/newsfirstlive-kannada/media/post_attachments/wp-content/uploads/2024/11/NORTH-KOREA-SOLDIERS-1.jpg)
ರಷ್ಯಾ-ಉಕ್ರೇನ್ ನಡುವಿನ ಕದನ ಸದ್ಯಕ್ಕೆ ಮುಗಿಯುವ ಯಾವ ಲಕ್ಷಣಗಳು ಕೂಡ ಕಾಣುತ್ತಿಲ್ಲ. ಉಭಯ ರಾಷ್ಟ್ರಗಳು ಕಳೆದ ಮೂರು ವರ್ಷಗಳಿಂದ ಕದನಕ್ಕೆ ಇಳಿದಿವೆ. ಯಾರ ಮಧ್ಯಸ್ತಿಕೆಗೆ ಜಗ್ಗದ ರಷ್ಯಾ ಉಕ್ರೇನ್ ಸರ್ವನಾಶಕ್ಕೆ ಸಜ್ಜಾಗಿ ನಿಂತಿದೆ. ಸದ್ಯ ರಷ್ಯಾ ಪರವಾಗಿ ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಿಂತಿದ್ದಾರೆ. ರಷ್ಯಾ ಸೈನಿಕರ ಜೊತೆ ಸೇರಿ ಉಕ್ರೇನ್ ವಿರುದ್ಧ ಯುದ್ಧ ಮಾಡಲು ಅಂತ ಸಾವಿರಾರು ಸೈನಿಕರನ್ನು ಉತ್ತರ ಕೋರಿಯಾ ರಷ್ಯಾಗೆ ಕಳುಹಿಸಿದೆ. ಒಂದೇ ಒಂದು ಯುದ್ಧವನ್ನು ಮಾಡಿಯೂ ಅನುಭವವಿಲ್ಲದ ಈ ಪಡೆ ಉಕ್ರೇನ್ ಅಂಗಳದಲ್ಲಿ ಕುಳಿತು ಅಶ್ಲೀಲ ವಿಡಿಯೋ ನೋಡುವುದರಲ್ಲಿ ಬ್ಯುಸಿ ಆಗಿದೆ.
ಉಕ್ರೇನ್ ವಿರುದ್ಧ ಯುದ್ಧಕ್ಕೆ ಅಂತ ಬಂದ ಉತ್ತರ ಕೋರಿಯಾ ಸೈನಿಕರು ಸೆಕ್ಸ್ ವಿಡಿಯೋಸ್ಗಳನ್ನು ನೋಡುತ್ತಾ ಕುಳಿತಿದ್ದಾರೆ. ಅವರ ದೇಶದಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲ. ರಣಾಂಗಣದಲ್ಲಿ ಕಾದಡಿಯೂ ಕೂಡ ಅನುಭವವಿಲ್ಲ. ಉಕ್ರೇನ್ ಅಂಗಳದಲ್ಲಿ ಇಂಟರ್ನೆಟ್ ಸಿಕ್ಕ ಕ್ಷಣದಿಂದಲೇ ಪೋರ್ನ್ ವೆಬ್ಸೈಟ್ಗಳಿಗೆ ಲಾಗಿನ್ ಆಗಿ ಅಶ್ಲೀಲ ವಿಡಿಯೋ ನೋಡುತ್ತಾ ಕಾಲ ಕಳೆಯುತ್ತಿದೆ ಕಿಮ್ ಜಾಂಗ್ ಉನ್ ಪಡೆ.
ಇದನ್ನೂ ಓದಿ:ಒಂದೇ ಅಪಾರ್ಟ್ಮೆಂಟ್, ನಾಲ್ಕು ಹೆಂಡತಿಯರು! ಒಬ್ಬರಿಗೂ ಬರಲಿಲ್ಲ ಡೌಟ್..! ಇವನೊಬ್ಬ ಪ್ರಚಂಡ ಗಂಡ
ರಣರಂಗದಲ್ಲಿ ಹೋರಾಡಲು ಬಂದವರು ಪಲ್ಲಂಗದ ಸುಖದ ದೃಶ್ಯಗಳಗೆ ಮಾರು ಹೋಗಿದ್ದಾರೆ. ಇದಕ್ಕೂ ಕಾರಣವೂ ಇದೆ. ಉತ್ತರ ಕೋರಿಯಾದ ಸೈನಿಕರಿಗೆ ಇಂಟರ್ನೆಟ್ ಸೌಲಭ್ಯವನ್ನು ಕೊಡಲಾಗುವುದಿಲ್ಲ. ಅವರ ಮೇಲೆ ಅಲ್ಲಿ ಅನೇಕ ನಿರ್ಬಂಧಗಳಿವೆ. ಉಕ್ರೇನ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವ ಉತ್ತರ ಕೋರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ 10 ಸಾವಿರ ಸೈನಿಕರನ್ನು ರಷ್ಯಾಗೆ ಕಳುಹಿಸಿದ್ದಾರೆ. ರಷ್ಯಾದಲ್ಲಿ ಉತ್ತರ ಕೋರಿಯಾದಲ್ಲಿರುವಂತ ನಿರ್ಬಂಧಗಳು ಸೈನಿಕರ ಮೇಲಿಲ್ಲ. ಹೀಗಾಗಿ ಇಂಟರ್ನೆಟ್ ಸಿಗುತ್ತಿದ್ದಂತೆ. ರತಿಲೋಕದ ರಸಮಯ ದೃಶ್ಯಗಳನ್ನು ಸವಿಯುತ್ತಾ ಕುಳಿತಿದೆ ಕಿಮ್ ಜಾಂಗ್ ಉನ್ ಸೈನಿಕರ ಪಡೆ
ಉತ್ತರ ಕೋರಿಯಾ ಸೈನಿಕರ ವರ್ತನೆಗೆ ಪುಟಿನ್ ಕೆಂಡ
ಇನ್ನು ಉತ್ತರ ಕೋರಿಯಾದ ಸೈನಿಕರ ಈ ವರ್ತನೆ ಈಗ ದೊಡ್ಡ ಸುದ್ದಿಯಾಗಿದೆ. ಇದರಿಂದ ರಷ್ಯಾದ ಅಧ್ಯಕ್ಷ ವ್ಲಾಡಮೀರ್ ಪುಟಿನ್ ಕೆರಳಿ ಕೆಂಡವಾಗಿದ್ದಾರೆ. ಈ ತರಹದ ನಡುವಳಿಕೆಯನ್ನು ರಷ್ಯಾ ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಸೈನಿಕರು ಅಂದ್ರೆ ಶಿಸ್ತಿಗೆ, ಶ್ರದ್ಧೆಗೆ, ತ್ಯಾಗ ಬಲಿದಾನಗಳಿಗೆ ಇನ್ನೊಂದು ಹೆಸರು. ಆದ್ರೆ ಉತ್ತರ ಕೋರಿಯಾದ ಸೈನಿಕರ ಈ ವರ್ತನೆ ಸೇನೆಯ ಮೇಲಿನ ಗೌರವವೇ ಕಡಿಮೆ ಮಾಡುವಂತಿದೆ ಎಂದು ಹಲವರು ವಾದಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ