Advertisment

ನಂಗೆ ಡಿವೋರ್ಸ್ ಕೊಟ್ಟಿಲ್ಲ.. ಬೇರೆ ವ್ಯಕ್ತಿ ಜೊತೆ ಮದ್ವೆ ಆಗಲು ಸಾಧ್ಯವೇ ಇಲ್ಲ -ಪಾಕ್​ಗೆ ಓಡಿ ಹೋಗಿರುವ ಅಂಜು ಪತಿ ಆಕ್ರೋಶ

author-image
Ganesh
Updated On
ಪಾಕ್​ ಪ್ರಿಯಕರನೊಂದಿಗೆ ಕಾಲ್ಕಿತ್ತ ಅಂಜು ಮತ್ತೆ ಭಾರತಕ್ಕೆ ಬರ್ತಿದ್ದಾಳೆ? ಮಾಸದ ನೆನಪಿನಲ್ಲಿ ಕೊರಗುತ್ತಿದ್ದಾಳಂತೆ ಫಾತಿಮಾ 
Advertisment
  • ಪ್ರಿಯತಮನಿಗಾಗಿ ಪಾಕ್​ಗೆ ಗುಟ್ಟಾಗಿ ಓಡಿ ಹೋಗಿರುವ ಅಂಜು
  • ಮದ್ವೆ ಸುದ್ದಿ ಬೆನ್ನಲ್ಲೇ ರೊಚ್ಚಿಗೆದ್ದ ಅಂಜು ಪತಿ ಅರವಿಂದ್ ಕುಮಾರ್
  • ಭಾರತದ ಅಂಜು ಈಗ ಪಾಕಿಸ್ತಾನದಲ್ಲಿ ಫಾತಿಮಾ ಆಗಿದ್ದಾಳೆ

ಪಾಕಿಸ್ತಾನದಲ್ಲಿರುವ ಫೇಸ್​ಬುಕ್ ಸ್ನೇಹಿತನನ್ನು ಭೇಟಿಯಾಗಲು ಗುಟ್ಟಾಗಿ ಹೋಗಿರುವ ರಾಜಸ್ಥಾನದ ಅಂಜು, ನಸ್ರುಲ್ಲಾನನ್ನು ಮದುವೆ ಆಗಿದ್ದಾಳೆ ಎಂದು ಹೇಳಲಾಗಿದೆ. ಆದರೆ ರಾಜಸ್ಥಾನದಲ್ಲಿರುವ ಆಕೆಯ ಗಂಡ, ಮದುವೆ ವಿಚಾರವನ್ನು ತಳ್ಳಿ ಹಾಕಿದ್ದಾನೆ.

Advertisment

publive-image

ಅಂಜು ನನಗೆ ಡಿವೋರ್ಸ್​ ನೀಡಿಲ್ಲ. ಹೀಗಾಗಿ ಆಕೆ ಯಾರನ್ನೂ ಮದುವೆ ಆಗಲು ಸಾಧ್ಯವೇ ಇಲ್ಲ ಎಂದಿದ್ದಾನೆ. ಅಂಜು ಮೂರು ವರ್ಷದ ಹಿಂದೆಯೇ ದೆಹಲಿಯಲ್ಲಿ ಡಿವೋರ್ಸ್​ ಪೇಪರ್​ ನೀಡಿದ್ದಾಳೆ. ಆದರೆ ನನಗೆ ಇನ್ನೂ ಕೋರ್ಟ್​ನಿಂದ ಯಾವುದೇ ನೋಟಿಸ್ ಬಂದಿಲ್ಲ. ಹೀಗಾಗಿ ಈಗಲೂ ಕೂಡ ಆಕೆ ನನ್ನ ಹೆಂಡತಿ. ಯಾರನ್ನೂ ಕೂಡ ಮದುವೆ ಆಗುವಂತಿಲ್ಲ. ಈ ಬಗ್ಗೆ ಸರ್ಕಾರ ತನಿಖೆಯನ್ನು ನಡೆಸಬೇಕು ಎಂದು ಅಂಜು ಪತಿ ಅರವಿಂದ್ ಕುಮಾರ್ ಹೇಳಿದ್ದಾರೆ.

publive-image

ಪಾಕಿಸ್ತಾನಕ್ಕೆ ತೆರಳಿರುವ ಅಂಜು (34) ಸ್ನೇಹಿತ ನಸ್ರುಲ್ಲನನ್ನು ಮದುವೆಯಾಗಿದ್ದಾಳೆ. ಮಾತ್ರವಲ್ಲ ಇಸ್ಲಾ ಧರ್ಮಕ್ಕೆ ಮತಾಂತರಗೊಂಡಿರುವ ಆಕೆ ಫಾತಿಮಾ ಎಂದು ಹೆಸರನ್ನೂ ಸಹ ಬದಲಾಯಿಸಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಇನ್ನು ಪತಿಯ ಮದುವೆ ವಿಚಾರದ ಬಗ್ಗೆ ತನಿಕೆ ನಡೆಸುವಂತೆ ಅರವಿಂದ್ ಕುಮಾರ್ ಒತ್ತಾಯಿಸಿದ್ದಾರೆ. ಸರ್ಕಾರ ಆಕೆಯ ಡಾಕ್ಯುಮೆಂಟ್ಸ್, ವಿಸಾ ಅದೆಲ್ಲವನ್ನೂ ಪರಿಶೀಲಿಸಬೇಕು. ನನ್ನ ಪ್ರಕಾರ ಆಕೆ ನಕಲಿ ದಾಖಲೆಗಳನ್ನು ತೋರಿಸಿ ಪಾಕಿಸ್ತಾನಕ್ಕೆ ಹೋಗಿರಬೇಕು ಎಂಬ ಅನುಮಾನ ವ್ಯಕ್ತಪಡಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment