‘ಇಲ್ಲಿರೋರು ಅನಕ್ಷರಸ್ಥರು’.. ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಉತ್ತರ ಭಾರತದ ಯುವತಿ.. ಕಾರಣವೇನು?

author-image
Veena Gangani
Updated On
‘ಬೆಂಗಳೂರಿನಲ್ಲಿ ಇರುವವರಿಗೆ ಬುದ್ಧಿ ಇಲ್ಲ’.. ಉತ್ತರ ಭಾರತದ ಯುವತಿ ವಿರುದ್ಧ ಕರವೇ ರಾಜ್ಯಾಧ್ಯಕ್ಷ ಆಕ್ರೋಶ
Advertisment
  • ಯುವತಿ ನಿಂದನೆ ವಿಡಿಯೋ ವೈರಲ್​ ಆಗ್ತಿದ್ದಂತೆ ಕನ್ನಡಿಗರು ಆಕ್ರೋಶ
  • ಮತ್ತೆ ಕನ್ನಡಿಗರು ಕೆರಳುವಂತೆ ಮಾಡಿದ ಹೊರ ರಾಜ್ಯದ ಯುವತಿ ಹೇಳಿಕೆ
  • ಯುವತಿಯನ್ನು ಬೆಂಗಳೂರು ಬಿಟ್ಟು ತೊಲಗು ಎನ್ನುತ್ತಿರೋ ಕನ್ನಡಿಗರು

ಇತ್ತೀಚಿನ ದಿನಗಳಲ್ಲಿ ಸಿಲಿಕಾನ್​ ಸಿಟಿ ಬಗ್ಗೆ ಹೊರ ರಾಜ್ಯದ ಯುವತಿಯರು ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ. ಈ ಹಿಂದೆ ಓಲಾ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ಆಗಿತ್ತು. ಜೀವನ ಮಾಡೋದಕ್ಕೆ ಬೆಂಗಳೂರು ಒಳ್ಳೆಯ ಜಾಗವಲ್ಲ ಅಂತ ದಂಪತಿ ಗಂಟು ಮೂಟೆ ಕಟ್ಟಿಕೊಂಡು ಹೊರಟು ಹೋಗಿದ್ದರು.

ಇದನ್ನೂ ಓದಿ:ವೀಕ್ಷಕರಿಗೆ ಇಷ್ಟವಾದ ಜೋಡಿ.. ಈ ಬಾರಿ ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್​ ಇವರೇನಾ?

publive-image

ಅಷ್ಟೇ ಅಲ್ಲದೇ ಉತ್ತರ ಭಾರತದ ಟೆಕ್ಕಿ ಮಹಿಳೆ ಆಟೋ ಚಾಲಕನಿಗೆ ಸಾರ್ವಜನಿಕ ಸ್ಥಳದಲ್ಲಿ ಚಪ್ಪಲಿಯಲ್ಲಿ ಹೊಡೆದಿದ್ದಳು. ಹೀಗೆ ಬೇರೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ಜೀವನ ಮಾಡುತ್ತಿರುವವರೇ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಡುತ್ತಿದ್ದಾರೆ. ಇದೀಗ ಮತ್ತೊಬ್ಬ ಉತ್ತರ ಭಾರತದ ಯುವತಿ ಬೆಂಗಳೂರಿಗರ ಬಗ್ಗೆ ನಾಲಗೆ ಹರಿಬಿಟ್ಟಿದ್ದಾಳೆ. ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ ಎಂದು ದುರಹಂಕಾರ ಮಾತನ್ನು ಆಡಿದ್ದಾಳೆ.

publive-image

ಹೌದು, ಒಡಿಶಾ ಮೂಲದ ನೇಹಾ ಬಿಸ್ವಾಲ್ ಎಂಬ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಪಿಜಿಯಲ್ಲಿದ್ದಾಳೆ. ಬೆಂಗಳೂರು ಹಾಗೂ ಇಲ್ಲಿನ ಜನರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡಿದ ಯುವತಿ ಅದೇ ವಿಡಿಯೀವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಳು. ಅದೇ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ ಯುವತಿ, ಚಾಲಕನೊಬ್ಬ ಮಳೆ ಬರುತ್ತಾ ಇದ್ದರು ಕಾರನ್ನು ಜೋರಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಆಗ ರಸ್ತೆ ಮೇಲೆ ಬಿದ್ದ ನೀರು ಆಕೆಯ ಮೈಮೇಲೆ ಹಾರಿದೆ. ಇದಕ್ಕೆ ಸಿಟ್ಟಿಗೆದ್ದ ಆಕೆ, ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ, ಜೋರು‌ ಮಳೆ ಬರ್ತಿದ್ರೂ, ವಾಹನವನ್ನ ಜೋರಾಗಿ ಓಡಿಸ್ತಾರೆ. ಬೆಂಗಳೂರಲ್ಲಿರೋರು ಅನಕ್ಷರಸ್ಥರೆಂದು ಎಂದು ಕೋಪದಲ್ಲಿ ಮಾತಾಡಿದ್ದಾಳೆ. ಆವೇಶದಲ್ಲಿ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಯುವತಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಸೋಷಿಯಲ್​ ಮೀಡಿಯಾದಲ್ಲಿ ಈಕೆಗೆ ಕಾಮೆಂಟ್ಸ್​ ಮಾಡುವ ಮೂಲಕ ಕನ್ನಡಿಗರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment