ಗಿಲ್ಲಿ ನಟ ವಿರುದ್ಧ ನೂರು ಜನ್ಮಕೂ ಸೀರಿಯಲ್ ನಟಿ ಶಿಲ್ಪಾ ಕಾಮತ್ ಗರಂ.. ಏಕೆ ಗೊತ್ತಾ?

author-image
Veena Gangani
Updated On
ಗಿಲ್ಲಿ ನಟ ವಿರುದ್ಧ ನೂರು ಜನ್ಮಕೂ ಸೀರಿಯಲ್ ನಟಿ ಶಿಲ್ಪಾ ಕಾಮತ್ ಗರಂ.. ಏಕೆ ಗೊತ್ತಾ?
Advertisment
  • ಕ್ವಾಟ್ಲೆ ಕಿಚನ್​ನಲ್ಲಿ ಗಿಲ್ಲಿ ನಟ ಮಾಡಿದ್ದೇನು ಗೊತ್ತಾ?
  • ಗಿಲ್ಲಿ ನಟನ ವಿರುದ್ಧ ಶಿಲ್ಪಾ ಕಾಮತ್ ಕೋಪಗೊಂಡಿದ್ದೇಕೆ?
  • ಅಡ್ವಾಂಟೇಜ್ ರೌಂಡ್‌ನಲ್ಲಿ ಗಿಲ್ಲಿ ನಟ ಹೀಗೆ ಮಾಡಿದ್ದೇಕೆ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ‘ಕ್ವಾಟ್ಲೆ ಕಿಚನ್’ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತದೆ. ಅದರಲ್ಲೂ ಕಾಮಿಡಿ ಜಾನರ್​ನಿಂದ ಬಂದ ಕಲಾವಿದರು ಕಿಚನ್​ನಲ್ಲಿ ಸಖತ್ ಕ್ವಾಟ್ಲೆ ಕೊಡ್ತಾ ಇದ್ದಾರೆ.

ಇದನ್ನೂ ಓದಿ:ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್​ ಮಸ್ತಿ.. ಹೋಗಿದ್ದು ಎಲ್ಲಿಗೆ ಗೊತ್ತಾ..? PHOTOS

publive-image

ಇನ್ನೂ, ಈ ಶೋನಲ್ಲಿ ಬಿಗ್​ಬಾಸ್​ ವಿನ್ನರ್​ ಮಂಜು ಪಾವಗಡ, ನಿವೇದಿತಾ ಗೌಡ, ಅನುಪಮಾ ಗೌಡ, ತುಕಾಲಿ ಸಂತೋಷ್​, ಗಿಲ್ಲಿ ನಟ ಸೇರಿದಂತೆ ಕಿರುತೆರೆ ನಟ ಹಾಗೂ ನಟಿಯರು ಭಾಗಿಯಾಗಿದ್ದಾರೆ. ಇನ್ನೂ, ಇದೇ ಶೋನಲ್ಲಿ ನೂರು ಜನ್ಮಕೂ ಸೀರಿಯಲ್ ಖ್ಯಾತಿಯ ಶಿಲ್ಪಾ ಕಾಮತ್ ಗಿಲ್ಲಿ ನಟನ ವಿರುದ್ಧ ಗರಂ ಆಗಿದ್ದಾರೆ.

publive-image

ಹೌದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಿಲ್ಲಿ ನಟ, ನಟಿ ಶಿಲ್ಪಾ ಕಾಮತ್‌ಗೆ ಕ್ವಾಟ್ಲೆ ಪಾರ್ಟ್ನರ್ ಆಗಿ ಸಿಕ್ಕಿದ್ದರು. ಈ ವೇಳೆ ಅಡ್ವಾಂಟೇಜ್ ರೌಂಡ್‌ನಲ್ಲಿ ಅಡ್ವಾಂಟೇಜ್ ತಗೊಂಡು ಶಿಲ್ಪಾ ಕಾಮತ್‌ ಕೈಗೆ ಗಿಲ್ಲಿ ನಟ ಮೇಲಿಂದ ಮೇಲೆ ಮುತ್ತು ಕೊಟ್ಟಿದ್ದಾರೆ. ಇದರಿಂದ ಶಿಲ್ಪಾ ಕಾಮತ್ ಗರಂ ಆಗಿದ್ದಾರೆ.

ಅಡ್ವಾಂಟೇಜ್ ಟಾಸ್ಕ್ ಪ್ರಕಾರ ಕ್ವಾಟ್ಲೆಗಳಿಗೆ ಕುಕ್‌ಗಳು ಪಾನಿ ಪೂರಿ ತಿನ್ನಿಸಬೇಕಿತ್ತು. 20 ನಿಮಿಷ ಅವಧಿಯಲ್ಲಿ ಯಾರು ಹೆಚ್ಚು ಪಾನಿ ಪೂರಿ ತಿನ್ನುತ್ತಾರೋ, ಅವರು ಗೆದ್ದಂತೆ. ಈ ರೌಂಡ್‌ನಲ್ಲಿ ಕ್ವಾಟ್ಲೆ ಗಿಲ್ಲಿ ನಟನಿಗೆ ಕುಕ್ ಶಿಲ್ಪಾ ಕಾಮತ್‌ ಪಾನಿ ಪೂರಿ ತಿನ್ನಿಸಲು ಆರಂಭಿಸಿದರು. ಅಡ್ವಾಂಟೇಜ್ ಟಾಸ್ಕ್‌ನಲ್ಲಿ ಅಡ್ವಾಂಟೇಜ್‌ ತಗೊಂಡು, ಪ್ರತಿ ಬಾರಿ ಪಾನಿಪೂರಿ ತಿನ್ನಿಸುವಾಗ ಶಿಲ್ಪಾ ಕಾಮತ್‌ ಕೈಗೆ ಗಿಲ್ಲಿ ನಟ ಮುತ್ತು ಕೊಡುತ್ತಿದ್ದರು. ಆಗ ಪ್ರೋಮೋದಲ್ಲಿ ಅಡ್ವಾಂಟೇಜ್ ತಗೊಂಡು ಗಿಲ್ಲಿ ನಟ ಕೈಗೆ ಮುತ್ತು ಕೊಡುತ್ತಿದ್ದರು. ಕೈಯಲ್ಲಿ ಗ್ಲೌಸ್‌ ಇತ್ತು ಅಂತ ಸುಮ್ಮನೆ ಇದ್ದೆ. ಇಲ್ಲಾಂದಿದ್ರೆ ಒಂದು ಕೈ ನೋಡಿಕೊಳ್ತಿದ್ದೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment