newsfirstkannada.com

ಕರ್ನಾಟಕ ಬಿಜೆಪಿಯನ್ನೇ ಕಡೆಗಣಿಸಿದ ಅಮಿತ್​ ಶಾ, ಮೋದಿ; ಇನ್ನೂ ಆಯ್ಕೆಯಾಗಿಲ್ಲ ವಿಪಕ್ಷ ನಾಯಕ

Share :

Published July 28, 2023 at 10:18pm

Update July 28, 2023 at 10:43pm

  ಸಮರ್ಥ ನಾಯಕನಿಲ್ಲದೇ ಒದ್ದಾಡುತ್ತಿದೆ ರಾಜ್ಯ ಬಿಜೆಪಿ!

  ‘ಬಣಗಳ’ ಜಂಜಾಟ ರಾಜ್ಯ ಬಿಜೆಪಿಯ ಪರಿಸ್ಥಿತಿಗೆ ಕಾರಣ

  ಹೈಕಮಾಂಡ್​ ಕಡೆಗಣನೆಗೆ ಒಳಗಾಯ್ತಾ ರಾಜ್ಯ ಬಿಜೆಪಿ?

ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳುಗಳೇ ಉರುಳಿ ಹೋಗಿದೆ. ಬಜೆಟ್ ಅಧಿವೇಶನವೂ ಮುಗಿದೋಯ್ತು. ಈಗ ಕಾಡುತ್ತಿರೋ ಕಟ್ಟಕಡೆಯ ಪ್ರಶ್ನೆ ವಿಪಕ್ಷ ನಾಯಕ ಎಲ್ಲಿ? ಇದು ಕೇವಲ ಕಾಂಗ್ರೆಸ್ ನಾಯಕರ ಪ್ರಶ್ನೆಯಲ್ಲ. ಬದಲಾಗಿ ಕೇಸರಿ ಕಲಿಗಳಿಗೆ ಎದುರಾಗಿರೋ ಬಿಗ್ ಕ್ವಶ್ಚನ್‌. ಕಮಲ ಶಾಸಕರಿಗೆ ಮಹಾ ಟೆನ್ಶನ್‌ ಎದುರಾಗಿದೆ. ರಾಜ್ಯದ ಆಡಳಿತ ಯಂತ್ರ ಹಳಿ ತಪ್ಪಿದಾಗ ಚುರುಕು ಮುಟ್ಟಿಸಲು, ಸರ್ಕಾರ ತಪ್ಪು ದಾರಿ ಹಿಡಿದಿದ್ರೆ ಪ್ರಶ್ನಿಸೋ ಅಧಿಕಾರ ಇರೋದು ವಿರೋಧ ಪಕ್ಷದ ನಾಯಕನಿಗೆ. ಆದ್ರೆ, ಕರುನಾಡಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 76 ದಿನಗಳು ಕಳೆದಿವೆ. ಆದ್ರೂ ಬಿಜೆಪಿಯಿಂದ ವಿಪಕ್ಷ ನಾಯಕನ ಆಯ್ಕೆ ಮಾಡದಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಾವಿಕನಿಲ್ಲದ ದೋಣಿಯಂತಾಗಿದ್ಯಾ ರಾಜ್ಯ ‘ಕಮಲ’ ಪಾಳಯ?
ಹೈಕಮಾಂಡ್ ಆಟ.. ವಿಪಕ್ಷ ನಾಯಕನಿಲ್ಲದೇ ಶಾಸಕರಿಗೆ ಸಂಕಟ

ರಾಜ್ಯದಲ್ಲಿ ವಿಧಾನಸಭೆ ಕದನದಲ್ಲಿ ಸೋಲುಂಡ ಮೇಲೆ ರಾಜ್ಯ ಬಿಜೆಪಿ ಹೈ ನಾಯಕರ ಕಡಗಣನೆಗೆ ಒಳಗಾಗಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಚುನಾವಣೆ ವೇಳೆ ತೋರಿದ ಉತ್ಸಾಹವನ್ನ ವಿಪಕ್ಷ ನಾಯಕನ ಆಯ್ಕೆಯಲ್ಲಿ ತೋರದೇ ಕರುನಾಡನ್ನೇ ಬಿಜೆಪಿ ಹೈ ಕಮಾಂಡ್‌ ಮರೆತಂತಿದೆ. ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಮೀನಾಮೇಷ ಎಣಿಸುತ್ತಿದೆ. ರಾಜ್ಯದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೇ ಅಧಿವೇಶನವೂ ಮುಗಿದೋಗಿದೆ. ಆದ್ರೂ ವಿಪಕ್ಷ ನಾಯಕನ ಆಯ್ಕೆ ಆಗೇ ಇಲ್ಲ. ಇದು ಕೇಸರಿ ಪಡೆಯ ಶಾಸಕರಲ್ಲಿ ತಳಮಳಕ್ಕೆ ಕಾರಣವಾಗಿದೆ.

ಬಿಜೆಪಿ ಶಾಸಕರ ಅಳಲೇನು?

1. ಈವರೆಗೂ ಬಿಜೆಪಿಯಲ್ಲಿ ಒಂದೂ ಶಾಸಕಾಂಗ ಸಭೆ ನಡೆದಿಲ್ಲ
2. ನಮ್ಮನ್ನ ಹೇಳೋರು, ಕೇಳೋರು ಯಾರೂ ಸಹ ಇಲ್ಲದಂತಾಗಿದೆ
3. ನಮಗೂ, ನಮ್ಮ ನಮ್ಮ ಕ್ಷೇತ್ರದಲ್ಲಿ ಕಾಮಗಾರಿಗಳು ಮಾಡಿಸಬೇಕು
4. ಅನುದಾನ ಬೇಕಾಗಿದ್ದು, ಆ ಹಣವನ್ನ ನಮಗೆ ನೀಡೋಱರು?
5. ನಾವು ಜನರಿಂದಲೇ ಆಯ್ಕೆಯಾಗಿರೋದು, ಏನ್ ಹೇಳಬೇಕು?
6. ಮೊದಲು ನಾವು ಸಹ ಶಾಸಕಾಂಗ ಪಕ್ಷದ ಸಭೆಯನ್ನ ನಡೆಸಬೇಕು
7. ಹೈಕಮಾಂಡ್ ತಿಳಿಸುವವರೆಗೂ ಒಬ್ಬರನ್ನ ಆಯ್ಕೆ ಮಾಡಬೇಕು
8. ಹೈಕಮಾಂಡ್ ಸೂಚಿಸುವವರೆಗೆ ಅವರೇ ನಮ್ಮ ನಾಯಕರಾಗಿರಲಿ
9. ಬಳಿಕ ಹೈಕಮಾಂಡ್ ಹೇಳಿದೋರನ್ನ ನಾಯಕನೆಂದು ಒಪ್ಪುತ್ತೇವೆ

ಈಗಾಗಲೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಶಾಸಕರು ಅನುದಾನ, ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸ್ತಿದ್ದಾರೆ. ಆದ್ರೆ, ಅಧಿಕೃತ ನಾಯಕನಿಲ್ಲದೇ ಬಿಜೆಪಿ ಶಾಸಕರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಈ ಮಧ್ಯೆ ವಿಪಕ್ಷ ನಾಯಕನ ರೇಸ್‌ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್ ಹೆಸರು ಕೇಳಿ ಬಂದಿದೆ. ಆದ್ರೂ ಹೈ ಕಮಾಂಡ್‌ ರಾಜ್ಯ ಬಿಜೆಪಿಯತ್ತ ತಿರುಗಿ ನೋಡದೇ ಇರೋದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ.

ರಾಜ್ಯ ಬಿಜೆಪಿ ಹೈಕಮಾಂಡ್​ ನಾಯಕರ ಕಡೆಗಣನೆಗೆ ಒಳಗಾಯ್ತಾ? ವಿಪಕ್ಷ ನಾಯಕನ ಆಯ್ಕೆಗೆ ಗ್ರೀನ್​ ಸಿಗ್ನಲ್​ ಕೊಡುತ್ತಿಲ್ಲ ಯಾಕೆ? ಅಲ್ಲದೇ ಪಕ್ಷದಲ್ಲಿರೋ ‘ಬಣಗಳ’ ಜಂಜಾಟ ಕೂಡಾ ರಾಜ್ಯ ಬಿಜೆಪಿಯ ಈ ಪರಿಸ್ಥಿತಿಗೆ ಕಾರಣವಾಗಿದ್ಯಾ? ಅಥವಾ ಸಮರ್ಥ ನಾಯಕನಿಲ್ಲದೇ ವಿಪಕ್ಷ ನಾಯಕನ ಆಯ್ಕೆ ಮಾಡಲು ರಾಜ್ಯ ಬಿಜೆಪಿ ಒದ್ದಾಡುತ್ತಿದ್ಯಾ? ಹೀಗೆ ಹಲವು ಪ್ರಶ್ನೆಗಳು ದಾಂಗುಡಿ ಇಟ್ಟಿವೆ. ಒಟ್ಟಾರೆ, ಬಿಜೆಪಿ ಶಾಸಕರು ಧ್ವನಿ ಎತ್ತಿದ ಮೇಲಾದ್ರೂ ವಿಪಕ್ಷ ನಾಯಕನ ಆಯ್ಕೆಯಾಗುತ್ತಾ? ಶಾಸಕರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗುತ್ತಾ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕ ಬಿಜೆಪಿಯನ್ನೇ ಕಡೆಗಣಿಸಿದ ಅಮಿತ್​ ಶಾ, ಮೋದಿ; ಇನ್ನೂ ಆಯ್ಕೆಯಾಗಿಲ್ಲ ವಿಪಕ್ಷ ನಾಯಕ

https://newsfirstlive.com/wp-content/uploads/2023/07/bjp-1.jpg

Load More