ನೋ ಸೆಕ್ಸ್‌, ನೋ ಚೈಲ್ಡ್ ಬರ್ತ್‌; ಟ್ರಂಪ್ ಗೆಲುವಿಗೆ ಪುರುಷರ ವಿರುದ್ಧ ಅಮೆರಿಕಾ ಮಹಿಳೆಯರ 4B ಸೇಡು; ಏನಿದು?

author-image
admin
Updated On
ನೋ ಸೆಕ್ಸ್‌, ನೋ ಚೈಲ್ಡ್ ಬರ್ತ್‌; ಟ್ರಂಪ್ ಗೆಲುವಿಗೆ ಪುರುಷರ ವಿರುದ್ಧ ಅಮೆರಿಕಾ ಮಹಿಳೆಯರ 4B ಸೇಡು; ಏನಿದು?
Advertisment
  • ಅಮೆರಿಕಾ ಪುರುಷರ ವಿರುದ್ಧ ಈ 4B ಪ್ರತೀಕಾರಕ್ಕೆ ಕಾರಣವೇನು?
  • ಅಸಲಿಗೆ 4B ಚಳವಳಿ ಅಂದ್ರೆ ಏನು? ಇದು ಮೊದಲು ನಡೆದಿದ್ದು ಎಲ್ಲಿ?
  • ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಪರ ನಿಂತಿದ್ದ ಮಹಿಳೆಯರು

ವಾಷಿಂಗ್ಟನ್‌: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಗೆದ್ದಾಗಿದೆ. ಟ್ರಂಪ್‌ ಸಾಧಿಸಿದ ಈ ಜಯವನ್ನ ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳು ಕೊಂಡಾಡುತ್ತಿವೆ. ಆದರೆ ಅಮೆರಿಕಾದ ಮಹಿಳೆಯರು ಡೊನಾಲ್ಡ್‌ ಟ್ರಂಪ್‌ ಗೆಲುವನ್ನ ಸ್ವೀಕರಿಸಲು ತಯಾರಿಲ್ಲ. ಸಿಟ್ಟಿಗೆದ್ದಿರುವ ನಾರಿಮಣಿಯರು ಅಮೆರಿಕಾದ ಪುರುಷರ ವಿರುದ್ಧ 4B ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಭಾರೀ ನಿರೀಕ್ಷೆ ಮೂಡಿಸಿದ್ದ ಕಮಲಾ ಹ್ಯಾರಿಸ್ ಸೋಲು; ಅಸಲಿ ಕಾರಣಗಳೇನು ಗೊತ್ತಾ? 

ಡೊನಾಲ್ಡ್ ಟ್ರಂಪ್‌ ಗೆಲುವಿಗೆ ಪುರುಷರೇ ಕಾರಣ ಅಂತ ಅಮೆರಿಕಾದ ಮಹಿಳೆಯರು ನಂಬಿದ್ದಾರೆ. ಹೀಗಾಗಿ ಟ್ರಂಪ್ ಗೆದ್ದಿದ್ದಕ್ಕೆ ಪುರುಷರ ಮೇಲೆ ಸೇಡು ತೀರಿಸಿಕೊಳ್ಳಲು ಅಮೆರಿಕಾ ಮಹಿಳೆಯರು ಶಪಥ ಮಾಡಿದ್ದಾರೆ. ಪ್ರತೀಕಾರದ ಹಿನ್ನೆಲೆಯಲ್ಲಿ ಪುರುಷರ ವಿರುದ್ಧ 4B ಚಳವಳಿ ಆರಂಭಿಸಿದ್ದಾರೆ.

publive-image

4B ಚಳವಳಿ ಅಂದ್ರೆ ಏನು?
ಅಮೆರಿಕಾ ಮಹಿಳೆಯರು 4B ಮೂಲಕ ಮಹಿಳಾ ಸ್ವಾತಂತ್ರ್ಯದ ಚಳವಳಿ ಆರಂಭಿಸಿದ್ದಾರೆ. 4B ಚಳವಳಿ ಅಂದ್ರೆ ನೋ ಸೆಕ್ಸ್, ನೋ ರಿಲೇಷನ್‌ಶಿಪ್‌, ನೋ ಮ್ಯಾರೇಜ್, ನೋ ಚೈಲ್ಡ್ ಬರ್ತ್ ಎಂದು ಅರ್ಥ.
ದಕ್ಷಿಣ ಕೊರಿಯಾದಲ್ಲಿ ಮೀಟೂ ಬಳಿಕ 4ಬಿ ಚಳವಳಿ ಆರಂಭವಾಗಿತ್ತು. ದಕ್ಷಿಣ ಕೊರಿಯಾದ ಬಳಿಕ 4ಬಿ ಚಳವಳಿ ಈಗ ಅಮೆರಿಕಾಕ್ಕೂ ಕಾಲಿಟ್ಟಿದೆ. 4ಬಿ ಚಳವಳಿ ಮೂಲಕ ನೋ ಡೇಟಿಂಗ್ ಎನ್ನುತ್ತಿರುವ ಅಮೆರಿಕಾದ ಮಹಿಳೆಯರು ಪುರುಷರಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ.

publive-image

ಟ್ರಂಪ್ ಮೇಲೆ ಮಹಿಳೆಯರ ಸಿಟ್ಟು ಯಾಕೆ?
ಕಮಲಾ ಹ್ಯಾರಿಸ್ ವಿರುದ್ಧ ಪ್ರಚಂಡ ಗೆಲುವು ಸಾಧಿಸಿರುವ ಡೊನಾಲ್ಡ್‌ ಟ್ರಂಪ್ ವಿರುದ್ಧ ಅಮೆರಿಕಾ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಕಾರಣ ಒಂದು ಹೆಣ್ಣನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ ಅನ್ನೋದಲ್ಲ.
ಡೊನಾಲ್ಡ್ ಟ್ರಂಪ್ ಮಹಿಳೆಯರ ವಿರೋಧಿ. ಟ್ರಂಪ್ ವಿರುದ್ಧವೇ ಮಹಿಳಾ ದೌರ್ಜನ್ಯದ ಕೇಸ್‌ಗಳಿವೆ. ಇಂತಹ ವ್ಯಕ್ತಿಯನ್ನು ಅಮೆರಿಕಾದ ಪುರುಷರೇ ಮತ್ತೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಸಿಟ್ಟು ಮಹಿಳೆಯರಿಗೆ ಬಂದಿದೆ.

ಟ್ರಂಪ್ ಕಾಲಾವಧಿಯಲ್ಲಿ ಮಹಿಳೆಯರ ರಕ್ಷಣೆ, ಹಕ್ಕು, ಅಧಿಕಾರಕ್ಕೆ ಹೆಚ್ಚಿನ ಮನ್ನಣೆ ಸಿಗಲ್ಲ ಎಂಬ ಆಕ್ರೋಶ ಅಮೆರಿಕಾ ಮಹಿಳೆಯರಲ್ಲಿ ಮನೆ ಮಾಡಿದೆ. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಗೆದ್ದರೆ ಮಹಿಳೆಯರ ಪರ ಇರುತ್ತಿದ್ದರು. ಆದರೆ 2ನೇ ಬಾರಿಗೆ ಟ್ರಂಪ್ ಗೆದ್ದು ಅಧ್ಯಕ್ಷರಾಗಲು ಮುಂದಾಗಿದ್ದಾರೆ. ಹೀಗಾಗಿ 4ಬಿ ಚಳವಳಿಯನ್ನು ಅಮೆರಿಕಾದ ಮಹಿಳೆಯರು ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment