newsfirstkannada.com

ಈ ದೇಶದಲ್ಲಿ ಈಗಲೂ ರಾಮನೇ ಭಗವಂತ; ಯಾವ್ಯಾವ ದೇಶ, ಖಂಡಗಳಲ್ಲಿ ರಾರಾಜಿಸ್ತಿದೆ ಗೊತ್ತಾ?

Share :

Published January 12, 2024 at 8:39pm

    ಗಡಿಗಳನ್ನೂ ದಾಟಿ ಪಸರಿಸಿತ್ತು ರಾಮಾಯಣದ ರಾಮಕಥೆ

    ರಾಮ ಇಡೀ ವಿಶ್ವ ಖಂಡಗಳಲ್ಲಿ ಚಕ್ರವರ್ತಿಯಾಗಿದ್ದೇಗೆ?

    ವಿಶ್ವದ ದೇಶಗಳು ರಾಮಮಯ ರಾಮನಾಮವೇ ವಿಸ್ಮಯ!

ರಾಜಧರ್ಮಪಾಲನೆ ಅಂದ್ರೆ ಏನೂ ಅಂತ ತಿಳಿಸಿದ ರಾಮ, ಚಕ್ರವರ್ತಿ ಆಗಿ ಕೇವಲ ಭಾರತಕ್ಕೆ ಮಾತ್ರ ಕೀರ್ತಿ ತಂದವನಲ್ಲ. ಇಡೀ ಭೂಮಂಡಲದಲ್ಲೇ ರಾಮ ಸ್ಮರಣೆಗೆ ಮುನ್ನುಡಿ ಬರೆದು, ರಾಮನಾಮದಲ್ಲಿ ಅದೆಷ್ಟು ಶಕ್ತಿ​​ ಇದೆ ಅಂತಾ ತೋರಿಸಿಕೊಟ್ಟವನು. ರಾಮನ ಬದುಕು ಜನಸಾಮಾನ್ಯರಿಗೆ ಸ್ಫೂರ್ತಿ, ಪ್ರೇರಣೆ ಆದ್ರೆ, ಹನುಮನಂತವರಿಗೆ ರಾಮನಾಮವೇ ಪ್ರಭಾವಶಾಲಿಯಾಗಿದೆ.

ರಾಮ ಅಂದ್ರೆ ಥಟ್​​ ಅಂತಾ ನೆನಪಾಗೋದು ರಾಮಾಯಣ. ಹತ್ತು ತಲೆ ರಾವಣ. ರಾಮ ರಾವಣರ ಯುದ್ಧವನ್ನ ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ, ಅದು ಒಳಿತು ಕೆಡುಕುಗಳ ಸಂಗ್ರಾಮ ಅಂತಾನೇ ಹೇಳಬಹುದು. ಆದ್ರೆ​,​​ ಅದೇ ಒಳಿತು ಕೆಡುಕುಗಳ ನಡುವೆ ನಾವಿದ್ದೀವಿ ಅಂತಾ ನೆನಪು ಮಾಡೋ ಮನುಷ್ಯ ಜೀವನಕ್ಕಾಗಿನೇ ಅಕ್ಷರಗಳಾಗಿದ್ದ ರಾಮಪುರಾಣವದು ಅಂತಲೂ ಹೇಳಬಹುದು. ರಾಮ ಅಂದಾಕ್ಷಣ ರಾಮಾಯಣ ನೆನಪಾಗುತ್ತೆ. ಅಯೋಧ್ಯೆ ಅಂದಾಕ್ಷಣ ದೇಶದ ಇತಿಹಾಸ ನೆನಪಾಗುತ್ತೆ. ಹಾಗಾದ್ರೆ, ರಾಮನ ಮಹಿಮೆ ಕೇವಲ ಭಾರತ ದೇಶಕ್ಕೆ ಮಾತ್ರವೇ ಸೀಮಿತನಾ? ಖಂಡಿತ ಅಲ್ಲ. ರಘುನಂದನನ ನಾಮಾಮೃತ ಇಡೀ ವಿಶ್ವಕ್ಕೆ ವ್ಯಾಪಿಸಿದೆ ಅನ್ನೋದಕ್ಕೆ ಅದೆಷ್ಟೋ ನಿದರ್ಶನಗಳಿವೆ.

ರಾಜಧರ್ಮ ಪಾಲನೆಯಿಂದ ಇತರೆ ರಾಜರಿಗೂ ಸ್ಫೂರ್ತಿ!

ಜಗದಾನಂದಕಾರಕ ಅಂತನಿಸಿಕೊಂಡ ರಾಮನು, ಇಡೀ ಏಷ್ಯಾ ಖಂಡವನ್ನೇ ಆಳಿ, ಜೊತೆಗೆ ಪ್ರಪಂಚವನ್ನೇ ಆಳಿ ಜಗದೇಕ ಚಕ್ರವರ್ತಿಯಾಗಿ ಗುರುತಿಸಿಕೊಂಡಿದ್ದನಂತೆ. ರಾಮ ಮಾಡಿದ್ದೆಲ್ಲಾ ಧರ್ಮವೇ ಆಗಿತ್ತು. ಪಾಲಿಸಿದ್ದೆಲ್ಲಾ ನ್ಯಾಯವೇ ಆಗಿತ್ತು. ಇದರಿಂದಲೇ ವಿಶ್ವದ ಪ್ರತಿ ಖಂಡವೂ ರಾಮನ ಆದರ್ಶಗಳಿಂದ ಪುನೀತವಾಗಿದ್ವು ಅನ್ನೋ ಮಾತಿದೆ. ರಾಮನ ಆಳ್ವಿಕೆಯ ಗುರುತುಗಳಾಗಿ ಈಗಲೂ ಆಯಾ ದೇಶಗಳಲ್ಲಿ ಕುರುಹುಗಳಿವೆ ಎನ್ನಲಾಗಿದೆ.

‘‘ಭಾರತದ ಭೂಭಾಗದಲ್ಲಿ ಮಾತ್ರ ರಾಮನ ಹೆಸರಿದೆ. ರಾಮನ ಅವತಾರಗಳು ಕೇವಲ ಭಾರತದಲ್ಲಿ ನಡೆದಿದೆ. ಅವನು ಹೇಗೆ ಚಕ್ರವರ್ತಿ ಎಂದು ಕೆಲವರು ಕೇಳುತ್ತಾರೆ. ಅದು ಎಲ್ಲ ಅರ್ಥಹೀನ. ಏಕೆಂದರೆ ರಾಮನ ಕಾಲದಲ್ಲಿ ಅಖಂಡ ಭಾರತವಿತ್ತು. ಏಷ್ಯಾ ಖಂಡವೇ ರಾಮನ ಕೈಯಲಿತ್ತು. ಇಡೀ ಪ್ರಪಂಚದ ಎಲ್ಲ ಖಂಡಗಳು ರಾಮನ ಆಳ್ವಿಕೆಗೆ ಒಳಪಟ್ಟಿದ್ದವು. ಇಂಡೋನೇಷ್ಯಾ ಬಾಲಿ, ಸುಮಾತ್ರ, ಜಾವಾ, ಕಾಂಬೋಡಿಯಾ, ಬರ್ಮಾ, ಭೂತಾನ್ ಥೈಲ್ಯಾಂಡ್, ಶ್ರೀಲಂಕಾ, ಅಫ್ಘಾನಿಸ್ತಾನ, ಪಾಕಿಸ್ತಾನ ಎಲ್ಲ ಕಡೆ ರಾಮನ ಹೆಸರು, ಶಿಲ್ಪಗಳನ್ನು ನೋಡಬಹುದು’’.

ಡಾ. ಶಲ್ವಪಿಳ್ಳೈ ಅಯ್ಯಂಗಾರ್, ಇತಿಹಾಸ ತಜ್ಞರು & ಮುಖ್ಯಸ್ಥರು, ಪ್ರಾಚೀನ ಇತಿಹಾಸ & ಪುರಾತತ್ವ ವಿಭಾಗ.

ಇದೇ ನಿಜವಾದ ರಾಜಪಾಲನೆ ಅನ್ನೋದನ್ನು ಅರಿತ ಹಲವು ರಾಜರು ರಾಮನ ಆದರ್ಶ ಆಳ್ವಿಕೆಯನ್ನ ತಮ್ಮಲ್ಲಿ ಮೈಗೂಡಿಸಿಕೊಂಡ್ರು. ಇನ್ನು, ರಾಮನ ಪ್ರಭಾವ ಮುಂದೆ ರಾಜವಂಶಗಳ ಮೇಲೆ ಹೆಚ್ಚಾಗಿತ್ತು. ಈಗಲೂ ಅವರ ಹೆಸರುಗಳಲ್ಲಿ ಮತ್ತು ಅವರ ಆಚರಣೆಗಳಲ್ಲಿ, ರಾಮನ ಹೆಸರಿದೆ ಎನ್ನಲಾಗ್ತಿದೆ.

ಕಲ್ಲೂ ಮನುಷ್ಯನಾಗುತ್ತೆ.. ಕುಖ್ಯಾತಿ ಖ್ಯಾತಿಯಾಗಿ ಬದಲಾಗುತ್ತೆ!

ರಾಮನ ಹೆಸರಿಗೆ ಅಪಾರ ಶಕ್ತಿ ಇದೆ ಅಂತಾ ತಿಳಿಸಿದ್ದು ಹನುಮಂತ. ರಾಮಾಂಜನೇಯ ಯುದ್ಧದಲ್ಲಿ, ರಾಮನಾಮವನ್ನ ಜಪ ಮಾಡಿ ರಾಮನಿಗೆ ಭ್ರಾಂತಿ ಮೂಡಿಸಿಬಿಟ್ಟಿದ್ದ ಹನುಮ. ಸಮುದ್ರದೇವನಿಗೂ ರಾಮನಾಮಕ್ಕೆ ಅದೆಷ್ಟು ಶಕ್ತಿ ಇದೆ ಅಂತ ಗೊತ್ತಿತ್ತು. ಹಾಗಾಗಿಯೇ, ರಕ್ಕಸ ರಾವಣ ರಾಮನ ಪ್ರೀತಿಯ ಮಡದಿ ಸೀತೆಯನ್ನ ಅಪಹರಿಸಿದಾಗ, ರಾಮ ಸುಗ್ರೀವ ಮತ್ತು ವಾನರ ಸೈನ್ಯದೊಟ್ಟಿಗೆ ಸೇರಿ ರಾವಣ ರಾಜ್ಯಕ್ಕೆ ವಾರಧಿ ಕಟ್ಟುವಾಗ, ಶ್ರೀ ರಾಮ್​​ ಅನ್ನೋ ಹೆಸರಲ್ಲಿ ಕಲ್ಲುಗಳನ್ನ ಸಮುದ್ರದೇವ ತೇಲುವಂತೆ ಮಾಡಿದ್ದ. ರಾಮನ ಹೆಸರೆಷ್ಟು ಶಕ್ತಿಯುತ ಅನ್ನೋದಕ್ಕೆ ಮತ್ತೊಂದು ಬಲವಾದ ಉದಾಹರಣೆ ಇದೆ. ಆತನ ಹೆಸರು ರತ್ನಾಕರ. ಆತನೊಬ್ಬ ಕುಖ್ಯಾತ ಕಳ್ಳನಾಗಿದ್ದ. ರಾಮನಾಮದಿಂದಲೇ ವಿದ್ವಾಂಸನಾಗಿ, ಮಹಾಕಾವ್ಯ- ರಾಮಾಯಣದ ಕರ್ತೃವಾಗಿ, ಸಂಸ್ಕೃತ ಭಾಷೆಯಲ್ಲಿ ಶ್ಲೋಕಗಳನ್ನ ರಚಿಸಿದ ವಿಶ್ವದ ಮೊದಲ ವ್ಯಕ್ತಿ, ಆತ ಬೇಱರು ಅಲ್ಲ ಮಹಾಕವಿ ವಾಲ್ಮೀಕಿ.

ವಿದೇಶಿಗಳ ಲೈಬ್ರರಿಯಲ್ಲಿ ರಾಮಾಯಣ ಗ್ರಂಥ ಕಡ್ಡಾಯ!
ಹಿಂದೂ ಪುರಾಣಗಳೇ ಕೆಲ ವಿದೇಶಿ ಜನರ ಬದುಕಿನ ದಾರಿ!

ತುಂಬಾ ಜನರ ಊಹೆ ಏನಂದ್ರೆ, ರಾಮ ಕೇವಲ ಭಾರತದ ದೈವಸಂಭೂತ ಅಷ್ಟೇ, ಹೊರಗಿನ ದೇಶಗಳಿಗೆ ಬಹುಶಃ ರಾಮ ಗೊತ್ತಿರಲಿಕ್ಕಿಲ್ಲ ಅಂದುಕೊಂಡಿರ್ತಾರೆ. ಆದ್ರೆ ರಾಮ ಅಖಂಡ ವಿಶ್ವಕ್ಕೆ ಚಕ್ರವರ್ತಿ ಅನ್ನೋ ವಿಸ್ಮಯ ಪುಟವೊಂದಿದೆ. ರಾಮನ ಸ್ಫೂರ್ತಿ ಭೌತಿಕ ಗಡಿಗಳನ್ನೇ ಮೀರಿದೆ ಅಂತ ಹೇಳಲಾಗ್ತಿದೆ. ಇದು ಅತೀಂದ್ರಿಯವಾಗಿದ್ದು, ಪ್ರಪಂಚದ ಅತಿದೊಡ್ಡ ಇಸ್ಲಾಮಿಕ್ ರಾಷ್ಟ್ರಗಳೂ ಸೇರಿ, ಅನೇಕ ರಾಷ್ಟ್ರಗಳಲ್ಲಿ ರಾಮಾಯಣದ ಮಹಾಭಾರತದಂತ ಹಿಂದೂ ಪುರಾಣಗಳೇ ದಿನಚರಿ ಓದುಗಳು, ವಿಶ್ವವಿದ್ಯಾಲಗಳಲ್ಲಿ ಕಡ್ಡಾಯ ವಿಷಯಗಳಂತೆ. ನಮ್ಮ ಹಿಂದೂ ಪುರಾಣಗಳಲ್ಲಿನ ಶ್ಲೋಕಗಳೇ, ವಿದೇಶಿ ಪ್ರಯೋಗಗಳಿಗೆ ಜ್ಯೋತಿಯಂತಿದ್ವು ಅನ್ನೋದು ಹಿಂದೆ ಅಲ್ಲದೇ ಇದ್ರೂ ಇತ್ತೀಚೆಗಾದ್ರೂ ನಿಮ್ಗೆ ಗೊತ್ತಾಗಿರುತ್ತೆ. ರಾಮನ ಸ್ಪೂರ್ತಿಯಂತೂ ಅವ್ರವ್ರ ಜೀವನಗಳಲ್ಲೇ ಹಾಸುಹೊಕ್ಕಾಗಿ ಬಿಟ್ಟಿದೆ.

‘ಆ’ ಧರ್ಮಕ್ಕೆ ರಾಮಾಯಣವೇ ಸಂಸ್ಕೃತಿ.. ಕಲಾವಿದರೂ ಅವರೇ!
ನೆರೆ ದೇಶಗಳಲ್ಲಿ ತೊಗಲುಬೊಂಬೆ ಆಟದಲ್ಲಿ ರಾಮಾಯಣ ಕಥೆ!

ಪ್ರಪಂಚದ ಅತಿದೊಡ್ಡ ಇಸ್ಲಾಮಿಕ್ ರಾಷ್ಟ್ರಗಳೂ ಸೇರಿ, ಅನೇಕ ರಾಷ್ಟ್ರಗಳಲ್ಲಿ ರಾಮಾಯಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಸ್ಲಾಂ ನಮ್ಮ ಧರ್ಮ. ರಾಮಾಯಣ ನಮ್ಮ ಸಂಸ್ಕೃತಿ ಅಂಥಾ ಹೇಳುವ ದೇಶಗಳೂ ಇವೆ. ಪ್ರಂಬನನ್ ಗೋಪುರಗಳನ್ನು ಹಿಂದೆ ಸ್ಕ್ರೀನ್​​ನಂತೆ ಇಟ್ಟುಕೊಂಡು, ರಾಮಾಯಣ ಆಧರಿಸಿ ಬ್ಯಾಲೆ ನೃತ್ಯದಲ್ಲಿ ಪ್ರದರ್ಶನ ಮಾಡ್ತಾರಂತೆ. ಇಂಡೋನೇಷ್ಯಾದಲ್ಲಿ ಇದಕ್ಕೆ ‘ಕಾಕಾವಿನ್’ ರಾಮಾಯಣ ಅನ್ನೋ ಹೆಸರಿದೆ. ಆ ನೃತ್ಯದಲ್ಲಿ ಒಟ್ಟು ಇನ್ನೂರು ಕಲಾವಿದರು ಇಸ್ಲಾಮ್​​​ ಧರ್ಮಕ್ಕೆ ಸೇರಿದ ರಷಿಯನ್ನರು ಅಂತ ಹೇಳಲಾಗಿದೆ. ಅಷ್ಟೇ ಅಲ್ಲ ಇನ್ನೂ ಅನೇಕ ದೇಶಗಳಲ್ಲಿ ರಾಮಾಯಣ ಸಾರವನ್ನ ಅಭಿನಯಿಸಿ,ಪ್ರದರ್ಶನ ಮಾಡ್ತಾರಂತೆ.

ರಾಮನ ಹೆಸರಲ್ಲಿ ಅನೇಕ ಉತ್ಸವಗಳು ನಡೆಯುತ್ತವೆ. ರಾಮಾಯಣ ಕಥಾನಕಗಳನ್ನು ಕಾಂಬೋಡಿಯಾ, ಬರ್ಮಾ, ಭೂತಾನ್ ಥೈಲ್ಯಾಂಡ್ ಎಲ್ಲಾ ಕಡೆ ಅಭಿನಯಿಸಲಾಗುತ್ತದೆ. ರಾಮಾಯಣ ಒಂದು ಇತಿಹಾಸ. ಅದೊಂದು ಮಹಾಕಾವ್ಯ. ರಾಮ ಕೇವಲ ಭಾರತಕ್ಕೆ ಆದರ್ಶ ಪುರುಷನಲ್ಲ. ಪ್ರಪಂಚಕ್ಕೆ ಆದರ್ಶ ಪುರುಷ ಎಂದು ಸಾಬೀತು ಆಗಿತ್ತು.

ಹೌದು, ಸೌತೀಸ್ಟ್​​ ಏಷ್ಯಾದ ಮುಖ್ಯ ಭೂಭಾಗದಲ್ಲೂ, ಲಾವೋಸ್ನ ನೃತ್ಯಗಾರರು “ಪಾಲಕ್ ಪಲಾಂಗ್” ಅನ್ನೋ ಹೆಸರಲ್ಲಿ ರಾಮಾಯಣವನ್ನ ಅತ್ಯಂತ ಇಷ್ಟದಿಂದ ಪ್ರದರ್ಶನ ಮಾಡ್ತಾರಂತೆ. ಹಾಗೆಯೇ, ಥೈಲ್ಯಾಂಡ್‌ನಲ್ಲೂ ರಾಮಾಯಣ ತುಂಬಾ ಜನಪ್ರಿಯ. ಅಲ್ಲಿ ಸುಗ್ರೀವನ ಬೃಹತ್ ಪ್ರತಿಮೆಗಳು ಮತ್ತು ರಾಮಾಯಣದ ಇತರ ಪಾತ್ರಗಳ ಜೊತೆಗೆ, ರಾಜಮನೆತನದ ಪರಂಪರೆಯನ್ನ ಅಲಂಕರಿಸುತ್ತವಂತೆ. ರಾಮಾಯಣದ ಸಂಪೂರ್ಣ ಕಥೆಯೇ ಅಲ್ಲಿ ನೆಲದಿಂದ ಚಾವಣಿವರೆಗೂ ದೊಡ್ಡದಾಗಿ ವರ್ಣಚಿತ್ರಗಳಲ್ಲಿದೆ ಎನ್ನಲಾಗಿದೆ. ಮಧ್ಯ ಜಾವಾದ 10ನೇ ಶತಮಾನದ ಪ್ರಸಿದ್ಧ ಪ್ರಂಬನನ್ ದೇವಾಲಯದಲ್ಲಿ, ರಾಮಾಯಣವನ್ನ ಹಲವಾರು ಕಡೆ ಉಬ್ಬು ಶಿಲ್ಪದಲ್ಲಿ ಕೆತ್ತಿಸಲಾಗಿದೆಯಂತೆ.

ಜೋಗಕಾರ್ತಾದ ಸುಲ್ತಾನನು ತನ್ನ ಅರಮನೆಯ ಅನುಬಂಧದಲ್ಲಿ ರಾಮಾಯಣದ ತೊಗಲು ಬೊಂಬೆ ಆಟವನ್ನ ದಿನನಿತ್ಯದ ಪ್ರದರ್ಶನವನ್ನಾಗಿ ಮಾಡಿಕೊಂಡಿದ್ದನಂತೆ. ಥೈಲ್ಯಾಂಡ್‌ನ ಥಾಯ್ ಭಾಷಾಂತರದಲ್ಲಿ ರಾಮಾಯಣವನ್ನ ‘ರಾಮಕಿಯಾನ್’ ಅಂತ ಕರೆಯಲಾಗಿದ್ದು, 18ನೇ ಶತಮಾನದಲ್ಲಿ ಥಾಯ್ ರಾಜ ಸಹ ರಾಮನಿಂದ ಪ್ರೇರೇಪಿತನಾಗಿದ್ದವನಂತೆ. ಹೀಗೆ ವಿಶ್ವದ ಅನೇಕ ರಾಜಮಾರ್ತಾಂಡರೇ ರಾಮನನ್ನ ಜಗದೇಕ ಚಕ್ರವರ್ತಿ ಅಂತ ಗುರುತಿಸಿ,ರಾಮನ ಆದರ್ಶ ಸುಗುಣಗಳನ್ನ ತಮ್ಮಲ್ಲಿ ಅಳವಡಿಸಿಕೊಂಡು, ರಾಮನಾಮವನ್ನೂ ತಮ್ಮ ಹೆಸರುಗಳನ್ನಾಗಿ ಮಾಡಿಕೊಂಡಿದ್ದಾರೆ. ಅಖಂಡ ವಿಶ್ವಾದ್ಯಂತವೂ ರಾಮನಿಂದ ಪ್ರೇರಣೆ ಪಡೆದಿದೆ ಅನ್ನೋ ಸಂದೇಶದ ಜೊತೆಗೆ, ಅದೆಷ್ಟೋ ರಾಜಮನೆತನದ ರಾಜರುಗಳು, ಆಗಿನಿಂದ ಈಗಿನತನಕ ರಾಮನ ಹೆಸರನ್ನೇ ಅಳವಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ದೇಶದಲ್ಲಿ ಈಗಲೂ ರಾಮನೇ ಭಗವಂತ; ಯಾವ್ಯಾವ ದೇಶ, ಖಂಡಗಳಲ್ಲಿ ರಾರಾಜಿಸ್ತಿದೆ ಗೊತ್ತಾ?

https://newsfirstlive.com/wp-content/uploads/2024/01/ramanama.jpg

Load More