/newsfirstlive-kannada/media/post_attachments/wp-content/uploads/2025/04/SIDDARAMAIAH.jpg)
40 ಪರ್ಸೆಂಟ್ ಕಮಿಷನ್.. ಇದರ ಬಗ್ಗೆ ಆರೋಪಗಳು ಮಾಡಿದ್ದಾಯ್ತು.. ಕೇಸ್ಗಳು ದಾಖಲಾಯ್ತು.. ಇದೇ ಒಂದು ಅಸ್ತ್ರವನ್ನಾಗಿ ಬಳಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಾಯ್ತು.. ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನ ನ್ಯಾಯಮೂರ್ತಿ ನಾಗಮೋಹನ್ ದಾಸ್ರನ್ನ ನೇಮಿಸಿ, ತನಿಖಾ ಸಮಿತಿ ರಚಿಸಿತ್ತು.. ಅ ಸಮಿತಿ ಕೂಡ ಸಿದ್ದರಾಮಯ್ಯ ಸರ್ಕಾರಕ್ಕೆ ವರದಿ ಕೊಟ್ಟಿತ್ತು. ಈ ವರದಿಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆಯಾಗಿದೆ.
ಕಾಂಗ್ರೆಸ್ಗೆ ತೀವ್ರ ಹಿನ್ನಡೆ
ನಾಗಮೋಹನ್ ದಾಸ್ ವಿಚಾರಣಾ ಆಯೋಗವು 20,000 ಪುಟಗಳ ಬೃಹತ್ ತನಿಖಾ ವರದಿ ನೀಡಿದೆ. ಬಿಜೆಪಿ ವಿರುದ್ಧ ಸಾಲು ಸಾಲು ಆರೋಪ ಮಾಡ್ತಿದ್ದ ಕಾಂಗ್ರೆಸ್ಗೆ ವರದಿಯಿಂದ ತೀವ್ರ ಮುಖಭಂಗವಾಗಿದೆ. ಕಮಿಷನ್ ಪಡೆದಿರಬಹುದು.. ಪಡೆಯದೇ ಇರಬಹುದು.. ಆಗಿರಬಹುದು.. ಆಗದೇ ಇರಬಹುದು.. ಇದ್ದೂ ಇಲ್ಲದಂತೆ ವರದಿ ಕೊಟ್ಟಿದ್ದು, ಕಮಲ ನಾಯಕರ ವಿರದ್ಧ ತನಿಖಾಸ್ತ್ರ ಹೂಡಿದ್ದ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗಿದೆ.
ಇದನ್ನೂ ಓದಿ: ಮಧ್ಯರಾತ್ರಿ 1 ಗಂಟೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಪಾಸ್; ಹೆಸರು ಕೂಡ ಬದಲಾವಣೆ..!
ಇದೆ ಆದ್ರೆ ಇಲ್ಲ!
ಬಹಿರಂಗ ಆರೋಪ ಮಾಡಿದ ಗುತ್ತಿಗೆದಾರರ ಸಂಘ 40% ಕಮಿಷನ್ ಬಗ್ಗೆ ದಾಖಲೆ ಕೊಟ್ಟಿಲ್ಲ. ರಾಜ್ಯ ಗುತ್ತಿಗೆದಾರರ ಸಂಘ ಕೊಟ್ಟ ದಾಖಲೆಗಳಲ್ಲಿ 40% ಕಮಿಷನ್ ಪಡೆದ ಬಗ್ಗೆ ಪ್ರಸ್ತಾಪವೇ ಆಗಿಲ್ಲ ಎಂದು ಹೇಳಲಾಗಿದೆ. ಗುತ್ತಿಗೆದಾರರ ಸಂಘ ಮಾಡಿರುವ ಆರೋಪಗಳೆಲ್ಲಾ ನೂರಕ್ಕೆ ನೂರು ಸತ್ಯವಾಗದೇ ಇರಬಹುದು. ಆದ್ರೆ 40 ಪರ್ಸೆಂಟ್ ಆರೋಪದಲ್ಲಿ ಸ್ವಲ್ಪ ಸತ್ಯಾಂಶ ಅಲ್ಲಗಳೆಯುವಂತಿಲ್ಲ.. ನೂರರಷ್ಟು ಸತ್ಯ ಇಲ್ಲ.. ಸ್ವಲ್ಪ ಸತ್ಯಾಂಶ ಇದೆ ಎಂದ ತನಿಖಾ ಆಯೋಗ ವರದಿ ನೋಡಿ ಕಾಂಗ್ರೆಸ್ ನಾಯಕರಿಗೆ ಆಘಾತವಾಗಿದೆ.
ಈ ಬಗ್ಗೆ ವಿಪಕ್ಷ ನಾಯಕ ಆರ್.ಆಶೋಕ್ ಮಾತನಾಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಅವರು 40 ಪರ್ಸೆಂಟ್ ಕಮೀಷನ್ ಪಡೆಯುತ್ತಾರೆ ಅನ್ನೋದು ಸುಳ್ಳು. ಸುಳ್ಳಿನ ಸರದಾರರಾಗಿ, ಅದರ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ. ಸುಳ್ಳಿನ ಮೇಲೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನೀವು ಹೇಳಿದ್ದು ಎಲ್ಲಿಯೂ ಸಾಬೀತು ಆಗಿಲ್ಲ.
ವರದಿಯಲ್ಲಿ ಬಿಜೆಪಿಯ ಮಾಜಿ ಶಾಸಕಿ ಹೆಸರು ಉಲ್ಲೇಖ!
ಬಿಜೆಪಿಯ ಇಬ್ಬರು ಮಾಜಿ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆಯ ಹಿರಿಯ ಎಂಜಿನಿಯರ್ ಹೆಸರನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚಿತ್ರದುರ್ಗದ ಮಾಜಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಮತ್ತು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಎಸ್.ಎಫ್.ಪಾಟೀಲ್ ವಿರುದ್ಧದ ಪ್ರತ್ಯೇಕ ಕಿಕ್ ಬ್ಯಾಕ್ ಆರೋಪಗಳು ಸತ್ಯ ಎಂಬುದು ಆಯೋಗಕ್ಕೆ ತಿಳಿದುಬಂದಿದೆ. ಇದು ಗುತ್ತಿಗೆದಾರರ ಸಾಕ್ಷ್ಯವನ್ನ ಆಧರಿಸಿದೆ.
ಇದನ್ನೂ ಓದಿ: ಬಿಜೆಪಿ ಹೋರಾಟಕ್ಕೆ ಯಡಿಯೂರಪ್ಪ ಬಲ.. ಫ್ರೀಡಂ ಪಾರ್ಕ್ನಲ್ಲಿ ರಾತ್ರಿಯಿಡೀ ಪ್ರತಿಭಟನೆ ಹೇಗಿತ್ತು..? Photos
ಈ ಬಗ್ಗೆ ಪ್ರತಿಕ್ರಿಯಿಸಿರುವ ರೂಪಾಲಿ ನಾಯ್ಕ್ ಇದು ಶುದ್ಧ ಸುಳ್ಳು. ಯಾಕೆಂದರೆ ಮಾಧವ್ ನಾಯ್ಕ್ ಹೆಸರು ಉಲ್ಲೇಖ ಆಗಿದೆ ಎಂದು ಹೇಳಲಾಗಿದೆ. ಮಾಧವ್ ನಾಯ್ಕ್ ಮೊದಲು ಇದೇ ರೀತಿ ಬಿಜೆಪಿ ನಾಯಕರ ಮೇಲೆ ಆಪಾದನೆ ಮಾಡಿದ್ದರು. ಅಧಿಕಾರಿಗಳ ಮೇಲೂ ತೊಂದರೆ ಕೊಡುತ್ತಿದ್ದರು ಎಂದಿದ್ದಾರೆ.
ಒಟ್ಟಾರೆ, ವರದಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ಮಾಡಿರೋ ಆರೋಪ ಸತ್ಯವಾಗದಿರಬಹುದು ಅನ್ನೋ ಉಲ್ಲೇಖ. ಗುತ್ತಿಗೆದಾರರ ಆರೋಪ ಅಲ್ಲಗಳೆಯುವಂತಿಲ್ಲ ಅನ್ನೋ ಅಂಶ.. ಇದರಲ್ಲಿ ಯಾವುದನ್ನ ನಂಬ ಬೇಕು ಅನ್ನೋ ಕನ್ಫ್ಯೂಶನ್ನಲ್ಲಿದೆ ಕಾಂಗ್ರೆಸ್ ಸರ್ಕಾರ.
ಇದನ್ನೂ ಓದಿ: ಬಿಜೆಪಿ ಹೋರಾಟಕ್ಕೆ ಯಡಿಯೂರಪ್ಪ ಬಲ.. ಫ್ರೀಡಂ ಪಾರ್ಕ್ನಲ್ಲಿ ರಾತ್ರಿಯಿಡೀ ಪ್ರತಿಭಟನೆ ಹೇಗಿತ್ತು..? Photos
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್