/newsfirstlive-kannada/media/post_attachments/wp-content/uploads/2025/03/No-shankh-sound.jpg)
ವಿಷ್ಣುವಿಗೂ ಶಂಖಕ್ಕೂ ಒಂದು ಅದ್ಭುತ ಸಂಬಂಧವಿದೆ. ಸಮುದ್ರ ಮಂಥನದ ಅಮೃತಕ್ಕೂ ಮುನ್ನ ಸಮುದ್ರದಿಂದ ಆಚೆ ಬಂದದ್ದರಲ್ಲಿ ಶಂಖವೂ ಕೂಡ ಒಂದು. ಹೀಗಾಗಿ ವಿಷ್ಣುವಿಗೆ ಶಂಖನಾದ ಎಂದರೆ ಅತ್ಯಂತ ಪ್ರಿಯ. ಶಿವನೂ ಕೂಡ ಶಂಖನಾದ ಪ್ರಿಯ. ಬದ್ರಿನಾಥ್ ಮಂದಿರಕ್ಕೆ ಹೋಗುವವರು, ಇತ್ತ ಕೇದಾರನಾಥಕ್ಕೆ ಹೋಗುವ ಭಕ್ತರು ಶಂಖನಾದವನ್ನು ಮಾಡಿಕೊಂಡೇ ಹೊರಡುತ್ತಾರೆ. ಆದ್ರೆ ಈ ಶಂಖನಾದಿಂದಲೇ ಹಿಮಪಾತದಂತಹ ಮಹಾ ದುರಂತಗಳು ನಡೆಯುತ್ತವೆ. ಹೀಗಂತ ನಾವಲ್ಲ. ಸ್ವತಃ ಬದ್ರಿನಾಥ್ ದೇವಾಲಯದ ಅರ್ಚಕರಾದ ಚಂಡಿ ಪ್ರಸಾದ್ ಭಟ್ಟರು ಹೇಳಿದ್ದಾರೆ.
ಇದನ್ನೂ ಓದಿ:60 ಕೋಟಿ ಭಕ್ತಸಾಗರದಿಂದ ತುಂಬಿದ್ದ ಜಾಗ ಖಾಲಿ ಖಾಲಿ.. ಹೇಗಿದೆ ಈಗ ಮಹಾಕುಂಭಮೇಳ ನಡೆದ ಸ್ಥಳ?
ಧಾರ್ಮಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯನ್ನಿಟ್ಟುಕೊಂಡು ಬದ್ರಿನಾಥ ದೇವಾಲಯದಲ್ಲಿ ಶಂಖನಾದವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅರ್ಚಕರು ಹೇಳಿದ್ದಾರೆ. ಅವರು ಹೇಳುವ ಪ್ರಕಾರ ಶಂಖನಾದದಿಂದ ಹೊರಹೊಮ್ಮುವ ಕಂಪನ ಹಿಮಪಾತದಂತಹ ಘಟನೆಗಳಿಗೆ ಮೂಲವಾಗುತ್ತದೆಯಂತೆ. ಶಂಖನಾದಗೊಂಡ ಸುತ್ತಮುತ್ತಲಿನ ಸ್ಥಳಗಳ ಮೇಲೆ ಅದರ ಪ್ರಭಾವ ಬೀರುತ್ತದೆ. ಇದರಿಂದ ಹಿಮಪಾತವಾಗುತ್ತದೆ. ನಮ್ಮಿಂದಾಗುವ ಒಂದು ಸಣ್ಣ ಕಾರ್ಯವೂ ಕೂಡ ದೊಡ್ಡ ದುರಂತಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಚಂಡಿ ಪ್ರಸಾದ್ ಭಟ್ ಅವರು.
ಅವರು ಹೇಳುವ ಪ್ರಕಾರ ಬದ್ರಿಪುರ ಸೇರರಿದಂತೆ ಬದ್ರಿನಾಥ್ ಮಂದರಿ ಬಿಟ್ಟು ಉಳಿದ ಕಡೆ ದೊಡ್ಡ ದೊಡ್ಡ ಹಿಮಪಾತಗಳಾಗುವ ಸಂಭವವಿದೆ. ಬದ್ರಿಪುರ ಪ್ರತಿ ಹತ್ತು ವರ್ಷಕ್ಕೊಮ್ಮೆ ಭೀಕರ ಹಿಮಪಾತದಿಂದಾಗಿ ಬಸವಳಿಯುತ್ತಲೇ ಇದೆ. 2014ರಲ್ಲೂ ಕೂಡ ದೊಡ್ಡ ಪ್ರಮಾಣದ ಹಿಮಪಾತವಾಗಿತ್ತು. ಇದು ಬದ್ರಿನಾಥ ಮಂದಿರದ ಸುತ್ತಮುತ್ತಲಿರುವ ನಾರಾಯಣ ಬೆಟ್ಟಕ್ಕೆ ಭೀಕರ ಹಾನಿಯನ್ನುಂಟು ಕೂಡ ಮಾಡಿತ್ತು. ಹಿಮಾಲಯದ ಹವಾಮಾನವನ್ನು ಕಾಪಾಡುವ ನಿಟ್ಟಿನಲ್ಲಿ ಯಾರು ಏನು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಚಂಡಿ ಪ್ರಸಾದ್ ಭಟ್ಟರು ಕೇಳಿದ್ದಾರೆ. 92 ವರ್ಷದ ಹಿರಿಯ ಅರ್ಚಕರು ಪದ್ಮವಿಭೂಷಣ, ಪದ್ಮಶ್ರೀ, ಗಾಂಧಿ ಶಾಂತಿ ಪ್ರಶಸ್ತಿ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹಿಮಪಾತ ಕೇವಲ ಜೀವ ಹಾಗೂ ಬದ್ರಿಪುರದ ಆಸ್ತಿಯನ್ನು ಮಾತ್ರ ನಾಶಮಾಡುವುದಿಲ್ಲ. ಇದು ಮನಾ ಮತ್ತು ಉಳಿದ ಗ್ರಾಮಗಳಿಗೂ ಜೀವಕಂಟಕವಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಇದರ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಓಂ ಪ್ರಕಾಶ್ ಭಟ್, ಬದ್ರಿನಾಥಧಾಮದಲ್ಲಿ ನಾವು ನೀಲಕಂಠ ಪರ್ವತ, ನರ ನಾರಾಯಣ ಪರ್ವತ, ಕಾಂಚನಗಂಗಾ ಬೆಟ್ಟ, ಸತೋಪನಾಥ, ಮಾನಾ ಮತ್ತು ಕುಬೇರ್ ಪರ್ವತಗಳನ್ನು ಹೊಂದಿದ್ದೇವೆ. ಈ ಹಿಂದೆ ಬದ್ರನಾಥದಿಂದ ಮನಾ ಪ್ರದೇಶದವರೆಗೆ ಭೀಕರ ಹಿಮ ಬಿದ್ದಿತ್ತು. ಇದೇ ಕಾರಣಕ್ಕೆ ಇಲ್ಲಿ ದೊಡ್ಡಮಟ್ಟದ ಹಿಮಪಾತವಾಗುವ ಸಂಭವವನ್ನು ಅಲ್ಲಗಳೆಯಲಾಗುವುದಿಲ್ಲ. ಇದೇ ಕಾರಣಕ್ಕೆ ಬದ್ರಿನಾಥ ಮಂದಿರದಲ್ಲಿನ ಶಂಖನಾದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬದ್ರಿನಾಥ ಮಂದಿರದ ಧಾರ್ಮಿಕ ದತ್ತಿ ಅಧಿಕಾರಿ ಭುವನಚಂದ್ರ ಉನಿಯಾಲ ಅವರು ಬದ್ರಿನಾಥ ಮಂದಿರದಲ್ಲಿ ಸಾಮಾನ್ಯವಾಗಿ ಅಭಿಷೇಕದಂತಹ ಧಾರ್ಮಿಕ ವಿಧಿವಿಧಾನಗಳು ನಡೆಯುವಾಗ ಶಂಖವನ್ನು ಊದಲಾಗುತ್ತದೆ. ಇದನ್ನು ನಿಷೇಧ ಮಾಡಿದ್ದು ನಿಜಕ್ಕೂ ಒಳ್ಳೆಯ ಕಾರ್ಯವೇ. ಇದರಿಂದ ಸಾಧ್ಯವಾದಷ್ಟು ಹಿಮಪಾತವನ್ನು ತಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಹಿಮಪಾತದ ವಿಚಾರವಾಗಿಯೇ ಮಾತನಾಡಿದ ಹಿರಿಯ ವಿಜ್ಞಾನಿಯೊಬ್ಬರು. ಬದ್ರಿನಾಥ ಕಣಿವೆಯಿಂದ ಮನಾದವರೆಗೂ ಇರುವ ಪ್ರದೇಶ ತುಂಬಾ ಸೂಕ್ಷ್ಮ ಪ್ರದೇಶ. ಈ ಮೊದಲು ಇಲ್ಲಿ ಈಗೀನಷ್ಟು ಜನರ ಓಡಾಟಗಳು ಇರಲಿಲ್ಲ. ಮಂದಿರದಲ್ಲಿ ಶಂಖನಾದವನ್ನು ನಿಷೇಧ ಮಾಡಿದ್ದರ ಹಿಂದೆ ಶಂಖನಾದದಿಂದ ಹೊರಹೊಮ್ಮುವ ಶಬ್ದ ಹಿಮಪರ್ವತಗಳಲ್ಲಿ ಕಂಪನ ಸೃಷ್ಟಿಸುತ್ತದೆ. ಅದರ ಜೊತೆಗೆ ಮನುಷ್ಯರ ಓಡಾಟವೂ ಕೂಡ ಈಗ ಈ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಕಟ್ಟಡ ಕಾಮಗಾರಿಗಲು ನಡೆಯುತ್ತಿವೆ. ಇವೆಲ್ಲವೂ ಒಟ್ಟಾಗಿ ಸೇರಿ ಹಿಮಪಾತದಂತ ಭೀಕರ ಘಟನೆಗಳು ಸಂಭವಿಸುವ ಅಪಾಯವನ್ನು ತಂದಿಟ್ಟಿವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ