್ತಿರುವ ಸಾಕ್ಷಿ ಸ್ವಯಂಪ್ರೇರಿತ ಹೇಳಿಕೆಯಾಗಿದೆಯಾ ಅಥವಾ ಬೇರೆ ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಸಾಕ್ಷಿ ಹೇಳುತ್ತಿದೆಯಾ? ಎಂಬುದರ ಬಗ್ಗೆಯೂ ಕೂಡ ನ್ಯಾಯಾಲಯಗಳು ಯೋಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಇದನ್ನೂ ಓದಿ:18 ಕೋಟಿ ಸಾಲ ಮಾಡಿ ಟೀಕೆಗೆ ಗುರಿಯಾದ ಪ್ರೀತಿ ಜಿಂಟಾ.. ಕಾಂಗ್ರೆಸ್​ ವಿರುದ್ಧ ನಟಿ ಆಕ್ರೋಶ..!

ಮಕ್ಕಳ ಸಾಕ್ಷಿ ಅಪಯಾಕಾರಿ ಅವರು ಯಾರಿಂದಲೋ ಪ್ರಭಾವಿತರಾಗಿರುತ್ತಾರೆ ಎನ್ನುವ ಮೊದಲು ಟ್ರಯಲ್ ಕೋರ್ಟ್​ಗಳು ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅವರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವ ವೇಳೆ ಅಲರ್ಟ್ ಆಗಿರಬೇಕು ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment