/newsfirstlive-kannada/media/post_attachments/wp-content/uploads/2024/08/Mohamed-unus.jpg)
ಬಾಂಗ್ಲಾದೇಶದಲ್ಲಿ ನಾಗರಿಕ ಮೀಸಲಾತಿಗಾಗಿ ಆಕ್ರೋಶ ಭುಗಿಲೆದ್ದಿದೆ. ಜನರ ಆಕ್ರೋಶ ಹಿಂಸಾತ್ಮಕಕ್ಕೂ ತಿರುಗಿದೆ. ಅತ್ತ ಪ್ರತಿಭಟನಾಕಾರರ ದಾಳಿಗೆ ಪ್ರಧಾನಿ ಶೇಖ್​ ಹಸೀನಾ ದೇಶ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಹೀಗಿರುವಾಗ ದೇಶವನ್ನು ಯಾರು ಮುನ್ನಡೆಸುವುದು ಎಂಬ ಪ್ರಶ್ನೆ ತಲೆದೋರಿತ್ತು. ಆದರೀಗ ಅದಕ್ಕೆ ಉತ್ತರ ಹುಡುಕಿದ್ದಾರೆ.
ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲು ಪ್ರಧಾನಿಯನ್ನು ಆಯ್ಕೆ ಮಾಡಲಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ದೇಶವನ್ನು ಮುನ್ನಡೆಸಲಿದ್ದಾರೆ.
/newsfirstlive-kannada/media/post_attachments/wp-content/uploads/2024/08/Mohamed-unus-1.jpg)
ಇದನ್ನೂ ಓದಿ: BREAKING NEWS: ಬಿಜೆಪಿ ಹಿರಿಯ ನಾಯಕ ಎಲ್​ ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು
ಬಾಂಗ್ಲಾ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಅತ್ತ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಒಂದು ದಿನದ ನಂತರ ಆಯ್ಕೆ ಮಾಡಲಾಗಿದೆ.
ಮೊಹಮ್ಮದ್ ಯೂನಸ್ ಅವರು ಬಡತನದ ವಿರುದ್ಧ ಹೋರಾಡಿ ಗುರುತಿಸಿಕೊಂಡವರು. ಇವರನ್ನು ಬಡವರ ಬ್ಯಾಂಕರ್ ಎಂದು ಕರೆಯಲಾಗುತ್ತದೆ. ಸದ್ಯ ಯೂನಸ್​ಗೆ 84 ವರ್ಷ ವಯಸ್ಸಾಗಿದ್ದು, ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.
/newsfirstlive-kannada/media/post_attachments/wp-content/uploads/2024/08/SheikhHasina-1.jpg)
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಆಯ್ಕೆಯೂ ಸಹ ಯೂನಸ್ ಆಗಿದ್ದು, ಇವರ ಹೆಸರೇ ಪ್ರಮುಖವಾಗಿ ಕೇಳಿಬರುತ್ತಿತ್ತು. ಇನ್ನಾದರೂ ಅಲ್ಲಿನ ಸ್ಥಿತಿಗತಿ ಸಡಿಲವಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us