ನಾನ್ ಬೇಲಬಲ್ ಸೆಕ್ಷನ್ ಅಡಿ FIR; ಕುಮಾರಸ್ವಾಮಿಗೆ ಬಂಧನ ಭೀತಿ, ಮುಂದಿನ ನಡೆ ಏನು..?

author-image
Ganesh
Updated On
ಹೆಚ್‌.ಡಿ ಕುಮಾರಸ್ವಾಮಿಗೆ ಬಿಗ್ ಶಾಕ್.. FIR ಬಳಿಕ ದಳಪತಿಗೆ ಬಂಧನದ ಭೀತಿ; ಮುಂದೇನು?
Advertisment
  • ಉದ್ಯಮಿ ವಿಜಯ್​ ಟಾಟಾಗೆ ಹಣಕ್ಕೆ ಬೇಡಿಕೆ ಆರೋಪ
  • ಬಿಎನ್​ಎಸ್ ಸೆಕ್ಷನ್ 3(5),308(2), 351(2) ಅಡಿಯಲ್ಲಿ FIR
  • ಅರೆಸ್ಟ್​ ಆಗ್ತಾರಾ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ?

ಬೆಂಗಳೂರು: ಉದ್ಯಮಿ ವಿಜಯ್​ ಟಾಟಾಗೆ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಪ್ರಕರಣದಲ್ಲಿ ಕೇಂದ್ರ ಸಚಿವ H.D.ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಿಎನ್​ಎಸ್ ಸೆಕ್ಷನ್ 3(5), 308(2), 351(2) ಅಡಿಯಲ್ಲಿ ದಾಖಲಾಗಿದೆ. 308 ಬಿಎನ್ಎಸ್ ಸೆಕ್ಷನ್​ ಅಂದ್ರೆ ಸುಲಿಗೆ ಆರೋಪ‌ ಪ್ರಕರಣವಾಗಿದೆ. ಇದು ನಾನ್ ಬೇಲಬಲ್ ಸೆಕ್ಷನ್ ಆಗಿದ್ದು ಬಂಧನ ಮಾಡಬಹುದು. 351 - ಕ್ರಿಮಿನಲ್ ಬೆದರಿಕೆ ಆರೋಪ, ಇದು ಬೇಲಬಲ್ ಸೆಕ್ಷನ್ ಆಗಿದೆ. ಈ ಸೆಕ್ಷನ್​ ಅಡಿಯಲ್ಲಿ ಎರಡು ವರ್ಷದ ತ‌ನಕ ಶಿಕ್ಷೆ ವಿಧಿಸಬಹುದು. 3(5) ಸಮಾನ ಉದ್ದೇಶ ಹೊಂದಿರುವ ಇಬ್ಬರು ಆರೋಪಿಗಳಿಗೆ ಸಂಬಂಧಿಸಿದ್ದಾಗಿ. ಇದರ ಅಡಿಯಲ್ಲಿ ನೇರವಾಗಿ ಬಂಧನ ಸಾಧ್ಯವಿಲ್ಲ. ಮೊದಲು 7 ದಿನಗಳಲ್ಲಿ ವಿಚಾರಣೆಗೆ ನೊಟೀಸ್ ನೀಡಬೇಕು. ವಿಚಾರಣೆಗೆ ಬರದಿದ್ದಾಗ ಬಂಧನ ಮಾಡುವ ಸಾಧ್ಯತೆ ಇರುತ್ತದೆ. ಸದ್ಯ ಪ್ರಕರಣದಲ್ಲಿ ಕುಮಾರಸ್ವಾಮಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ:50 ಕೋಟಿ ರೂಪಾಯಿ ವಸೂಲಿ ಆರೋಪ; ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಬಂಧನ ಸಾಧ್ಯತೆ

publive-image

ಇನ್ನು ತಮ್ಮ ವಿರುದ್ಧ ಕೇಸ್​ ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಕದ ತಟ್ಟುವ ಸಾಧ್ಯತೆ ಇದೆ. ದೆಹಲಿಯಲ್ಲಿರುವ ಕೇಂದ್ರ ಸಚಿವರು, ಬೆಂಗಳೂರಿಗೆ ಬಂದ ಬೆನ್ನಲ್ಲೇ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

ಫೋನ್ ಮೂಲಕ ಹೆಚ್​ಡಿಕೆ ಬೆದರಿಕೆ ಹಾಕಿರುವ ಆರೋಪ ಇದೆ. ಪ್ರಕರಣ ದಾಖಲು ಮಾಡಿಕೊಳ್ಳುವ ವಿಚಾರದಲ್ಲಿ ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಯಡವಿದ್ದಾರೆ. ಬೆಳಗ್ಗೆ ಎನ್​​​​ಸಿಆರ್ ಮಾಡಿ, ಸಂಜೆ ಎಫ್ಐಆರ್ ಮಾಡಿದ್ದಾರೆ. ಬೆಳಗ್ಗೆ ಗಂಭೀರವಲ್ಲದ ಪ್ರಕರಣ ಮತ್ತು ಸಂಜೆ ಗಂಭೀರ ಕೇಸ್ ಎಂದು ದಾಖಲಿಸಿಕೊಂಡಿದ್ದಾರೆ. ಒತ್ತಡಕ್ಕೆ ಮಣಿದು FIR ದಾಖಲಿಸಿದ ಆರೋಪ ಮಾಡಬಹುದು. ಈ ಅಂಶಗಳು ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಹೈಕೋರ್ಟ್​​ನಲ್ಲಿ ಪ್ರಕರಣದ FIR ರದ್ದು ಕೋರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ:50 ಕೋಟಿ ಸುಲಿಗೆ ಆರೋಪ ಕೇಸ್​​; ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment