ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಯುವತಿ​.. ಮಳೆ ಬರ್ತಿದ್ದಾಗ ರಸ್ತೆ ಮೇಲೆ ಹುಚ್ಚಾಟ; VIDEO

author-image
Veena Gangani
Updated On
ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಯುವತಿ​.. ಮಳೆ ಬರ್ತಿದ್ದಾಗ ರಸ್ತೆ ಮೇಲೆ ಹುಚ್ಚಾಟ; VIDEO
Advertisment
  • ಮಳೆ ಬರ್ತಿದ್ರೂ ಜೋರಾಗಿ ಬೈಕ್​ ರೈಡ್​ ಮಾಡಿದ ಯುವತಿ
  • ಒಂದು ಕೈಯಲ್ಲಿ ಬೈಕ್ ರೈಡ್ ಮಾಡ್ತಾ ವಿಡಿಯೋ ಅಪ್ಲೋಡ್
  • ಬೆಂಗಳೂರಿಗರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ನೇಹಾ ಬಿಸ್ವಾಲ್

ಮಾಡೋದೆಲ್ಲ ಅನಾಚಾರ.. ಮನೆ ಮುಂದೆ ಬೃಂದಾವನ.. ಈ ಗಾದೆ ಉತ್ತರ ಭಾರತದ ಯುವತಿಗೆ ಸರಿಯಾಗಿ ಹೋಲುತ್ತೆ. ಜಸ್ಟ್​ ಕಾರಿನಿಂದ ಸಿಡಿದ ನೀರಿಗೆ ದೊಡ್ಡ ಸೀನ್​ ಕ್ರಿಯೇಟ್​ ಮಾಡಿ, ಬೆಂಗಳೂರಿನ ಜನಕ್ಕೆ ಬೈದಿದ್ಳು ಈಕೆ. ಆದ್ರೆ ಇದೀಗ ಈ ಯುವತಿ ರಸ್ತೆ ಮೇಲೆ ಹುಚ್ಚಾಟ ಮೆರೆದಿದ್ದಾಳೆ.

ಇದನ್ನೂ ಓದಿ:‘ಇಲ್ಲಿರೋರು ಅನಕ್ಷರಸ್ಥರು’.. ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಉತ್ತರ ಭಾರತದ ಯುವತಿ.. ಕಾರಣವೇನು?

publive-image

ಹೌದು, ಒಡಿಶಾ ಮೂಲದ ನೇಹಾ ಬಿಸ್ವಾಲ್ ಎಂಬ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಪಿಜಿಯಲ್ಲಿದ್ದಾಳೆ. ಮಳೆ ಬರುತ್ತಿದ್ದ ವೇಳೆ ಚಾಲಕನೊಬ್ಬ ಕಾರನ್ನು ಜೋರಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಆಗ ರಸ್ತೆ ಮೇಲಿದ್ದ ನೀರು ಆಕೆಯ ಮೈಮೇಲೆ ಹಾರಿದೆ. ಇದಕ್ಕೆ ಸಿಟ್ಟಿಗೆದ್ದ ಆಕೆ, ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ, ಜೋರು‌ ಮಳೆ ಬರ್ತಿದ್ರೂ, ವಾಹನವನ್ನ ಜೋರಾಗಿ ಓಡಿಸ್ತಾರೆ. ಬೆಂಗಳೂರಲ್ಲಿರೋರು ಅನಕ್ಷರಸ್ಥರೆಂದು ಎಂದು ಕೋಪದಲ್ಲಿ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಆದ್ರೆ ಇದೀಗ ಅದೇ ಯುವತಿ ಮಳೆ ಬರುತ್ತಿದ್ದರು ವೇಗವಾಗಿ ಬೈಕ್​ ರೈಡ್​ ಮಾಡಿದ್ದಾಳೆ. ಅಲ್ಲದೇ ಮಳೆಯಲ್ಲೇ ಜಾಲಿಯಾಗಿ, ಒಂದು ಕೈಯಲ್ಲಿ ಬೈಕ್ ರೈಡ್ ಮಾಡಿರೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾಳೆ. ಅಲ್ಲದೇ ಇದೇ ವೇಳೆ ಜಾಲಿ ರೈಡ್ ಮಾಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಇನ್ನೂ ಈಕೆ ಶೇರ್ ಮಾಡಿಕೊಂಡ ಒಂದೊಂದು ವಿಡಿಯೋಗಳಿಗೂ ನೆಟ್ಟಿಗರು ಕಾಮೆಂಟ್ಸ್​ ಹಾಕಿ ಚಳಿ ಬಿಡಿಸುತ್ತಿದ್ದಾರೆ. ಅಲ್ಲದೇ ಕ್ಷಮೆ ಕೇಳುವಂತೆ ಆಗ್ರಹಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment