/newsfirstlive-kannada/media/post_attachments/wp-content/uploads/2025/04/VAIBHAV-7.jpg)
ವಿವಿಎಸ್ ಲಕ್ಷಣ್, ರಾಹುಲ್ ದ್ರಾವಿಡ್. ಟೀಮ್ ಇಂಡಿಯಾ ಕಂಡ ಶ್ರೇಷ್ಠ ಕ್ರಿಕೆಟಿಗರು. ಇವರಿಬ್ಬರ ಜುಗಲ್ಬಂದಿ ಸೋಲಿನ ಅಂಚಿನಲ್ಲಿದ್ದ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿದೆ. ಭವಿಷ್ಯದ ಟೀಮ್ ಇಂಡಿಯಾಗೂ ಇವರಿಬ್ಬರ ಕೊಡುಗೆ ಅಪಾರ. ಈಗ ಟೀಮ್ ಇಂಡಿಯಾದಲ್ಲಿ ಘರ್ಜಿಸ್ತಿರೋ ಹಲವು ಯುವ ಕ್ರಿಕೆಟಿಗರು ಪಳಗಿದ್ದೇ ಇವರ ಗರಡಿಯಲ್ಲಿ. ಇದೀಗ ಆ ಲಿಸ್ಟ್ಗೆ ಹೊಸ ಸೇರ್ಪಡೆ ವೈಭವ್ ಸೂರ್ಯವಂಶಿ.
ಡೆಬ್ಯು ಮ್ಯಾಚ್ನ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಟ್ರೇಡ್ ಮಾರ್ಕ್ ಸೃಷ್ಟಿಸಿದ್ದ 14ರ ವೈಭವ್ 3ನೇ ಪಂದ್ಯದಲ್ಲಿ ಸುನಾಮಿ ಸೃಷ್ಟಿಸಿದ್ರು. ಈತನ ಬಿರುಗಾಳಿ ಬ್ಯಾಟಿಂಗ್ಗೆ ಎದುರಾಳಿ ಗುಜರಾತ್ ಟೈಟನ್ಸ್ ಮಾತ್ರವಲ್ಲ. ಇಡೀ ಕ್ರಿಕೆಟ್ ಲೋಕವೇ ಬೆಚ್ಚಿ ಬೆದ್ದಿದೆ. ಈ ಹುಡುಗನ ಸೆನ್ಸೇಷನಲ್ ಶತಕಕ್ಕೆ ಐಪಿಎಲ್ ರೆಕಾರ್ಡ್ಸ್ ಚಿಂದಿಯಾಗಿದೆ.
ಇದನ್ನೂ ಓದಿ: ಫೋನ್ ಪೇನಲ್ಲಿ ಚಿನ್ನದಂಥ ಅವಕಾಶ.. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಭರ್ಜರಿ ಆಫರ್..!
ಈತನ ಆಟಕ್ಕೆ ಮಾರು ಹೋದ ಕ್ರಿಕೆಟ್ ದಿಗ್ಗಜರು, ಸೆಲ್ಯೂಟ್ ಹೊಡೆದು ಫಿಯರ್ ಲೆಸ್ ಆಟವನ್ನ ಕೊಂಡಾಡ್ತಿದ್ದಾರೆ. 14 ವರ್ಷದ ಹುಡುಗ ಏನ್ ಮಾಡ್ತಾನೆ ಎಂದವರೇ ಇವತ್ತು ಭವಿಷ್ಯದ ಸೂಪರ್ ಸ್ಟಾರ್ ಎಂದು ಭವಿಷ್ಯ ನುಡಿಯುತ್ತಾ, Vaibhav Suryavnshi remenber the name ಅಂತಿದ್ದಾರೆ. ಅಸಲಿಗೆ ಈತ ಭವಿಷ್ಯದ ಸ್ಟಾರ್ ಆಗ್ತಾನೆ ಎಂದು ಮೊದಲು ಗುರುತಿಸಿದ್ದು ಇಬ್ಬರು ಲೆಜೆಂಡ್ಸ್. ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್.
ಲಕ್ಷ್ಮಣ್ ಗುರುತಿಸಿದ್ದ ಪ್ರತಿಭೆ ಸೂರ್ಯವಂಶಿ
BCCI ಆಯೋಜಿಸಿದ್ದ ಅಂಡರ್ 19 ಒನ್ ಡೇ ಟೂರ್ನಿಗೆ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ರು. ಈ ಟೂರ್ನಿಯಲ್ಲಿ ವೈಭವ್ ಆಟ ನೋಡಿದ್ದ ವಿವಿಎಸ್ ಲಕ್ಷ್ಮಣ್, ಇಂಪ್ರೆಸ್ ಆಗಿದ್ದರು. ಬಳಿಕ ಇಂಗ್ಲೆಂಡ್, ಬಾಂಗ್ಲಾ ವಿರುದ್ಧದ ಅಂಡರ್ 19 ಚತುಷ್ಕೋನ ಸರಣಿಗೆ ಆಯ್ಕೆ ಮಾಡಿದ್ರು. ಈ ಸರಣಿಯ ಪಂದ್ಯವೊಂದರಲ್ಲಿ 36 ರನ್‌ಗಳಿಗೆ ಔಟ್ ಆಗಿದ್ದ ವೈಭವ್, ಡ್ರೆಸ್ಸಿಂಗ್ ರೂಮಿನಲ್ಲಿ ಕಣ್ಣೀರು ಹಾಕ್ತಿದ್ದರು. ಆಗ ಸಂತೈಸಿದ್ದ ಲಕ್ಷ್ಮಣ್, ನಾವಿಲ್ಲಿ ರನ್ ನೋಡಲ್ಲ. ಕೌಶಲ್ಯ ಹೊಂದಿರುವ ಆಟಗಾರರನ್ನಷ್ಟೇ ಗುರುತಿಸುತ್ತೇವೆ ಎಂದು ಧೈರ್ಯ ತುಂಬಿದ್ದರು.
ಇದನ್ನೂ ಓದಿ: ಆರ್ಸಿಬಿ ಸಕ್ಸಸ್ ಹಿಂದೆ ಜೋಡೆತ್ತು ಕಾರಣ.. ಕೊಹ್ಲಿಗೆ ಸಾಥಿ ಆಗಿದ್ದು ಒಬ್ಬರಲ್ಲ, ಇಬ್ಬರು..!
ದ್ರಾವಿಡ್‌ಗೆ ವೈಭವ್ ಹೆಸರು ಶಿಫಾರಸು
ಐಪಿಎಲ್ ಮೆಗಾ ಹರಾಜಿಗೂ ಮುನ್ನ ವೈಭವ್ ಹೆಸರನ್ನ ದ್ರಾವಿಡ್‌ಗೆ ಲಕ್ಷ್ಮಣ್ ಶಿಫಾರಸು ಮಾಡಿದ್ರು. ಸ್ನೇಹಿತನ ಮಾತಿನಂತೆ ರಾಜಸ್ಥಾನ್ ರಾಯಲ್ಸ್ ಟ್ರಯಲ್ಸ್ ಬರುವಂತೆ ದ್ರಾವಿಡ್ ಆಹ್ವಾನಿಸಿದ್ರು. ಟ್ರಯಲ್ಸ್ ಈತನ ಫಿಯರ್ಲೆಸ್ ಬ್ಯಾಟಿಂಗ್ ನೋಡಿದ್ದ ದ್ರಾವಿಡ್ ಫುಲ್ ಇಂಪ್ರೆಸ್ ಆಗಿದ್ದರು. ಫ್ರಾಂಚೈಸಿ ಮನವೊಲಿಸಿ ಮೆಗಾ ಹರಾಜಿನಲ್ಲಿ ಬರೋಬ್ಬರಿ 1.10 ಕೋಟಿ ನೀಡಿ ಖರೀದಿಸಿದ್ರು. ಈ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಅವತ್ತೇ ದ್ರಾವಿಡ್, ಈತನ ಸ್ಕಿಲ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
14 ವರ್ಷದ ವೈಭವ್ ಸೂರ್ಯವಂಶಿಗೆ ಸ್ವತಃ ದ್ರಾವಿಡ್, ನೆಟ್ಸ್‌ನಲ್ಲಿ ತರಬೇತಿ ನೀಡಿದ್ದರು. ಐಪಿಎಲ್ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯವನ್ನೂ ನೀಡಿದರು. ಚಿಕ್ಕ ಬಾಲಕನನ್ನ ಐಪಿಎಲ್ ಎಂಬ ದೊಡ್ಡ ಪ್ರಪಂಚಕ್ಕೆ ಪರಿಚಯಿಸಿದ್ರು.
ಟ್ರಯಲ್ಸ್ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದೆ. ಟೀಮ್ನಲ್ಲಿ ತೆಗೆದುಕೊಳ್ಳಲು ಟ್ರೈ ಮಾಡ್ತೀವಿ. ತೆಗೆದುಕೊಂಡ ಬಳಿಕ ಫೋನ್ ಬಂತು. ಶುಭ ಹಾರೈಸಿದರು. ರಾಹುಲ್ ಸರ್ ಮಾತಾಡ್ತಾರೆ ಎಂದು ಹೇಳಿದ್ರು. ರಾಹುಲ್ ಸರ್ ಗರಡಿಯಲ್ಲಿ ಟ್ರೈನಿಂಗ್ ಮಾಡುವುದು ಅದ್ಭುತ ಅನುಭವ. ನನಗೆ ಕೋಚಿಂಗ್ ಸ್ಟಾಫ್, ಸೀನಿಯರ್ ಆಟಗಾರರ ಬೆಂಬಲ ಸಿಕ್ತು. ಸಂಜು ಭಾಯ್, ಜೈಸ್ವಾಲ್ ಭಾಯ್, ರಾಹುಲ್ ಸರ್, ವಿಕ್ರಮ್ ಸರ್ ಎಲ್ಲರೂ ಪಾಸಿಟಿವ್ ಆಗಿ ಮಾತನಾಡುತ್ತಿದ್ದರು-ವೈಭವ್, RR ಆಟಗಾರ
ವೈಭವ್ ಕ್ರಿಕೆಟ್ ಜರ್ನಿಯಲ್ಲಿ ಸಾಕಷ್ಟು ತಿರುವಿದೆ. ಮಗನನ್ನ ಕ್ರಿಕೆಟರ್ ಮಾಡಲು ತಂದೆ-ತಾಯಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಗನ ಭವಿಷ್ಯಕ್ಕಾಗಿ ಇದ್ದ ಸ್ವಲ್ಪ ಜಾಗವನ್ನೇ ಮಾರಿದ್ರು. ಸಾಲ ಮಾಡಿ ಕ್ರಿಕೆಟ್ ಅಕಾಡೆಮಿಗೆ ಸೇರಿಸಿ ಕೋಚಿಂಗ್ ಕೊಡಿಸಿದ್ರು. ಶತಕ ಸಿಡಿಸಿದ ಬಳಿಕ ತ್ಯಾಗ ಮಾಡಿದ ತಂದೆ-ತಾಯಿಯನ್ನ ವೈಭವ್ ನೆನಪಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್