Advertisment

ಚಲಿಸುತ್ತಿದ್ದ ಸರ್ಕಾರಿ ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ; ಟಯರ್ ಸ್ಫೋಟ, ಮುಂದೇನಾಯ್ತು?

author-image
AS Harshith
Updated On
ಚಲಿಸುತ್ತಿದ್ದ ಸರ್ಕಾರಿ ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ; ಟಯರ್ ಸ್ಫೋಟ, ಮುಂದೇನಾಯ್ತು?
Advertisment
  • ಸುಮಾರು 25 ಕ್ಕೂ ಹೆಚ್ಚಿನ ಪ್ರಯಾಣಿಕರು ಬಸ್​ನಲ್ಲಿದ್ದರು
  • ಮುರುಡೇಶ್ವರದಿಂದ ಹುಬ್ಬಳ್ಳಿ- ಅಥಣಿ ಕಡೆಗೆ ಸಾಗುತ್ತಿದ್ದ ಬಸ್​​
  • ಬಸ್​ನಲ್ಲಿದ್ದ ಪ್ರಯಾಣಿಕರ ಪರಿಸ್ಥಿತಿ? ಮುಂದೇನಾಯ್ತು? ಇಲ್ಲಿದೆ ಓದಿ

ಉತ್ತರಕನ್ನಡ: ಚಲಿಸುತ್ತಿರುವ ಸರ್ಕಾರಿ ಬಸ್​​ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ಕುಮಟಾ ರಸ್ತೆಯಲ್ಲಿ ಈ ಘಟನೆ ನಡೆದಿದೆ.

Advertisment

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ, ವಿವಾಹಿತೆ ಟೆಕ್ಕಿ ಆತ್ಮಹ*.. ಆಕೆಯ ಸಾವಿಗೆ ಪತಿ, ಮೈದುನಾ ಕಾರಣರಾದ್ರಾ?

ಬಸ್ ಮುರುಡೇಶ್ವರದಿಂದ ಹುಬ್ಬಳ್ಳಿ- ಅಥಣಿ ಕಡೆಗೆ ತೆರಳುತ್ತಿತ್ತು. ​ ಸುಮಾರು 25 ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಈ ವೇಳೆ ಟಯರ್ ಒಳಗಿನೊಳಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡು ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಪ್ರಯಾಣಿಕರ ಚೀರಾಟ ಕಂಡು ಚಾಲಕ ಬಸ್ ನಿಲ್ಲಿಸಿದ್ದಾನೆ.

ಇದನ್ನೂ ಓದಿ: KRS Dam: ಎರಡು ವಾರದಿಂದ ಒಳ ಹರಿವು ಹೆಚ್ಚಳ.. 100 ಅಡಿ ಭರ್ತಿ! ಸದ್ಯ ಎಷ್ಟಿದೆ ನೀರಿನ ಮಟ್ಟ? 

Advertisment

ಪ್ರಯಾಣಿಕರು ಇಳಿದ ಬಳಿಕ ಟಯರ್ ಸ್ಫೋಟಗೊಂಡಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದು, ಪವಾಡ ಸದೃಶ್ಯ ರೂಪದಲ್ಲಿ ಭಾರೀ ಬೆಂಕಿ ಅನಾಹುತ ಕೈ ತಪ್ಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment