/newsfirstlive-kannada/media/post_attachments/wp-content/uploads/2024/01/madras-3.jpg)
ತಮಿಳುನಾಡಿನ ದೇವಸ್ಥಾನಗಳಿಗೆ ಯಾರು ಪ್ರವೇಶಿಸಬೇಕು ಅನ್ನೋ ಬಗ್ಗೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಅನ್ಯಧರ್ಮದವರು ದೇಗುಲಗಳಿಗೆ ಪ್ರವೇಶಿಸುವಂತಿಲ್ಲ ಎಂದಿರುವ ನ್ಯಾಯಾಲಯ ಹಲವು ವಿಚಾರಗಳನ್ನು ಮುಂದಿಟ್ಟು ಸ್ಟಾಲಿನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಿಂದೂ ದೇವಾಲಯಗಳು ಟೂರಿಸ್ಟ್ ಅಥವಾ ಪಿಕ್‌ನಿಕ್ ತಾಣಗಳಲ್ಲ. ದೇವಸ್ಥಾನಗಳಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ. ಒಂದ್ವೇಳೆ ಪ್ರವೇಶಿಸಲು ಇಚ್ಚಿಸಿದ್ರೆ ಮುಚ್ಚಳಿಕೆ ಬರೆದುಕೊಡಬೇಕು. ಇಂತ ಖಡಕ್ ಮಾತುಗಳನ್ನು ಹೇಳಿದ್ದು ತಮಿಳುನಾಡಿನ ಮದ್ರಾಸ್ ಹೈಕೋರ್ಟ್.
/newsfirstlive-kannada/media/post_attachments/wp-content/uploads/2024/01/madras-1.jpg)
ತಮಿಳುನಾಡು ಹೈಕೋರ್ಟ್​ನಿಂದ ಐತಿಹಾಸಿಕ ತೀರ್ಪು
ಇಂತದೊಂದು ತೀರ್ಪು ಕೊಟ್ಟಿದ್ದು ತಮಿಳುನಾಡಿನ ಮದ್ರಾಸ್ ಹೈಕೋರ್ಟ್​ನ ಮಧುರೈ ಪೀಠ. ಹಿಂದೂ ದೇವಾಲಯಗಳಿಗೆ ಅನ್ಯಧರ್ಮಿಯರು ಪ್ರವೇಶಿಸದಂತೆ ನಿರ್ಬಂಧ ವಿಧಿಸಲು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಎಲ್ಲಾ ದೇವಸ್ಥಾನಗಳಲ್ಲಿ ಇರುವ ಧ್ವಜಸ್ತಂಭ ಪ್ರದೇಶದ ನಂತರ ಹಿಂದೂಯೇತರರಿಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ತಿಳಿಸುವ ಸೂಚನಾಫಲಕಗಳನ್ನು ಅಳವಡಿಸುವಂತೆ ತಮಿಳುನಾಡಿನ ಮುಜರಾಯಿ ಇಲಾಖೆಗೆ ನ್ಯಾಯಾಲಯ ಖಡಕ್​ ಆಗಿ ಸೂಚಿಸಿದೆ. ಈ ವೇಳೆ ಹಿಂದೂಗಳು ತಮ್ಮ ಧರ್ಮವನ್ನು ಪ್ರದರ್ಶಿಸುವ ಮತ್ತು ಪಾಲಿಸುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾಯಾಲಯದ ನ್ಯಾಯಮೂರ್ತಿ ಎಸ್ ಶ್ರೀಮತಿ ಹೇಳಿದ್ದಾರೆ.
ದಿಂಡಿಗಲ್ ಜಿಲ್ಲೆಯ ಪಳನಿಯ ಪ್ರಸಿದ್ಧ ಅರುಲ್ಮಿಗು ಪಳನಿ ದಂಡಾಯುಧಪಾಣಿ ಸ್ವಾಮಿ ದೇವಸ್ಥಾನ ಹಾಗೂ ಅದರ ಉಪ ದೇಗುಲಗಳಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು. ಸೂಚನಾ ಫಲಕಗಳನ್ನು ಅಳವಡಿಸುವಂತೆ ಆದೇಶಿಸಲು ಕೋರಿ ಡಾ. ಸೆಂಥಿಲ್ ಕುಮಾರ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ಹೈಕೋರ್ಟ್, ಕೇವಲ ಪಳನಿ ಮಾತ್ರವಲ್ಲ, ತಮಿಳುನಾಡಿನ ಎಲ್ಲ ದೇವಸ್ಥಾನಗಳಲ್ಲಿ ಧ್ವಜ ಸ್ತಂಭದ ನಂತರ ಹಿಂದೂಯೇತರರಿಗೆ ಪ್ರವೇಶ ಇಲ್ಲ ಎಂದು ಸ್ಪಷ್ಟವಾಗಿ ಸೂಚಿಸುವ ಫಲಕಗಳನ್ನು ಅಳವಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಿದೆ. ಒಂದ್ವೇಳೆ ಹಿಂದೂಯೇತರರು ದೇವಸ್ಥಾನಕ್ಕೆ ಪ್ರವೇಶ ಬಯಸಿದ್ರೆ ಅವರು ಮುಚ್ಚಳಿಕೆ ಬರೆದುಕೊಡಬೇಕು. ಹಿಂದೂ ಧರ್ಮದ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಪಾಲಿಸಬೇಕು. ಅಲ್ಲದೇ ಆ ವ್ಯಕ್ತಿಯ ವಿವರಗಳನ್ನು ದೇವಸ್ಥಾನ ನಿರ್ವಹಿಸುವ ರಿಜಿಸ್ಟ್ರಾರ್‌ನಲ್ಲಿ ಕೂಡ ನಮೂದಿಸುವುದು ಅಗತ್ಯ ಎಂದು ಸೂಚಿಸಿದೆ.
/newsfirstlive-kannada/media/post_attachments/wp-content/uploads/2024/01/madras.jpg)
ಇನ್ನು ಇದೇ ವೇಳೆ ಕೆಲ ವಿಚಾರಗಳಿಗೆ ಹೈಕೋರ್ಟ್​ ಖಾರವಾಗಿ ಪ್ರತಿಕ್ರಿಯಿಸಿದೆ. ಅನ್ಯ ಧರ್ಮಗಳಂತೆ ಹಿಂದೂ ಧರ್ಮದವರು ತಮ್ಮ ನಂಬಿಕೆ ಪ್ರದರ್ಶಿಸುವ ಮತ್ತು ಪಾಲಿಸುವ ಹಕ್ಕು ಹೊಂದಿದ್ದಾರೆ. ಆಯಾ ಧರ್ಮೀಯರ ಪದ್ಧತಿ ಹಾಗೂ ಆಚರಣೆಗಳಲ್ಲಿ ನಡೆಯುವ ಮಧ್ಯಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಯಾಕಂದ್ರೆ ದೇವಸ್ಥಾನವು ಪಿಕ್ನಿಕ್ ಅಥವಾ ಪ್ರವಾಸಿ ತಾಣವಲ್ಲ ಅಂತ ಖಡಕ್ ಆಗಿ ಹೇಳಿದೆ. ಈ ವೇಳೆ ದೇವಸ್ಥಾನಗಳಲ್ಲಿ ಪ್ರವೇಶಿಸಿದ ಕೆಲ ಅನ್ಯಧರ್ಮಿಯರು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ವರದಿಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ.
/newsfirstlive-kannada/media/post_attachments/wp-content/uploads/2024/01/madras-2.jpg)
ಪ್ರವೇಶ ನಿರಾಕರಿಸುವ ಬೋರ್ಡ್ ಕಡ್ಡಾಯವೆಂದ ಕೋರ್ಟ್
ತಂಜಾವೂರಿನ ಬೃಹದೀಶ್ವರ ದೇವಸ್ಥಾನದಲ್ಲಿ ಅನ್ಯ ಧರ್ಮಕ್ಕೆ ಸೇರಿದ ಜನರು, ದೇವಸ್ಥಾನದ ಆವರಣದ ಒಳಗೆ ಮಾಂಸಾಹಾರ ಸೇವಿಸಿದ್ದು ವರದಿಯಾಗಿತ್ತು. ಮಾತ್ರವಲ್ಲದೆ ಜನವರಿ 11ರಂದು ಮಧುರೈನ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನ ಪ್ರವೇಶಿಸಿದ ಅನ್ಯಧರ್ಮದವರು ತಮ್ಮ ಗ್ರಂಥವನ್ನು ಗರ್ಭಗುಡಿ ಸಮೀಪ ಇರಿಸಿ ಪ್ರಾರ್ಥನೆ ಸಲ್ಲಿಸಲು ಪ್ರಯತ್ನಿಸಿದ್ದು ಪತ್ರಿಕೆಯಲ್ಲಿ ವರದಿಯಾಗಿತ್ತು. ಇಂತಹ ಘಟನೆಗಳು ಸಂವಿಧಾನದ ಅಡಿಯಲ್ಲಿ ಹಿಂದೂಗಳಿಗೆ ನೀಡಿರುವ ಮೂಲಭೂತ ಹಕ್ಕುಗಳಲ್ಲಿ ಮಧ್ಯಪ್ರವೇಶ ಮಾಡುವಂತಾಗುತ್ತವೆ. ಈ ಪ್ರಕರಣಗಳಲ್ಲಿ ಮುಜರಾಯಿ ಇಲಾಖೆ ಹಿಂದೂಗಳಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಒಟ್ಟಾರೆ ತಮಿಳುನಾಡಿನ ಹೈಕೋರ್ಟ್ ದೇವಸ್ಥಾನದ ವಿಚಾರದಲ್ಲಿ ಹಾಗೂ ಹಿಂದೂಗಳ ಭಾವನಾತ್ಮಕ ವಿಚಾರದಲ್ಲಿ ಮಹತ್ವದ ತೀರ್ಪು ಕೊಟ್ಟಿದೆ. ಒಬ್ಬ ಸಾಮಾನ್ಯ ಪ್ರಜೆ ಸಲ್ಲಿಸಿದ ಒಂದು ಅರ್ಜಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us