ಕನ್ನಡ ಅಷ್ಟೇ ಅಲ್ಲ.. ಪರಭಾಷೆಯಲ್ಲಿ ಜೋಡಿಯಾಗಿ ಮಿಂಚುತ್ತಿದ್ದಾರೆ ಈ ಸ್ಟಾರ್ಸ್; ಯಾರಿವರು?

author-image
Veena Gangani
Updated On
ಕನ್ನಡ ಅಷ್ಟೇ ಅಲ್ಲ.. ಪರಭಾಷೆಯಲ್ಲಿ ಜೋಡಿಯಾಗಿ ಮಿಂಚುತ್ತಿದ್ದಾರೆ ಈ ಸ್ಟಾರ್ಸ್; ಯಾರಿವರು?
Advertisment
  • ಸೀರಿಯಲ್​ನಲ್ಲಿ ಜೋಡಿಯಾದವರೂ ರಿಯಲ್​ ಕಪಲ್ ಆಗ್ತಾರಾ?
  • ತೆಲುಗು ಕಿರುತೆರೆಯಲ್ಲಿ ಕನ್ನಡಗರಿಗೆ ನೀಡಲಾಗುತ್ತಿದೆ ಹೆಚ್ಚು ಆದ್ಯತೆ
  • ಕನ್ನಡದಲ್ಲಿ ಫೇಮಸ್​ ಆದ ಜೋಡಿಗಳು ತೆಲುಗಿನಲ್ಲಿ ಸಖತ್ ಮಿಂಚಿಂಗ್​

ಕನ್ನಡದ ಅದೇಷ್ಟೋ ಕಲಾವಿದರು ಬೇರೆ ಭಾಷೆಗಳಲ್ಲಿ ಕೆಲಸ ಮಾಡ್ತಿದ್ದಾರೆ. ಇನ್​ಫ್ಯಾಕ್ಟ್​ ತೆಲುಗು ಕಿರುತೆರೆಯಲ್ಲಿ ಕನ್ನಡಗರಿಗೆ ಪ್ರಾಮುಖ್ಯತೆ ಹೆಚ್ಚು. ಇದು ಖುಷಿ ಪಡೋ ವಿಚಾರವೇ. ಆದ್ರೆ ಕನ್ನಡದಲ್ಲಿ ಫೇಮಸ್​ ಆದ ಜೋಡಿಗಳು ತೆಲುಗಿನಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ತಿದ್ದಾರೆ. ಇಲ್ಲಿ ಒಂಟಿ ಆಗಿದವ್ರು ಅಲ್ಲಿ ಜಂಟಿ ಆಗ್ತಿರೋದು ಸ್ಪೆಷಲ್ ಅನ್ಸುತ್ತೆ.

ಇದನ್ನೂ ಓದಿ: ನೇಹಾ ಗೌಡ ತಮ್ಮ ಮುದ್ದಾದ ಮಗಳಿಗೆ ಶಾರದ ಅಂತಾ ಹೆಸರು ಇಟ್ಟಿದ್ದೇಕೆ; ಗುಟ್ಟು ಬಿಚ್ಚಿಟ್ಟ ನಟಿಯ ತಂದೆ

publive-image

ತೆಲುಗು, ತಮಿಳು, ಮಲಿಯಾಳಂ ಭಾಷೆಗಳಲ್ಲಿ ಕನ್ನಡದ ಕಲಾವಿದರಿಗೆ ಬಹು ಬೇಡಿಕೆ ಇದೆ. ಪೋಷಕ ಪಾತ್ರಗಳಿಂದ ಹಿಡಿದು ನಾಯಕ, ನಾಯಕಿ ಪಾತ್ರಗಳಲ್ಲೂ ಕನ್ನಡಿಗರೇ ಮಿಂಚುತ್ತಿದ್ದಾರೆ. ಇದು ನಿಜಕ್ಕೂ ಹೆಮ್ಮೆ ಪಡೋ ವಿಚಾರವೇ. ಅದರಲ್ಲೂ ಪ್ರಮುಖವಾಗಿ ತೆಲುಗು ಭಾಷೆಯಲ್ಲಿ ಕನ್ನಡಿಗರದ್ದೇ ಸಾರ್ವಭೌಮತ್ವ. ಅದೇಷ್ಟೋ ಕಲಾವಿದರು ಹೈದ್ರಾಬಾದ್​ನಲ್ಲೇ ಸೆಟಲ್​ ಆಗಿದ್ದಾರೆ. ಅಲ್ಲೇ ಜೋಡಿ ಹುಡುಕಿಕೊಂಡು ಮದುವೆ ಆಗಿ ಪರಭಾಷೆಯಲ್ಲೇ ಪರಮನೆಂಟ್ ಆಗಿದ್ದಾರೆ. ಇನ್ನು, ಹಲವರು ಇಲ್ಲಿ ಜಸ್ಟ್​ ಫ್ರೆಂಡ್ಸ್​ ಆದವ್ರು, ಅಲ್ಲಿ ರಿಯಲ್​ ಜೋಡಿ ಆಗಿದ್ದಾರೆ.

publive-image

ಕೆಲವರ ಪ್ರೀತಿಗೆ ತೆಲುಗು ರಿಯಾಲಿಟಿ ಶೋಗಳು ವೇದಿಕೆ ಆಗಿವೆ. ಕಮಲಿ ಖ್ಯಾತಿಯ ಅಮೂಲ್ಯ ಹಾಗೂ ನಿರಂಜನ್​ ಜೋಡಿ ಪಕ್ಕಾ ಲವ್​ನಲ್ಲಿದ್ದಾರೆ ಅನ್ನೋದು ಎಷ್ಟೋ ಜನರ ಊಹೆ ಆಗಿತ್ತು. ಇದಕ್ಕೆ ಪುಷ್ಠಿ ಕೊಡುವಂತೆ ಅವ್ರು ಆಗಾಗ ಒಟ್ಟಿಗೆ ಕ್ಯಾಮೆರಾ ಕಣ್ಣಲ್ಲಿ ಸೇರೆ ಆಗ್ತಿದ್ರು. ಇಬ್ಬರದ್ದೂ ಸ್ನೇಹ ಮೀರಿದ ಬಾಂಧವ್ಯ ಅನ್ನೋದು ಗೊತ್ತಾಗಿದ್ದು ತೆಲುಗು ಕಾರ್ಯಕ್ರಮ ಒಂದರಲ್ಲಿ.

publive-image

ಅದೇ ರೀತಿ ನೀನಾದೇ ನಾ ಖ್ಯಾತಿಯ ಜೋಡಿ ದಿಲೀಪ್​ ಹಾಗೂ ಖುಷಿ ಸ್ನೇಹದ ಸೆಲೆಬ್ರೇಷನ್​ ತೆಲುಗು ರಿಯಾಲಿಟಿ ಶೋ ಒಂದರಲ್ಲಿ ನಡೆದಿತ್ತು. ದಿಲೀಪ್​ಗೆ ಸರ್​ಪ್ರೈಜ್​ ನೀಡಿದ್ರು ಖುಷಿ. ಈ ಜೋಡಿ ಫ್ಯಾನ್ಸ್​ಗಂತೂ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಈಗಲೂ ನಿವಿಬ್ಬರೂ ರಿಯಲ್​ ಜೋಡಿ ಆಗಿ ಅಂತಿರ್ತಾರೆ.

publive-image

ಇತ್ತಿಚೆಗೆ ಭೂಮಿಕಾ ಹಾಗೂ ಅಭಿನವ್​​ ಜೋಡಿ ಸೂಪರ್ ಹಿಟ್​ ಆಗಿದೆ. ಇಬ್ಬರ ನಡುವೆ ಗಾಢವಾದ ಸ್ನೇಹ ಇದೆ. ಶೋ ಒಂದರಲ್ಲಿ ನೇರಾ ನೇರವಾಗಿವೇ ನಿವಿಬ್ಬರೂ ಪ್ರೀತಿಸ್ತಿದ್ದೀರಾ ಅಂತ ನಿರೂಪಕರು ಕೇಳಿಯೇ ಬಿಡ್ತಾರೆ. ಅದಕ್ಕೆ ಭೂಮಿ ತರಹದ ಹುಡುಗಿನ ನಾನ್​ ಎಲ್ಲಿಯೂ ನೋಡಿಲ್ಲ. ಖಂಡಿತ ಸ್ನೇಹ ಮೀರಿದ ಬಾಂಧವ್ಯ ಅಂತಾರೆ ಅಭಿನವ್​, ಭೂಮಿ ಕೂಡ ಅಷ್ಟೇ ಅಭಿ ಅಂದ್ರೇ ನಂಗೆ ಸಿಕ್ಕಾಪಟ್ಟೆ ಇಷ್ಟ ಆದ್ರೇ ನೀವು ಅಂದುಕೊಂಡ ರೀತಿಯಲ್ಲ ಅಂತಾರೆ. ಒಟ್ಟಿನಲ್ಲಿ ಇಲ್ಲಿ ಇಲ್ಲ.. ಇಲ್ಲ.. ಏನೂ ಇಲ್ಲ ಅನ್ನುತ್ತಿದ್ದ ಜೋಡಿಗಳು ಅಲ್ಲಿ ಪ್ರೀತಿ ಸ್ನೇಹದ ಬಗ್ಗೆ ಮುಕ್ತವಾಗಿ ಮಾತ್ನಾಡ್ತಿದ್ದಾರೆ. ಇದೊಂತರ ವಿಚಿತ್ರ ವಿಶೇಷ ಅನ್ಸುತ್ತೆ. ಅದು​ ಏನೇ ಇರಲಿ ಈ ಜೋಡಿಗಳನ್ನ ಇಷ್ಟ ಪಡೋ ಫ್ಯಾನ್ಸ್​ಗಂತೂ ಖುಷಿನೋ ಖುಷಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment