/newsfirstlive-kannada/media/post_attachments/wp-content/uploads/2024/12/MAHAKUMBHAMELA.jpg)
ಮೌನಿ ಅಮಾವಾಸ್ಯೆ ವೇಳೆ ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತದ ದುರಂತದ ಬಳಿಕ ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಮಹಾಕುಂಭಮೇಳದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಮಾಡಿದೆ. ಮಹಾಕುಂಭಮೇಳದ ಪ್ರದೇಶದಲ್ಲಿ ಯಾವುದೇ ವೆಹಿಕಲ್ ಝೋನ್ ಇನ್ನು ಮುಂದೆ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ವಿವಿಐಪಿ ಪಾಸ್ಗಳನ್ನು ರದ್ದುಗೊಳಿಸಲಾಗಿದೆ. ಸರಳವಾಗಿ ಪ್ರಯಾಣಕ್ಕಾಗಿ ಹಲವು ರಸ್ತೆಗಳನ್ನು ಒನ್ ವೇಯಾಗಿ ಪರಿವರ್ತಿಸಲಾಗಿದೆ. ಹೀಗೆ ಹಲವು ಬದಲಾವಣೆಗಳನ್ನು ಕಾಲ್ತುಳಿತದ ಬಳಿಕ ಮಾಡಲಾಗಿದೆ.
ಬುಧವಾರ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸುಮಾರು 30 ಜನರು ಅಸುನೀಗಿದ್ದರು ಹಾಗೂ 60 ಜನರಿಗೆ ಗಂಭೀರ ಗಾಯಗಳಾಗಿದ್ದವು.ಕೋಟ್ಯಂತರ ಜನರು ಒಂದೇ ಕಡೆ ಸೇರಿ ಹಲವು ರೀತಿಯ ಅವ್ಯವಸ್ಥೆಗಳು ನಡೆದಿದ್ದರಿಂದ ಇಂತಹದೊಂದು ಘಟನೆ ನಡೆದಿತ್ತು. ಈ ಒಂದು ದುರಂತವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿಡಿಯೋ ಕಾನ್ಫರೆನ್ಸ್ ಮೂಲಕ ಪೊಲೀಸ್ ಅಧಿಕಾರಿಗಳ ಜೊತೆ ಹಾಗೂ ಜಿಲ್ಲೆಯ ಹಲವು ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಪ್ರಯಾಗರಾಜ್, ಕೌಸಂಭಿ, ವಾರಾಣಸಿ, ಅಯೋಧ್ಯ, ಮಿರ್ಜಾಪುರ, ಬಸ್ತಿ, ಜೌನ್ಪುರ, ಚಿತ್ರಕೂಟ, ಬಾಂದ್ರಾ, ರಾಯಬರೇಲಿ ಗೋರಖ್ಪುರ್ ಸೇರಿ ಹಲವು ಅಧಿಕಾರಿಗಳ ಜೊಎ ಮಾತಾನಾಡಿ ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿಎಂದು ಹೇಳಿದ್ದಾರೆ.
ಇದನ್ನೂ ಓದಿ:72 ಗಂಟೆ, 50 ಲಕ್ಷ ಭಕ್ತಾದಿಗಳ ಭೇಟಿ; ಅಯೋಧ್ಯೆ ರಾಮಮಂದಿರಕ್ಕೆ ಹರಿದು ಬಂದ ಜನಸಾಗರ!
ಹೀಗಾಗಿ ಜಿಲ್ಲಾಡಳಿತ ಕುಂಭಮೇಳದಲ್ಲಿ ಯಾತ್ರಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಹಲವು ಬದಲಾವಣೆಗಳನ್ನು ಮಾಡಿದ್ದಾರೆ.
ಎಲ್ಲಾ ರೀತಿಯ ವಾಹನಗಳು ಕುಂಭಮೇಳ ನಡೆಯುವ ಪ್ರದೇಶಕ್ಕೆ ತೆರಳುವುದನ್ನು ನಿಷೇಧಿಸಲಅಗಿದೆ. ಇದರಿಂದ ಜನಜಂಗುಳಿ ನಿರ್ವಹಣೆ ಹಾಗೂ ಭಕ್ತಾದಿಗಳ ರಕ್ಷಣೆಯ ಉದ್ದೇಶವನ್ನು ಹೊಂದಲಾಗಿದೆ. ಇನ್ನು ವಿವಿಐಪಿ ಪಾಸ್ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಯಾವುದೇ ಪಾಸ್ ತೋರಿಸಿದರು ವಾಹನಗಳನ್ನು ಕುಂಭಮೇಳ ನಡೆಯುವ ಸಮೀಪಕ್ಕೆ ಬಿಡಲಾಗುವುದಿಲ್ಲ.
ಇನ್ನು ಕುಂಭಮೇಳಕ್ಕೆ ಬರುವ ವಾಹನಗಳನ್ನು ಪ್ರಯಾಗರಾಜ್ ಜಿಲ್ಲೆಯ ಗಡಿಯಲ್ಲಿಯೇ ನಿಲ್ಲಿಸಲಾಗುವುದು. ಫೆಬ್ರುವರಿ 4ರವರೆಗೆ ನಾಲ್ಕು ಚಕ್ರದ ವಾಹನಗಳಿಗೆ ನಗರದಲ್ಲಿ ಪ್ರವೇಶ ಪಡೆಯಲು ನಿಷೇಧ ಹೇರಲಾಗಿದೆ.
ಇದನ್ನೂ ಓದಿ:ಗರ್ಲ್ ಫ್ರೆಂಡ್ ಕೊಟ್ಟ ಐಡಿಯಾ.. ಮಹಾಕುಂಭಮೇಳದಲ್ಲಿ 40,000 ಗಳಿಸಿದ ಯುವಪ್ರೇಮಿ; ಮಾಡಿದ್ದೇನು ಗೊತ್ತಾ?
ಟ್ರಾಫಿಕ್ನ್ನು ಕಂಟ್ರೊಲ್ ಮಾಡಲು ಅನಾವಶ್ಯಕವಾಗಿ ಎಲ್ಲಿಬೇಕದಂರಲ್ಲಿ ನಿಲ್ಲಿಸುವ ವಾಹನಗಳು ಹಾಗೂ ಅದರ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವದು. ಟ್ರಾಫಿಕ್ ಜಾಮ್ ಆಗುವುದರಿಂದ ಜನಜಂಗುಳಿಯ ಮೇಲೆ ಇನ್ನು ಹೆಚ್ಚು ಒತ್ತಡ ಬಿದ್ದು ಬೇರೆ ತರಹದ ಅನಾಹುತಗಳಾಗುವ ಸಾಧ್ಯತೆ ಇರುತ್ತದೆ.
ಬೀದಿ ವ್ಯಾಪಾರಿಗಳನ್ನು ಪ್ರಮುಖ ರಸ್ತೆಗಳಿಂದ ತೆರವುಗೊಳಿಸಲಾಗಿದ್ದು ಅವರಿಗೆ ಖಾಲಿ ಇರುವ ವಿಶಾಲ ಪ್ರದೇಶದಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ. ಇದರಿಂದ ಇನ್ನಷ್ಟು ಟ್ರಾಫಿಕ್ ಕಂಟ್ರೋಲ್ ಮಾಡಬಹುದಾದ ಉದ್ದೇಶಗಳನ್ನಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಇನ್ನು ಪೊಲೀಸ್ ಅಧಿಕಾರಿಗಳಿಗೆ ಗಸ್ತು ತಿರುಗುವುದನ್ನು ಹೆಚ್ಚಿಸಲು ಹೇಳಲಾಗಿದ್ದು. ಟ್ರಾಫಿಕ್ ಸಮಸ್ಯೆ, ನೂಕು ನುಗ್ಗಲಿನಂತಹ ಸಮಸ್ಯೆಗಳೂ ಉಂಟಾಗದಂತೆ ನೋಡಿಕೊಳ್ಳಲು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ