/newsfirstlive-kannada/media/post_attachments/wp-content/uploads/2025/07/MODI-5.jpg)
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ಮಧ್ಯಸ್ಥಿಕೆ ಯಾರು ಕೂಡ ವಹಿಸಿಲ್ಲ ಎಂದು ಪ್ರಧಾನಿ ಮೋದಿ ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಟಾಂಗ್ ಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಹಾಗೂ ಪಾಕಿಸ್ತಾನವನ್ನು ಟೀಕಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ವಿಶ್ವದ ಯಾವ ನಾಯಕನು ಕೂಡ ಪಾಕ್ ಮೇಲಿನ ದಾಳಿಯನ್ನು ನಿಲ್ಲಿಸು ಎಂದು ನಮಗೆ ಹೇಳಲಿಲ್ಲ. ಪಾಕಿಸ್ತಾನ ಪರಿ ಪರಿಯಾಗಿ ಅಂಗಲಾಚಿದ ಬಳಿಕವೇ ನಿಲ್ಲಿಸಿದ್ದೇವೆ. ಈ ಹಿಂದೆ ಇತಿಹಾಸದಲ್ಲಿ ಕಾಂಗ್ರೆಸ್ ಮಾಡಿದ ತಪ್ಪುಗಳಿಂದ ಭಾರತ ಈಗಲೂ ಬೆಲೆ ತೆರುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆ ವಿಷ್ಯಕ್ಕಾಗಿ ಗಂಡನ ಜೀವ ತೆಗೆದ ಹೆಂಡತಿ.. ಪೊಲೀಸರ ಮುಂದೆ ಪತ್ನಿ ಹೇಳಿದ್ದು ಕೇಳಿದ್ರೆ ಶಾಕ್ ಆಗುತ್ತೆ!
ಮೇ 9 ರಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಒಂದು ಗಂಟೆಯಲ್ಲಿ ಮೂರ್ನಾಲ್ಕು ಬಾರಿ ನನ್ನ ಜೊತೆ ಮಾತನಾಡಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ನಾನು ಮೀಟಿಂಗ್ನಲ್ಲಿದ್ದೆ. ಇದಾದ ಮೇಲೆ ಅವರ ಜೊತೆ ಮಾತನಾಡಿದೆ. ಪಾಕಿಸ್ತಾನ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತದೆ ಎಂದು ನನಗೆ ಹೇಳಿದರು. ಅದಕ್ಕೆ ನಾವು ತಕ್ಕ ಉತ್ತರ ಕೊಡಲಿದ್ದೇವೆ. ಇದರಿಂದ ಪಾಕಿಸ್ತಾನ ದೊಡ್ಡ ಬೆಲೆ ತೆರುತ್ತದೆ ಎಂದು ಹೇಳಿದ್ದೇ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
ಸಮಸ್ಯೆಗಳಿಗಾಗಿ ಕಾಂಗ್ರೆಸ್, ಪಾಕಿಸ್ತಾನದ ಮೇಲೆ ಅವಲಂಬಿತವಾಗಿದೆ. ಪಾಕಿಸ್ತಾನದ ಹಾಗೂ ಕಾಂಗ್ರೆಸ್ನ ಹೇಳಿಕೆಗಳು ಎರಡೂ ಸೇಮ್ ಟು ಸೇಮ್ ಇದ್ದು ಪೂರ್ಣ ವಿರಾಮ, ಅಲ್ಪ ವಿರಾಮಗಳು ಹೋಲಿಕೆ ಆಗುತ್ತದೆ. ಇಬ್ಬರು ಒಂದೇ ಭಾಷೆಯಲ್ಲಿ ಮಾತನಾಡುತ್ತಾರೆ. ಜೊತೆಗೆ ಪಾಕಿಸ್ತಾನಕ್ಕೆ ಕಾಂಗ್ರೆಸ್ ಕ್ಲೀನ್ ಚಿಟ್ ನೀಡಿರುವುದು ದೇಶವನ್ನೇ ಬೆಚ್ಚಿ ಬೀಳಿಸಿದೆ. ಪಹಲ್ಗಾಮ್ ದಾಳಿಕೋರರ ಬಗ್ಗೆ ಅವರಿಗೆ ಸಾಕ್ಷಿಗಳು ಬೇಕಾಗಿವೆ. ಇತ್ತೀಚೆಗೆ ಪಾಕಿಸ್ತಾನ ಕೂಡ ಇದರ ಬಗ್ಗೆಯೇ ಬೇಡಿಕೆ ಇಟ್ಟಿತ್ತು ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ