/newsfirstlive-kannada/media/post_attachments/wp-content/uploads/2024/10/HD-kumaraswamy-A2.jpg)
ಕೇಂದ್ರ ಸಚಿವ H.D ಕುಮಾರಸ್ವಾಮಿ ವಿರುದ್ಧ ₹50 ಕೋಟಿ ಹಣದ ಸುಲಿಗೆಯ ಗಂಭೀರ ಆರೋಪ ಕೇಳಿ ಬಂದಿದೆ. ಜೆಡಿಎಸ್‌ನಲ್ಲೇ ಗುರುತಿಸಿಕೊಂಡಿದ್ದ ಉದ್ಯಮಿ ವಿಜಯ್ ಟಾಟಾ, ದಳಪತಿ ವಿರುದ್ಧ 50 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಮಾಡಿದ್ದಾರೆ. ಈ ಸಂಬಂಧ ಹೆಚ್‌ಡಿಕೆ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಅಷ್ಟೇ ಅಲ್ಲ. ಕುಮಾರಸ್ವಾಮಿಗೆ ಬಂಧನದ ಭೀತಿಯೂ ಶುರುವಾಗಿದೆ.
ಹೆಚ್‌ಡಿಕೆಗೆ ಬಂಧನದ ಭೀತಿ!
50 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದಡಿ ಹೆಚ್‌ಡಿಕೆ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ FIR ದಾಖಲಾಗಿದೆ. ಬಿಎನ್ಎಸ್ ಸೆಕ್ಷನ್ 3(5), 308(2), 351(2) ಅಡಿಯಲ್ಲಿ ದೂರು ದಾಖಲಾಗಿದೆ. ಬಿಎನ್ಎಸ್ ಸೆಕ್ಷನ್ 308 ಅಂದ್ರೆ, ಸುಲಿಗೆ ಆರೋಪವಾಗಿದ್ದು, ಇದು ನಾನ್ ಬೇಲಬಲ್ ಸೆಕ್ಷನ್ ಆಗಿದ್ದು ಬಂಧನಕ್ಕೂ ಅವಕಾಶವಿದೆ. 351 ಸೆಕ್ಷನ್ ಅಂದ್ರೆ ಕ್ರಿಮಿನಲ್ ಬೆದರಿಕೆ ಆರೋಪವಾಗಿದ್ದು, ಇದು ಬೇಲಬಲ್ ಸೆಕ್ಷನ್ ಆಗಿದೆ. ಈ ಸೆಕ್ಷನ್‌ನಲ್ಲಿ ಎರಡು ವರ್ಷದ ತನಕ ಶಿಕ್ಷೆ ವಿಧಿಸಬಹುದಾಗಿದೆ. ಇನ್ನೂ ಬಿಎನ್ಎಸ್ ಅಡಿ ಪ್ರಕರಣ ದಾಖಲಾಗಿರೋದ್ರಿಂದ ನೇರವಾಗಿ ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ ಮೊದಲು 7 ದಿನಗಳಲ್ಲಿ ವಿಚಾರಣೆಗೆ ನೋಟಿಸ್ ನೀಡಬೇಕು. ವಿಚಾರಣೆಗೆ ಬಾರದಿದ್ದಾಗ ಬಂಧನ ಮಾಡಲು ಅವಕಾಶವಿದೆ. ಸದ್ಯ ಈ ಪ್ರಕರಣದಲ್ಲಿ ಹೆಚ್‌ಡಿಕೆಗೆ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: 50 ಕೋಟಿ ರೂಪಾಯಿ ವಸೂಲಿ ಆರೋಪ; ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬಂಧನ ಸಾಧ್ಯತೆ
‘ವಿಜಯ್ ಟಾಟಾ ಮಾಡಿರೋ ಆರೋಪಗಳೆಲ್ಲಾ ಶುದ್ಧ ಸುಳ್ಳು’
ಹೆಚ್‌ಡಿಕೆ ಮೇಲಿನ ಆರೋಪವನ್ನ ಅಲ್ಲಗಳೆದ ದಳ ನಾಯಕರು!
ಸುಲಿಗೆ ಆರೋಪ ಕೇವಲ ಹೆಚ್‌ಡಿಕೆ ವಿರುದ್ಧವಷ್ಟೇ ಕೇಳಿ ಬಂದಿಲ್ಲ. ಬದಲಾಗಿ ಜೆಡಿಎಸ್ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ವಿರುದ್ಧವೂ ಇದೆ. ಇದೀಗ ಈ ಆರೋಪವೆಲ್ಲಾ ಶುದ್ಧಸುಳ್ಳು ಅಂತ ವಿಜಯ್ ಟಾಟಾ ವಿರುದ್ಧ ದಳ ನಾಯಕ ಗುಡುಗಿದ್ದಾರೆ.
ವಿಜಯ್ ಟಾಟಾಗೆ ಅಮೃತಹಳ್ಳಿ ಪೊಲೀಸರಿಂದ ನೋಟಿಸ್!
ಕುಮಾರಸ್ವಾಮಿ ವಿರುದ್ಧ ಸುಲಿಗೆ ಆರೋಪ ಮಾಡಿರೋ ವಿಜಯ್ ಟಾಟಾಗೆ ಅಮೃತಹಳ್ಳಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಗೌಡ ಬಂದಿದ್ದ ಬಗ್ಗೆ ಟೆಕ್ನಿಕಲ್ ಎವಿಡೆನ್ಸ್, ಹಣ ಕೇಳಿದ್ದರ ಬಗ್ಗೆ ಏನಾದರೂ ದಾಖಲೆಗಳಿದ್ದರೆ ಒದಗಿಸುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ನಾನ್ ಬೇಲಬಲ್ ಸೆಕ್ಷನ್ ಅಡಿ FIR; ಕುಮಾರಸ್ವಾಮಿಗೆ ಬಂಧನ ಭೀತಿ, ಮುಂದಿನ ನಡೆ ಏನು..?
HDK ಮುಂದಿರೋ ಆಯ್ಕೆಗಳೇನು?
FIRನಲ್ಲಿ ಗಂಭೀರ ಸೆಕ್ಷನ್ ಇರೋದ್ರಿಂದ ಜಾಮೀನು ಪಡೆಯಬೇಕು
ಫೋನ್ ಮೂಲಕ ಹೆಚ್‌ಡಿಕೆ ಬೆದರಿಕೆ ಹಾಕಿರುವ ಆರೋಪವಿದೆ
ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರಿಂದ ಎರಡು ನಡೆ
ಬೆಳಗ್ಗೆ ಎನ್ಸಿಆರ್ ಮಾಡಿ, ಸಂಜೆ ಎಫ್ಐಆರ್ ಮಾಡಿದ್ದಾರೆ
ಬೆಳಗ್ಗೆ ಗಂಭೀರವಲ್ಲದ ಪ್ರಕರಣ ಮತ್ತು ಸಂಜೆ ಗಂಭೀರ ಕೇಸ್
ಒತ್ತಡಕ್ಕೆ ಮಣಿದು FIR ದಾಖಲಿಸಿದ ಆರೋಪ ಮಾಡಬಹುದು
ಈ ಅಂಶಗಳು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಿರುವ ಹೆಚ್‌ಡಿಕೆ
ಹೈಕೋರ್ಟ್ನಲ್ಲಿ ಪ್ರಕರಣದ FIR ರದ್ದು ಕೋರುವ ಸಾಧ್ಯತೆ ಹೆಚ್ಚು
ಇಲ್ಲವಾದಲ್ಲಿ ಮಧ್ಯಂತರ ತಡೆ ನೀಡುವಂತೆಯೂ ಮನವಿ ಸಾಧ್ಯತೆ
ರಾಜಕೀಯ ನಾಯಕರ ಮೇಲೆ ಆರೋಪ-ಪ್ರತ್ಯಾರೋಪಗಳೆಲ್ಲಾ ಕಾಮನ್. ಹಾಗಂತ ಪೊಲೀಸರು ಇದನ್ನ ಕೇವಲವಾಗಿ ತೆಗೆದುಕೊಳ್ಳದೇ ಆರೋಪಗಳು ಸತ್ಯವೋ? ಸುಳ್ಳೋ ಅಂತ ತನಿಖೆ ಮಾಡಿ ಸತ್ಯಾಸತ್ಯತೆಯನ್ನ ಜನರ ಮುಂದೆ ತೆರೆದಿಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ