newsfirstkannada.com

ಟಿ20 ವಿಶ್ವಕಪ್​​ ಸೆಮಿಫೈನಲ್​​ಗೆ ಹೊಸ ನಿಯಮ.. ಇದು ಟೀಂ ಇಂಡಿಯಾಗೆ ಹೆಚ್ಚು ಮಾರಕ..!

Share :

Published June 26, 2024 at 12:50pm

  ನಾಳೆ ಇಂಗ್ಲೆಂಡ್-ಭಾರತ ನಡುವೆ ರೋಚಕ ಪಂದ್ಯ

  ಎರಡೂ ತಂಡಗಳಿಗೆ ಮಳೆಯ ಆತಂಕ ಶುರುವಾಗಿದೆ

  ಸೆಮಿಫೈನಲ್​ಗೆ ಹೊಸ ನಿಯಮ ತಂದ ಐಸಿಸಿ

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ T20 ವಿಶ್ವಕಪ್ ಸೆಮಿಫೈನಲ್ ಪ್ರವೇಶ ಮಾಡಿದೆ. ನಾಳೆ ನಡೆಯುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಮತ್ತೊಂದು ಕಡೆ ದಕ್ಷಿಣ ಆಫ್ರಿಕಾವು ಅಫ್ಘಾನಿಸ್ತಾನವನ್ನು ಎದುರಿಸುತ್ತಿದೆ.

ಈ ಮಧ್ಯೆ ಸೆಮಿಫೈನಲ್‌ಗಾಗಿ ಐಸಿಸಿ ಹೊಸ ನಿಯಮಗಳನ್ನು ತಂದಿದೆ. ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ ನಿಯಮಗಳು ಸ್ವಲ್ಪ ಭಿನ್ನವಾಗಿತ್ತು. ಇದೀಗ ಸಂಪೂರ್ಣ ಬದಲಾಗಿದೆ. ಹೊಸ ನಿಯಮಗಳು ಭಾರತ ಹಾಗೂ ಇಂಗ್ಲೆಂಡ್ ತಂಡಕ್ಕೆ ಸಕರಾತ್ಮಕವಾಗಿಲ್ಲ ಎಂಬ ಟೀಕೆಗಳು ಶುರುವಾಗಿವೆ.

ಇದನ್ನೂ ಓದಿ:ಛಲ-ಹಠ.. ಕೆಚ್ಚೆದೆಯ ಹೋರಾಟ.. ಅಫ್ಘಾನ್ ಯಶಸ್ಸಿನ ಹಿಂದಿರುವ ಹೀರೋಗಳು ಇವರು..!

2ನೇ ಸೆಮಿಫೈನಲ್ ಭಾರತ ಮತ್ತು ಇಂಗ್ಲೆಂಡ್ ತಂಡ ಗಯಾನಾದಲ್ಲಿ ಸೆಣಸಾಟ ನಡೆಸಲಿವೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭ ಆಗಲಿದೆ. ಅರ್ಧ ಗಂಟೆ ಮೊದಲು ಅಂದರೆ 7:30ಕ್ಕೆ ಟಾಸ್ ನಡೆಯಲಿದೆ. ಕುತೂಹಲಕಾರಿ ಸಂಗತಿಯೆಂದರೆ ಎರಡೂ ಸೆಮಿಫೈನಲ್‌ಗಳಿಗೆ ವಿಭಿನ್ನ ನಿಯಮಗಳಿವೆ. ICC ಮೊದಲ ಸೆಮಿಫೈನಲ್‌ಗೆ ಮೀಸಲು ದಿನವನ್ನು ನಿಗದಿಪಡಿಸಿದೆ. ಅಂದರೆ ಪಂದ್ಯದಲ್ಲಿ ಮಳೆ ಬಂದರೆ ಮರುದಿನ ನಡೆಸಲಾಗುತ್ತದೆ. ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಇಟ್ಟಿಲ್ಲ. ಅಫ್ಘಾನ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು Trinidadನಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಶುರುವಾಗಲಿದೆ.

ಸೆಮಿಫೈನಲ್‌ಗಾಗಿ 250 ಹೆಚ್ಚುವರಿ ನಿಮಿಷ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ಇಟ್ಟಿಲ್ಲ. ಯಾಕೆಂದರೆ ಫೈನಲ್ ಪಂದ್ಯವು ಮರುದಿನ ಅಂದರೆ ಜೂನ್ 29ರ ಸಂಜೆ ನಡೆಯಲಿದೆ. ಎರಡೂ ಸೆಮಿಫೈನಲ್‌ಗಳಿಗೆ 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಇರಿಸಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಸುಮಾರು 4 ಗಂಟೆ ಕಾಲ ಕಾಯಬೇಕಾಗುತ್ತದೆ. ಮೊದಲ ಸೆಮಿಫೈನಲ್​ಗೆ ಇನ್ನೂ 60 ನಿಮಿಷಗಳ ಕಾಲ ವಿಸ್ತರಿಸುವ ನಿಯಮವನ್ನೂ ನೀಡಿದೆ.

ಇದನ್ನೂ ಓದಿ:ಅಪರಿಚಿತ ವಾಹನ ಡಿಕ್ಕಿ.. ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಪ್ರಾಣಬಿಟ್ಟ ದರ್ಶನ್ ಅಭಿಮಾನಿ

ಒಂದು ವೇಳೆ ಮೊದಲ ಸೆಮಿ ಫೈನಲ್​ಗೆ ಮಳೆ ಅಡ್ಡಿಪಡಿಸಿದರೆ ಮೀಸಲು ದಿನದಂದು ನಡೆಯಲಿದೆ. ಅಂದು ಕೂಡ ಹೆಚ್ಚುವರಿಯಾಗಿ 190 ನಿಮಿಷಗಳನ್ನು ನೀಡಲಾಗಿದೆ. ಎರಡನೇ ಸೆಮಿಫೈನಲ್‌ನಲ್ಲಿ 250 ನಿಮಿಷಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾದರೆ ಕನಿಷ್ಠ 5 ಓವರ್‌ಗಳ ಪಂದ್ಯವನ್ನು ನಡೆಸಲಾಗುತ್ತದೆ. ಅದೂ ಸಾಧ್ಯವಾಗದಿದ್ದಾಗ ಪಂದ್ಯ ರದ್ದು ಮಾಡಲಾಗುತ್ತದೆ. ಎರಡೂ ತಂಡಗಳು ಕನಿಷ್ಠ 5 ಓವರ್‌ಗಳನ್ನು ಆಡಿದ್ದರೆ ಫಲಿತಾಂಶವನ್ನು ಘೋಷಿಸಲಾಗುತ್ತದೆ.

ಸೆಮಿಫೈನಲ್​ಗೆ ಮಳೆಯ ನೆರಳು..!
ಭಾರತ vs ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ ಎರಡೂ ಪಂದ್ಯಗಳಿಗೆ ಆತಂಕ ಶುರುವಾಗಿದೆ. ಐಸಿಸಿ ಪಂದ್ಯಗಳನ್ನು ಆಡಿಸಲು ಆದಷ್ಟು ಪ್ರಯತ್ನ ಮಾಡುತ್ತದೆ. ಒಂದು ವೇಳೆ ಅದು ಸಾಧ್ಯವಾಗದಿದ್ದಾಗ ಗುಂಪಿನಲ್ಲಿರುವ ಅಗ್ರ ತಂಡವು ಫೈನಲ್ ಪ್ರವೇಶ ಮಾಡುತ್ತದೆ. ಹೀಗಿರುವಾಗ ಟೀಂ ಇಂಡಿಯಾ ಪಂದ್ಯ ಆಡದೇ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಎರಡನೇ ಗುಂಪಿನಿಂದ ದಕ್ಷಿಣ ಆಫ್ರಿಕಾ ತಂಡ ಫೈನಲ್‌ಗೆ ಹೋಗಲಿದೆ. ಒಂದು ವೇಳೆ ಫೈನಲ್​ನಲ್ಲೂ ಪಂದ್ಯ ನಡೆಯದಿದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ:ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​​ ಸೆಮಿಫೈನಲ್​​ಗೆ ಹೊಸ ನಿಯಮ.. ಇದು ಟೀಂ ಇಂಡಿಯಾಗೆ ಹೆಚ್ಚು ಮಾರಕ..!

https://newsfirstlive.com/wp-content/uploads/2024/06/IND-VS-ENG.jpg

Load More