ಬರೀ ‘‘MAYDAY.. MAYDAY’ ಅಲ್ಲ.. ಪತನದ ಕೊನೆ ಕ್ಷಣದಲ್ಲಿ ಪೈಲಟ್ ಹೇಳಿದ್ದೇನು? ಥ್ರಸ್ಟ್ ಅಂದರೇನು..?

author-image
Veena Gangani
Updated On
ಬರೀ ‘‘MAYDAY.. MAYDAY’ ಅಲ್ಲ.. ಪತನದ ಕೊನೆ ಕ್ಷಣದಲ್ಲಿ ಪೈಲಟ್ ಹೇಳಿದ್ದೇನು? ಥ್ರಸ್ಟ್ ಅಂದರೇನು..?
Advertisment
  • ಪತನಕ್ಕೂ ಮೊದಲು ಪೈಲಟ್‌‌ಗಳು ಮಾತನಾಡಿದ್ದು 4 ಮಾತು
  • ‘ವಿಮಾನ ಥ್ರಸ್ಟ್‌ನ ನಿಗದಿಯಂತೆ ತಲುಪೋಕೆ ಸಾಧ್ಯವಾಗ್ತಿಲ್ಲ’
  • ಕೊನೆಯದಾಗಿ ಪೈಲಟ್‌ಗಳು ಎಟಿಸಿಗೆ ನೀಡಿದ ಸಂದೇಶ ಏನು?

ವಿಮಾನ ದುರಂತ ನಡೆದ ಮೇಘನಿ ನಗರವೀಗ ಸ್ಮಶಾನ ಮೌನ ಆವರಿಸಿದೆ. ಒಂದೊಂದು ಫೋಟೋಗಳು ಭೀಕರತೆಗೆ ಸಾಕ್ಷ್ಯ ಹೇಳುತ್ತಿವೆ. ಕನಸುಗಳ ಮೂಟೆ ಹೊತ್ತು ಪ್ರಯಾಣ ಹೊರಟವರು ಘೋರ ಅಂತ್ಯದಲ್ಲಿ ಉಸಿರು ನಿಲ್ಲಿಸಿದ್ದಾರೆ. ಈ ಒಂದು ದುರಂತದಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ.
ಬರೋಬ್ಬರಿ 274 ಜನರ ಜೀವ ತೆಗೆದ ಈ ದುರಂತ ಕಾರಣ ಏನು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಪೈಲಟ್‌ ತಪ್ಪೋ? ತಾಂತ್ರಿಕ ದೋಷವೋ? ಇಂಜಿನ್‌ ವೈಫಲ್ಯವೇ? ಅಥವಾ ಬಾಹ್ಯ ಕಾರಣಗಳಿಂದ ವಿಮಾನ ಪತನವಾಗಿದೆಯಾ ಎಂಬ ನಾನಾ ಪ್ರಶ್ನೆಗಳು ಕಾಡುತ್ತಿದೆ.

ಇದನ್ನೂ ಓದಿ:ಜೇನುನೊಣ ನುಂಗಿ ಜೀವ ಬಿಟ್ಟ ಸಂಜಯ್ ಕಪೂರ್.. ಇಡೀ ಕಪೂರ್​ ಫ್ಯಾಮಿಲಿ, ಶಾರುಖ್​​ಗಿಂತ ದೊಡ್ಡ ಶ್ರೀಮಂತ!

publive-image

ಇದೆಲ್ಲದರ ನಡುವೆಯೇ ಇದೀಗ ದುರಂತಕ್ಕೀಡಾದ ಏರ್​ ಇಂಡಿಯಾ ವಿಮಾನದ ಪೈಲಟ್‌ ಹಾಗೂ ಎಟಿಸಿ ನಡುವಿನ ಕೊನೆಯ ಸಂಭಾಷಣೆ ರಿವೀಲ್‌ ಆಗಿದ್ದು, ಸಂಚಲನವನ್ನು ಸೃಷ್ಟಿಸಿದೆ. ಗುಜರಾತ್​ನ ಅಹಮದಾಬಾದ್​ ಏರ್​ಪೋರ್ಟ್​ನಿಂದ ಟೇಕಾಫ್​ ಆದ ಏರ್​ ಇಂಡಿಯಾ 171 ವಿಮಾನ 2 ಕಿ.ಮೀ. ದೂರದಲ್ಲೇ ಜನವಸತಿ ಪ್ರದೇಶದ ಮೇಲೆ ಬಿದ್ದು ಪತನವಾಗಿತ್ತು. ಪತನಕ್ಕೂ ಮುನ್ನ ಪೈಲಟ್​ ಸುಮಿತ್‌ ಸಬರ್‌ವಾಲ್‌ ಎಟಿಸಿಗೆ ಮೇಡೇ, ಮೇಡೇ, ಮೇಡೇ ಎಂದು ಸಂದೇಶ ರವಾನಿಸಿದ್ರು. ಅವರು ಕಳುಹಿಸಿ 4 ರಿಂದ 5 ಸೆಕೆಂಡ್‌ಗಳ ಸಂದೇಶದಲ್ಲಿ ಆ ನಾಲ್ಕು ವಾಕ್ಯಗಳು ದುರಂತದ ತನಿಖೆಗೆ ಬೇರೆಯದ್ದೇ ಆಯಾಮ ನೀಡಲಿದೆ.

publive-image

ಏರ್ ಇಂಡಿಯಾ ಪೈಲಟ್ ಗಳು ಎಟಿಸಿಗೆ ನೀಡಿದ ಸಂದೇಶವೇನು?

ವಿಮಾನವು ನಿಗದಿಯಂತೆ ಥ್ರಸ್ಟ್​ ಅನ್ನು ತಲುಪಲು ಸಾಧ್ಯವಾಗಿಲ್ಲ. ಈ ಕಮ್ಯೂನಿಕೇಷನ್​​ ಲೈನ್​ ಬಹಳ ವೀಕ್​ ಆಗಿದೆ. ವಿಮಾನವು ಬೀಳುತ್ತಿದೆ. ಮೇಡೇ ಮೇಡೇ ಎಂದು ಎಟಿಸಿಗೆ ಪೈಲಟ್​​ ತಮ್ಮ ಕೊನೆಯ ಸಂದೇಶವನ್ನು ರವಾನಿಸಿದ್ದರು.

publive-image

ಥ್ರಸ್ಟ್ ಅಂದರೇನು?

ಹೆಚ್ಚಿನ ಶಕ್ತಿಯೊಂದಿಗೆ ವಿಮಾನ ಎತ್ತರಕ್ಕೆ ಹಾರಿ ಮುನ್ನುಗ್ಗುವ ಸಾಮರ್ಥ್ಯಕ್ಕೆ ಥ್ರಸ್ಟ್​ ಎಂದು ಕರೆಯುತ್ತಾರೆ. ವಿಮಾನದ ಮೇಲೆತ್ತುವಿಕೆಯು ವೇಗಕ್ಕೆ ನಿಕಟವಾದ ಸಂಬಂಧ ಹೊಂದಿದೆ. ಮೇಲೆತ್ತುವಿಕೆಯಲ್ಲಿ ಯಾವುದೇ ವೈಫಲ್ಯವು ವಿಮಾನದ ಕುಸಿತಕ್ಕೆ ಕಾರಣವಾಗಬಹುದು. ವಿಮಾನದ ಇತರ ಭಾಗಗಳಿಗೆ ಬಲ ವರ್ಗಾಯಿಸಲು ರೆಕ್ಕೆಗಳು ಸಹಾಯ ಮಾಡುತ್ತವೆ. ಏರ್​ ಇಂಡಿಯಾದಲ್ಲಿ ಥ್ರಸ್ಟ್ ಅನ್ನು ನಿಗದಿಯಂತೆ ತಲುಪಲು ಸಾಧ್ಯವಾಗಿಲ್ಲ. ಆದ್ದರಿಂದ ವಿಮಾನಕ್ಕೆ ಮೇಲಾರಲಿ ಸರಿಯಾಗಿ ಶಕ್ತಿ ಅಥವಾ ಥ್ರಸ್ಟ್ ಸಾಧಿಸಲಾಗದ ಕಾರಣ ವಿಮಾನ ಪತನ ಅನುಮಾನ ದಟ್ಟವಾಗುತ್ತಿದೆ.

publive-image

ಮೃತರ ಕುಟುಂಬಕ್ಕೆ ಏರ್​ ಇಂಡಿಯಾದಿಂದ ಹೆಚ್ಚುವರಿ ಪರಿಹಾರ

ದುರಂತ ಸಂಭವಿಸಿದ ದಿನವೇ ಏರ್ ಇಂಡಿಯಾ, ಸಂತ್ರಸ್ತ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಿಸಿತ್ತು. ಈಗ ಘಟನೆಯ ದಿನಕ್ಕೆ, 1 ಕೋಟಿ ರೂಪಾಯಿಗಳಿಗೆ ಹೆಚ್ಚುವರಿಯಾಗಿ 25 ಲಕ್ಷ ರೂಪಾಯಿಗಳನ್ನು ಒದಗಿಸಲು ನಿರ್ಧರಿಸಿದೆ. ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಮಧ್ಯಂತರ ಪರಿಹಾರವಾಗಿ 25 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಏರ್​ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದೆ. ಇನ್ನು, ಟಾಟಾ ಗ್ರೂಪ್​ಗೆ ಇದೊಂದು ಕಪ್ಪು ಚುಕ್ಕೆ ಆಗಿದ್ದು, ಇನ್ಮುಂದೆ ಏರ್​ ಇಂಡಿಯಾದ 171 ಹೆಸರನ್ನು ಬದಲಿಸಲು ಚಿಂತನೆ ನಡೆಸಿದೆ.
ಒಟ್ಟಾರೆ.. ಏರ್​ ಇಂಡಿಯಾ ವಿಮಾನದ ದುರಂತ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದೆ. ಇದೇ ವೇಳೆ ಪೈಲೆಟ್​ ನೀಡಿದ ಕೊನೆಯ ಸಂದೇಶವು ಮಹತ್ವ ಪಡೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment