/newsfirstlive-kannada/media/post_attachments/wp-content/uploads/2024/10/RATNA-TATA.jpg)
ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ನೂತನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ದಿವಗಂತ ರತನ್ ಟಾಟಾ ಅವರ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾಗೆ ಜವಾಬ್ದಾರಿ ಹಸ್ತಾಂತರಿಸಲಾಗಿದೆ.
ನೋಯೆಲ್ ಟಾಟಾ ಅವರು ರತನ್ ಟಾಟಾಗೆ ಮಲ ಸಹೋದರ ಆಗಬೇಕು. ರತನ್ ಟಾಟಾರ ತಂದೆ ನಾವಲ್ ಅವರ ಎರಡನೇ ಪತ್ನಿ ಸಿಮೋನ್​ಗೆ ನೋಯೆಲ್ ಜನಿಸಿದರು. ಅಂದ್ಹಾಗೆ ನೋಯೆಲ್ ಟಾಟಾಗೆ ಮೂವರು ಮಕ್ಕಳಿದ್ದಾರೆ. ಮಾಯಾ ಟಾಟಾ, ನೆವಿಲ್ಲೆ ಟಾಟಾ ಮತ್ತು ಲಿಯಾ ಟಾಟಾ ಎಂಬ ಮಕ್ಕಳಿದ್ದಾರೆ. ಇವರೆಲ್ಲರೂ ಟಾಟಾ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ವಿನಮ್ರ ಉದ್ಯಮಿ ಆಗಿದ್ದ ರತನ್ ಟಾಟಾ ಬುಧವಾರ ನಿಧನರಾದರು. ಟಾಟಾ ಟ್ರಸ್ಟ್, ಟಾಟಾ ಸಮೂಹದ ಪರೋಪಕಾರಿ ಅಂಗವಾಗಿದೆ. ಮುಂಬೈನಲ್ಲಿ ಇಂದು ನಡೆದ ಟ್ರಾಟಾ ಟ್ರಸ್ಟ್ ಸಭೆಯಲ್ಲಿ ನೋಯೆಲ್ ಟಾಟಾರನ್ನು ಅಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us