Advertisment

ನಾವು ಇಲ್ಲ ಅಂದ್ರೆ PG, ಕ್ಲಬ್‌ಗಳು ಖಾಲಿ ಕಣ್ರೋ.. ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಮತ್ತೊಬ್ಬ ಯುವತಿ!

author-image
Veena Gangani
Updated On
ಏನೀವಾಗ.. ಬೆಂಗಳೂರು ಬಿಟ್ಟು ಹೋಗಲ್ಲ; ಉತ್ತರ ಭಾರತದ ಯುವತಿ ಮತ್ತೆ ಸವಾಲು! VIDEO
Advertisment
  • ಯುವತಿ ನಿಂದನೆ ವಿಡಿಯೋ ವೈರಲ್​ ಆಗ್ತಿದ್ದಂತೆ ನಟಿಯರ ಆಕ್ರೋಶ
  • ಮತ್ತೆ ಕನ್ನಡಿಗರ ಕೆರಳುವಂತೆ ಮಾಡಿದ ಹೊರ ರಾಜ್ಯದ ಯುವತಿ ಹೇಳಿಕೆ
  • ಯುವತಿಯನ್ನು ಬೆಂಗಳೂರನ್ನು ಬಿಟ್ಟು ತೊಲಗು ಎನ್ನುತ್ತಿರೋ ಕನ್ನಡಿಗರು

ಇತ್ತೀಚಿನ ದಿನಗಳಲ್ಲಿ ಸಿಲಿಕಾನ್​ ಸಿಟಿ ಬಗ್ಗೆ ಹೊರ ರಾಜ್ಯದ ಯುವತಿಯರು ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ. ಮೊನ್ನೆಯಷ್ಟೇ ಓಲಾ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ಆಗಿತ್ತು. ನಂತರ ಆಟೋ ಚಾಲಕನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಕೇಳಿ ಬಂದಿತ್ತು.

Advertisment

ಇದನ್ನೂ ಓದಿ: ‘ಬೆಂಗಳೂರು ನಡಿಯುತ್ತಿರೋದೇ ನಮ್ಮಿಂದ..’ ಕನ್ನಡಿಗರ ಕೆಣಕಿದ ಹೊರ ರಾಜ್ಯದ ಯುವತಿ, ಭುಗಿಲೆದ್ದ ಆಕ್ರೋಶ

ಅದರಂತೆ ಚಾಲಕನ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದರು. ಈ ಘಟನೆಯನ್ನ ಖಂಡಿಸುವ ಆವೇಶದಲ್ಲಿ ಬೆಂಗಳೂರಿನ ಸ್ಥಳೀಯರ ವಿರುದ್ಧ ಉತ್ತರ ಭಾರತದ ಯುವತಿಯೊಬ್ಬಳು ನಾಲಿಗೆ ಹರಿಬಿಟ್ಟಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಳು. ಇದೀಗ ಮತ್ತೊಬ್ಬ ಹೊರ ರಾಜ್ಯದ ಯುವತಿ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾಳೆ.

ಉತ್ತರ ಭಾರತೀಯ ಮೂಲದ ಯುವತಿ ಸುಗಂಧ್ ಶರ್ಮಾ ಇನ್​ಸ್ಟಾ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಉತ್ತರ ಭಾರತದವರಾದ ನಾವು ಬೆಂಗಳೂರನ್ನು ಬಿಟ್ಟು ಹೋದ್ರೆ ನಿಮ್ಮ ಸಿಟಿ ಫುಲ್​ ಖಾಲಿ ಆಗುತ್ತೆ. ಇದಕ್ಕೂ ಮೊದಲು ಬೆಂಗಳೂರಿನ ಪಿಜಿಗಳು ಫುಲ್​ ಖಾಲಿ ಆಗುತ್ತೆ. ಕೋರಮಂಗಲ ಕ್ಲಬ್​ಗಳು ಖಾಲಿಯಾಗುತ್ತೆ ಕಣ್ರೋ. ಕ್ಲಬ್​ಗಳಲ್ಲಿ ಡ್ಯಾನ್ಸ್​ ಮಾಡಲು ಹುಡುಗಿಯರೇ ಇರುವುದಿಲ್ಲ. ಯೋಚನೆ ಮಾಡಿ ನಮ್ಮ ಬಗ್ಗೆ ಮಾತಾಡಿ ಅಂತ ಹೇಳಿದ್ದಾಳೆ. ಈಕೆ ಶೇರ್ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Advertisment


ಇದೇ ವಿಡಿಯೋ ನೋಡಿದ ಕನ್ನಡಿಗರು ಕಾಮೆಂಟ್ಸ್​ ಬಾಕ್ಸ್​ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಯಾಕೆ ಕನ್ನಡದ ಕಿರುತೆರೆ ಹಾಗೂ ಹಿರಿತೆರೆ ನಟ ನಟಿಯರು ಯುವತಿಯ ವಿರುದ್ಧ ಕೆಂಡಮಂಡಲ ಆಗಿದ್ದಾರೆ. ಅನುಪಮಾ ಗೌಡ, ಗಾಯಕ ಚಂದನ್​ ಶೆಟ್ಟಿ, ವಿನಯ್​ ಗೌಡ, ನಟ ಧನರಾಜ್ ಸಿಎಂ, ಗಾಯಕಿ ಐಶ್ವರ್ಯಾ ರಂಗರಾಜನ್ ಸೇರಿದಂತೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment