/newsfirstlive-kannada/media/post_attachments/wp-content/uploads/2024/11/JOBS_METRO_1.jpg)
ಉತ್ತರಪ್ರದೇಶದ ನೋಯ್ಡಾ ಮೆಟ್ರೋ ರೈಲು ಕಾರ್ಪೊರೇಷನ್ನಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಈ ಸಂಬಂಧ ನುರಿತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಇದೊಂದು ಸುವರ್ಣಾವಕಾಶ ಆಗಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಈ ಹುದ್ದೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಜನರಲ್ ಮ್ಯಾನೇಜರ್ ಪೋಸ್ಟ್ ಖಾಲಿ ಇದ್ದು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕು ಎನ್ನುವ ಅಭ್ಯರ್ಥಿಗೆ 56 ವರ್ಷಗಳು ಮೀರಿರಬಾರದು. ಇದರ ಜೊತೆಗೆ ಎಲೆಕ್ಟ್ರಿಕಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್, ಟೆಲಿಕಮ್ಯೂನಿಕೇಶನ್ ಇದರಲ್ಲಿ ಯಾವುದಾದರೂ ಒಂದರಲ್ಲಿ ಪದವಿ ಪಡೆದಿರಬೇಕು. ಸರ್ಕಾರದಿಂದ ಮಾನ್ಯತಾ ಪಡೆದ ಸಂಸ್ಥೆಯಿಂದ ಪದವಿ ಸ್ವೀಕರಿಸಿರಬೇಕು. ಅಭ್ಯರ್ಥಿಗಳು ತಮ್ಮ ಸೂಕ್ತ ಕ್ಷೇತ್ರದಲ್ಲಿ ಕನಿಷ್ಠ 17 ವರ್ಷಗಳ ಅನುಭವವನ್ನು ಹೊಂದಿರಬೇಕು.
ಇದನ್ನೂ ಓದಿ: RCBಯ 7 ಕ್ಯಾಪ್ಟನ್ಗಳ ಪೈಕಿ ದಿ ಬೆಸ್ಟ್ ಯಾರು.. ಕೊಹ್ಲಿ ಸಾರಥ್ಯದಲ್ಲಿ ಟೀಮ್ ಹೇಗಿತ್ತು?
ತಿಂಗಳ ಸಂಬಳ ವಿಚಾರಕ್ಕೆ ಬಂದರೆ 1,20,000 ದಿಂದ 2,80,000 ರೂಪಾಯಿ ನೀಡಲಾಗುತ್ತದೆ. ಈಗಾಗಲೇ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದ್ದು ಕೊನೆ ದಿನಾಂಕದ ಒಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯ ಆಯ್ಕೆಯನ್ನು ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಮಾಡಲಾಗುತ್ತದೆ. ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಅಭ್ಯರ್ಥಿಗಳು ಸಲ್ಲಿಸಬಹುದು.
ಪ್ರಮುಖ ಲಿಂಕ್-
General Manager/ Projects,
Finance and HR,
Noida Metro Rail Corporation Limited Block III,
3rd Floor, Ganga Shopping Complex Sector 29,
Noida- 201301, Distt. Gautam Budh Nagar, UP
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 12 ಡಿಸೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ