/newsfirstlive-kannada/media/post_attachments/wp-content/uploads/2024/03/pm-modi-2024-03-07T210801.633.jpg)
ನವದೆಹಲಿ: ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಬಿಹಾರದ ಮುಜಾಫರ್‌ಪುರದ ಕುರ್ಹಾನಿ ಬ್ಲಾಕ್‌ನ ಅಮ್ರಾಖ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಶಿಕ್ಷಕ ಹರೇಂದ್ರ ರಜಾಕ್​ರನ್ನು​ ಅರೆಸ್ಟ್ ಮಾಡಲಾಗಿದೆ. ಶಿಕ್ಷಕ ತಮ್ಮ ಮಕ್ಕಳಿ ಮೋದಿಗೆ ವೋಟ್ ಹಾಕಬೇಡಿ ಎಂದು ಹೇಳಿದ್ದಾರೆ ಎಂದು ಆರೋಪಿಸಿ ಕುರ್ಹಾನಿ ಬ್ಲಾಕ್‌ನ ಮಕ್ಕಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
/newsfirstlive-kannada/media/post_attachments/wp-content/uploads/2024/04/MODI.jpg)
ಸರ್ಕಾರಿ ಅಧಿಕಾರಿಯೊಬ್ಬರು ಚುನಾವಣೆ ಸಮಯದಲ್ಲಿ ಯಾವುದೇ ಪಕ್ಷದ ಪರವಾಗಿ, ವಿರೋಧವಾಗಿ ಮಾತನಾಡಬಾರದು. ಆದರೆ ಉಚಿತ ಪಡಿತರ ಯೋಜನೆಯಡಿ ಬಳಕೆಗೆ ಯೋಗ್ಯವಲ್ಲದ ಆಹಾರ ಧಾನ್ಯಗಳನ್ನು ಕೊಡುತ್ತಿದ್ದಾರೆ. ಉದ್ಯೋಗಗಳನ್ನು ಮಾತ್ರ ಕೊಡುತ್ತಿಲ್ಲ. ಹೀಗಾಗಿ ಯಾರೂ ಮೋದಿಗೆ ಮತ ಹಾಕಬೇಡಿ ಎಂದು ಶಿಕ್ಷಕ ಶಾಲೆಯಲ್ಲಿ ಮಕ್ಕಳಿಗೆ ಹೇಳಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us