newsfirstkannada.com

ಮಕ್ಕಳಾಗುತ್ತಿಲ್ಲ ಅನ್ನೋ ಕೊರಗಿದ್ಯಾ? ಎಲ್ಲರೂ ಓದಲೇಬೇಕಾದ ಪ್ರಮುಖ ಸ್ಟೋರಿ!

Share :

Published May 10, 2024 at 6:06am

  ಮಕ್ಕಳಿಲ್ಲ ಅಂತ ಬೇಜಾರಿನಲ್ಲಿದ್ದವರಿಗೆ ಇನ್ಮುಂದೆ ಲಭ್ಯವಾಗ್ತಿದೆ ನೂತನ ಚಿಕಿತ್ಸೆ

  ತಡವಾಗಿ ಮದುವೆ, ಅತಿಯಾದ ಕೆಲಸದ ಒತ್ತಡದಿಂದ ಬಂಜೆತನಕ್ಕೆ ಕಾಡ್ತಾಯಿದ್ಯಾ?

  ಮಕ್ಕಳಾಗಿಲ್ಲ ಅಂತ ಚಿಕಿತ್ಸೆಗಾಗಿ ಅಲೆದು ಅಲೆದು ರೋಸಿ ಹೋಗಿದ್ದೀರಾ ನೀವು?

ಮಕ್ಕಳಾಗಿಲ್ಲ ಅನ್ನೋ ನೋವು ನಿಮ್ಮನ್ನ ಕಾಡ್ತಾಯಿದ್ಯಾ. ಚಿಕಿತ್ಸೆಗಾಗಿ ಅಲೆದು ಅಲೆದು ರೋಸಿ ಹೋಗಿದ್ದೀರಾ. ಡೋಂಟ್​ ವರಿ ಅಂತವರಿಗಾಗಿಯೇ ಆರೋಗ್ಯ ಇಲಾಖೆ ಗುಡ್ ನ್ಯೂಸ್​ವೊಂದನ್ನು ಹೊತ್ತು ತಂದಿದೆ. ಇದೇ ಮೊದಲ ಬಾರಿಗೆ ದುಬಾರಿ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪರಿಚಯಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ರೈತನ ಮಗ SSLCಯಲ್ಲಿ ರಾಜ್ಯಕ್ಕೇ ದ್ವಿತೀಯ.. ತಂದೆಗೆ ಖುಷಿಯೋ ಖುಷಿ

ಇಂತಹ ಮಾಡರ್ನ್ ಯುಗದ ಲೈಫ್ ಸ್ಟೈಲ್ ಅಥವಾ ಇನ್ನೂ, ಕೆಲವು ಕಾರಣಗಳಿಂದ ಅನೇಕ ದಂಪತಿಗೆ ಮಕ್ಕಳಾಗ್ತಿಲ್ಲ. ತಡವಾಗಿ ಮದುವೆ, ಜೀವನದಲ್ಲಿನ ಕಮಿಟ್​ಮೆಂಟ್, ಆರ್ಥಿಕತೆ, ಗಂಡ ಹೆಂಡತಿಯರ ನಡುವಿನ ಕೆಲಸದ ಒತ್ತಡ ಸೇರಿದಂತೆ ನಾನಾ ಕಾರಣಗಳು ಬಂಜೆತನಕ್ಕೆ ಒಂದೊಂದು ರಿಜನ್​ ಆಗಬಹುದು. ಹೀಗಾಗಿ ಮಕ್ಕಳನ್ನು ಪಡೆಯಲು ಸಾಕಷ್ಟು ದಂಪತಿಗಳು ಐವಿಎಫ್ ನಂತಹ ಚಿಕಿತ್ಸೆ ಮೊರೆ ಹೋಗುತ್ತಿದ್ದಾರೆ. ಆದ್ರೆ ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿದೆ.

ಇಷ್ಟೇಲ್ಲಾ ಖರ್ಚು ಮಾಡಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಈ ಚಿಕಿತ್ಸೆ ಪಡೆಯೋದು ನಿಜಕ್ಕೂ ನಿಲುಕದ ನಕ್ಷತ್ರವೇ ಆಗಿತ್ತು. ಎಷ್ಟೋ ಜೋಡಿಗಳು ಇದೇ ಕಾರಣಕ್ಕೆ ಮಕ್ಕಳು ಪಡೆಯಲು ಸಾಧ್ಯವಾಗದೆ ಸಂಕಷ್ಟ ಪಡುತ್ತಿದ್ದಾರೆ ಇತಂಹ ಪೋಷಕರಿಗೆ ಈಗ ಆರೋಗ್ಯ ಇಲಾಖೆ ಶುಭ ಸುದ್ದಿ ಕೊಟ್ಟಿದೆ. ಹೌದು, ಮಕ್ಕಳಿಲ್ಲ ಅಂತ ಬೇಜಾರಿನಲ್ಲಿದ್ದವರಿಗೆ ಟೆನ್ಷನ್ ಬೇಡ ಬರೀ ಹಣ ಇದ್ದವರಿಗೆ ಮಾತ್ರ ಸಿಗುತ್ತಿದ್ದ IVF ಚಿಕಿತ್ಸೆ, ಇನ್ಮುಂದೆ ಬಡ ಹಾಗೂ ಮಧ್ಯಮ ವರ್ಗದವರಿಗೂ ಲಭ್ಯವಾಗ್ತಿದೆ. ಸರ್ಕಾರದಿಂದ ಮಕ್ಕಳಾಗದವರಿಗೆ ಅದರಲ್ಲೂ ಐವಿಎಫ್ ಚಿಕಿತ್ಸೆ ಅವಶ್ಯ ಇದ್ದವರಗೆ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆಯನ್ನ ನೀಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಪ್ರಾಥಮಿಕ ಹಂತದಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ IVF ಚಿಕಿತ್ಸೆ ಶುರುವಾಗುತ್ತಿದೆ.

ಇನ್ನು, ಈ IVF ಚಿಕಿತ್ಸೆ ಅಂದ್ರೆ, ಅಂಡಾಣು ಮತ್ತು ವೀರ್ಯಾಣುವನ್ನು ದೇಹದ ಹೊರಗೆ ಫಲ ನೀಡಲು ಇಡಲಾಗುವುದು. ಬಳಿಕ ಮಹಿಳೆ ಗರ್ಭಾಶಯಕ್ಕೆ ಇಂಜೆಕ್ಟ್ ಮಾಡುವ ಪ್ರಕ್ರಿಯೆ ಈ ಐವಿಎಫ್ ಚಿಕಿತ್ಸೆಯಾಗಿದೆ. ಸದ್ಯ ಇದು ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬರ್ತಿರೋದು ವರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳಾಗುತ್ತಿಲ್ಲ ಅನ್ನೋ ಕೊರಗಿದ್ಯಾ? ಎಲ್ಲರೂ ಓದಲೇಬೇಕಾದ ಪ್ರಮುಖ ಸ್ಟೋರಿ!

https://newsfirstlive.com/wp-content/uploads/2024/05/Infertility.jpg

Load More