/newsfirstlive-kannada/media/post_attachments/wp-content/uploads/2024/12/AMAN-GOEL.jpg)
ಅಮನ್ ಗೋಯಲ್ ಸದ್ಯ ಭಾರತದಲ್ಲಿ ಸದ್ದು ಮಾಡುತ್ತಿರುವ ಹೆಸರು. ಬಾಂಬೆ ಐಐಟಿಯ ವಿದ್ಯಾರ್ಥಿ ಈಗ ಮುಂಬೈ ಮೂಲದ ಗ್ರೇಲ್ಯಾಬ್ಸ್ ಎಐನ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಯಶಸ್ಸು ಈಗ ದೊಡ್ಡ ಚರ್ಚೆಯ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವೈಯಕ್ತಿಕ ಬದುಕಿನ ಪ್ರಯಾಣವನ್ನು ಹಂಚಿಕೊಂಡ ಮೇಲೆ ಇನ್ನೂ ಹೆಚ್ಚು ದೇಶದ ಜನರ ಗಮನ ಸೆಳೆದಿದ್ದಾರೆ.
ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವುದೇ ವಿಶೇಷವಾಗಿದೆ. ನಾನು ನಿತ್ಯ 5 ಗಂಟೆಗೆ ಏಳುವುದಿಲ್ಲ, ತಣ್ಣೀರು ಸ್ನಾನ ಮಾಡುವುದಿಲ್ಲ, ನಾನು ಪುಸ್ತಕಗಳನ್ನು ಓದುವುದಿಲ್ಲ. ಯಾರ ಆದರ್ಶಗಳನ್ನು ನಾನು ಪಾಲಿಸುವುದಿಲ್ಲ, ಒಬ್ಬ ಕೋಟ್ಯಾಧಿಪತಿಯಾಗಲು ಇಷ್ಟೆಲ್ಲಾ ಇರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದ್ರೆ ನಾನು ನನ್ನ 20ನೇ ವಯಸ್ಸಿನಲ್ಲಿಯೇ ಅದನ್ನು ಸಾಧಿಸಿದ್ದೇನೆ ಮೇಲಿನವುಗಳನ್ನು ಪಾಲಿಸದೇ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಶತಕೋಟ್ಯಾಧಿಪತಿಗಳ ಲಿಸ್ಟ್​ನಿಂದ ಮುಖೇಶ್ ಅಂಬಾನಿ, ಗೌತಮ್ ಅದಾನಿ ಔಟ್.. ಕಾರಣವೇನು..?
ನಾನು ನಿತ್ಯ 8.30ಕ್ಕೆ ಏಳುತ್ತೇನೆ ಒಮ್ಮೊಮ್ಮೆ 9 ಗಂಟೆಗೆ. ನಿತ್ಯ 8 ಗಂಟೆಗಳ ಕಾಲ ನಿದ್ರಿಸುತ್ತೇನೆ. ನಾನು ಅಪರೂಪಕ್ಕೆ ಪುಸ್ತಕಗಳನ್ನು ಓದುತ್ತೇನೆ. ಅದು ಕೂಡ ನಾನು ಅದನ್ನು ಯಾವಾಗ ಕೈಗೆತ್ತಿಕೊಂಡೆ ಎಂಬುದು ಕೂಡ ನೆನಪಿರುವುದಿಲ್ಲ.
ನಾನು ಸಾಮಾನ್ಯವಾಗಿ ಟ್ವಿಟರ್ ಮತ್ತು ಪ್ರೊಡಕಾಸ್ಟ್​ಗಳಿಂದ ಹೆಚ್ಚು ಕಲಿಯುತ್ತೇನೆ. ಅದು ನನಗೆ ಬೇಗ, ಯೋಗ್ಯವಾದ ಮತ್ತು ಸ್ಪಷ್ಟವಾದ ಮಾಹಿತಿ ನೀಡುತ್ತದೆ.
ಇಲ್ಲಿ ಒಂದು ಸತ್ಯವಿದೆ. ಯಶಸ್ಸಿಗೆ ಯಾರದ್ದೇ ಪ್ರಭಾವ ಆಗಬೇಕಿಲ್ಲ. ನೀವು ಮಿಲಿಯನೀಯರ್ ಆಗಬೇಕು ಎಂಬ ಕನಸಿದ್ದರೆ. ನಿಮ್ಮಲ್ಲಿ ಸ್ವಲ್ಪ ಮೌಲ್ಯಯುತವಾದದ್ದನ್ನು ಬೆಳೆಸಿಕೊಳ್ಳಿ. ಅದನ್ನು ಗ್ರಾಹಕರಿಗೆ ಮಾರಿ. ನೀವು ಕೋಟ್ಯಾಧೀಪತಿಗಳಾಗುವವರೆಗೂ ಅದನ್ನು ಮುಂದುವರಿಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗೆ ಬಂದು ಸೀರೆ ಖರೀದಿಸಿದ ನೀತಾ ಅಂಬಾನಿ; ಏನಿದರ ವಿಶೇಷ? ವಿಡಿಯೋ ಫುಲ್ ವೈರಲ್​!
ನೀವು 12 ಗಂಟೆಗೆ ಎದ್ದರೂ ಕೂಡ ಅದು ಸಮಸ್ಯೆಯಲ್ಲ. ನೀವು ಎಂದಿಗೂ ಪುಸ್ತಕವನ್ನು ಕೈಗೆತ್ತಿಕೊಳ್ಳದಿದ್ದರೂ ಸಮಸ್ಯೆಯಿಲ್ಲ. ಯಶಸ್ಸು ಎನ್ನುವುದು ಆದರ್ಶಗಳ ಆಯ್ಕೆಯಿಂದ ಬರುವುದಲ್ಲ. ನಾವು ಅದನ್ನು ಕ್ರಿಯೆಗೆ ತರಬೇಕು ಹಾಗೂ ಆ ಮೌಲ್ಯವನ್ನು ತಲುಪಬೇಕು ಎಂದು ಹೇಳಿದ್ದಾರೆ.
ನೀವು ಯಾವದೇ ಕೆಲಸ ಮಾಡಿ ಕೊನೆಗೆ ಅದರ ಫಲಿತಾಂಶವೇ ಮುಖ್ಯವಾಗಿರುತ್ತದೆ . ಈ ಪೋಸ್ಟ್ ಒಳ್ಳೆಯ ಅಭ್ಯಾಸಗಳನ್ನು ದೂಷಿಸುವುದಕ್ಕೆ ಅಲ್ಲ. ಮುಂಜಾನೆ ಏಳುವುದು, ವಾಕ್ ಮಾಡುವುದು, ಇವೆಲ್ಲವೂ ಕೂಡ ಪ್ರಯೋಜನಕಾರಿಯೇ. ಆದ್ರೆ ಯಾವುದನ್ನಾದರೂ ಕೇವಲ ಪ್ರಭಾವಿಗಳು ಹೇಳಿದರು ಎಂಬ ಕಾರಣಕ್ಕಾಗಿ ಮಾತ್ರ ಮಾಡಬೇಡಿ ಎಂದು ಅಮನ್ ಗೋಯಲ್ ಹೇಳಿದ್ದಾರೆ.
ಅಮನ್ ಗೋಯಲ್ ಅವರ ಸಾಧನೆಯ ಬಗ್ಗೆ ನೋಡಿದಾಗ ಅವರ ಲಿಂಕ್ಡ್​ಇನ್​ ಪ್ರೋಫೈಲ್​ನಲ್ಲಿ ಅವರು ಐಐಟಿ ಬಾಂಬೆಯಲ್ಲಿ 2017ರಲ್ಲಿ ಕಂಪ್ಯೂಟರ್​ ಸೈನ್ಸ್ ಮತ್ತು ಇಂಜನೀಯರಿಂಗ್​ನಲ್ಲಿ ಪದವಿ ಮುಗಿಸಿದ್ದಾರೆ. ಬಳಿಕ ಕಾಂಗ್ನೊ ಎಐ ನಲ್ಲಿ ಸಹ ಸಂಸ್ಥಾಪಕಾರಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಗ್ರೇಯ್​ ಲ್ಯಾಬ್ಸ್ ಎಐನ ಮುಖ್ಯಸ್ಥರಾಗಿದ್ದಾರೆ. ಮುಂಬೈ ಮೂಲದ ಈ ಕಂಪನಿ ಎಐ ಸೊಲ್ಯೂಷನ್​ಗಳನ್ನು ನೀಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us