200 ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನ.. 10ನೇ ತರಗತಿ ಪಾಸ್​ ಆಗಿದ್ರೆ ಸಾಕು

author-image
Bheemappa
Updated On
400ಕ್ಕೂ ಹೆಚ್ಚು ಹುದ್ದೆಗಳನ್ನ ಆಹ್ವಾನಿಸಿದ ಕೋಲ್ ಇಂಡಿಯಾ ಲಿಮಿಟೆಡ್.. ಕೂಡಲೇ ಅಪ್ಲೇ ಮಾಡಿ
Advertisment
  • ಎನ್​​ಸಿಎಲ್ ಸಂಸ್ಥೆಯಿಂದ ಹೊಸ ಅರ್ಜಿಗಳ ಆಹ್ವಾನವಿದೆ
  • ಎಸ್​ಎಸ್​ಎಲ್​ಸಿ ಪಾಸ್ ಆಗಿದ್ದರೇ ನೀವೂ ಅರ್ಜಿ ಸಲ್ಲಿಸಿ
  • ಸಂಸ್ಥೆಯು ಯಾವ್ಯಾವ ಉದ್ಯೋಗಗಳನ್ನು ಭರ್ತಿ ಮಾಡುತ್ತಿದೆ?

ಉತ್ತರದ ಕಲ್ಲಿದ್ದಲು ಕ್ಷೇತ್ರ ಅಥವಾ ನಾರ್ತರರ್ನ್​​ ಕೋಲ್​​ಫೀಲ್ಡ್ ಲಿಮಿಟೆಡ್ (ಎನ್​​ಸಿಎಲ್​) ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲು ಯೋಜಿಸಲಾಗಿದೆ. ಈ ಸಂಬಂಧ ಎನ್​​ಸಿಎಲ್ ಸಂಸ್ಥೆಯು ಹೊಸ ಅರ್ಜಿಗಳನ್ನು ಆಹ್ವಾನ ಮಾಡಿದೆ. ಯಾವ ಅಭ್ಯರ್ಥಿಗೆ ಇಲ್ಲಿ ಕೆಲಸ ಮಾಡಲು ಇಷ್ಟ ಇದೆಯೋ ಅಂತಹವರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಎನ್​​ಸಿಎಲ್ ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ. ಈ ಬಗೆಗಿನ ಎಲ್ಲ ವಿವರವಾದ ಮಾಹಿತಿ ಈ ಆರ್ಟಿಕಲ್​ನಲ್ಲಿ ಕೊಡಲಾಗಿದೆ. ಇದನ್ನು ಅಭ್ಯರ್ಥಿಗಳು ಸಂಪೂರ್ಣವಾಗಿ ಗಮನಿಸಿ. ಅರ್ಜಿ ಶುಲ್ಕ, ಎಷ್ಟು ಉದ್ಯೋಗಗಳು, ವಿದ್ಯಾರ್ಹತೆ ಏನು ಇತ್ಯಾದಿ ಮಾಹಿತಿ ಈ ಕೆಳಗೆ ಇದೆ.

ಉದ್ಯೋಗದ ಹೆಸರು ಹಾಗೂ ಎಷ್ಟು ಹುದ್ದೆಗಳು?

  • ಟೆಕ್ನಿಷಿಯನ್ ಫಿಟ್ಟರ್ ಟ್ರೈನಿ ಕ್ಯಾಟ್-3- 95 ಹುದ್ದೆಗಳು
  • ಟೆಕ್ನಿಷಿಯನ್ ಎಲೆಕ್ಟ್ರಿಷಿಯನ್ ಟ್ರೈನಿ ಕ್ಯಾಟ್-3- 95 ಕೆಲಸಗಳು
  • ಟೆಕ್ನಿಷಿಯನ್ ವೆಲ್ಡರ್​ ಟ್ರೈನಿ ಕ್ಯಾಟ್-3- 10 ಉದ್ಯೋಗಗಳು

ಒಟ್ಟು ಉದ್ಯೋಗಗಳು- 200

ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಗುಡ್​ನ್ಯೂಸ್​.. 50 ವರ್ಷದ ಒಳಗಿನವರಿಗೆ 100ಕ್ಕೂ ಹೆಚ್ಚು ಉದ್ಯೋಗಗಳು

publive-image

ವಿದ್ಯಾರ್ಹತೆ ಏನು ಇದೆ?
10ನೇ ತರಗತಿ
2 ವರ್ಷದ ಐಟಿಐ
1 ವರ್ಷದ ಅಪ್ರೆಂಟಿಸ್ ಆಗಿರಬೇಕು

ಆಯ್ಕೆ ವಿಧಾನ
ಲಿಖಿತ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ

ಉದ್ಯೋಗಕ್ಕೆ ಸಂಬಂಧಿಸಿದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 10 ಮೇ 2025

ಅರ್ಜಿ ಸಲ್ಲಿಕೆಗೆ ವೆಬ್​ಸೈಟ್-https://cdn.digialm.com/EForms/configuredHtml/1258/92843/Registration.html ​

ಸಂಪೂರ್ಣ ಮಾಹಿತಿಗಾಗಿ-
https://static-cdn.publive.online/newsfirstlive-kannada/media/pdf_files//per/g03/pub/726/EForms/image/ImageDocUpload/71161/01803539266.pdf

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment