/newsfirstlive-kannada/media/post_attachments/wp-content/uploads/2024/04/KL-Rahul_News.jpg)
ಐಪಿಎಲ್ 2025 ಆರಂಭವಾಗಲು ಕೇವಲ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಎರಡು ತಿಂಗಳ ಅಂತರದಲ್ಲೇ ಕೆಲ ಐಪಿಎಲ್ ಫ್ರಾಂಚೈಸಿಗಳು ತಮ್ಮ ತಮ್ಮ ಟೀಮ್ನ ಕ್ಯಾಪ್ಟನ್ ಯಾರು ಎಂದು ಘೋಷಣೆ ಮಾಡಬೇಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ, ಡೆಲ್ಲಿ, ಲಕ್ನೋ ಹಾಗೂ ಪಂಜಾಬ್ ತಂಡದ ನಾಯಕ ಯಾರು ಎಂಬುದು ಅಧಿಕೃತವಾಗಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ಸ್ಥಾನಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಬದಲಿಗೆ ಬೇರೆ ಪ್ಲೇಯರ್ ಹೆಸರು ಕೇಳಿ ಬಂದಿದೆ.
ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್ 18 ಮಾರ್ಚ್ನಿಂದ ಆರಂಭಗೊಳ್ಳಲಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರು ಲಕ್ನೋ ಪ್ರಾಂಚೈಸಿಯಿಂದ ಹೊರ ಬಂದು ಮೆಗಾ ಆಕ್ಷನ್ಗೆ ಬಂದಿದ್ದರು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ರಾಹುಲ್ ಅವರನ್ನು 14 ಕೋಟಿ ಹಣ ಕೊಟ್ಟು ಖರೀದಿ ಮಾಡಿತ್ತು. ಆದರೆ ಇಷ್ಟು ದಿನ ನಾಯಕನ ಸ್ಥಾನ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಆ ಸ್ಥಾನಕ್ಕೆ ಯುವ ಆಲ್ರೌಂಡರ್ ಅಕ್ಷರ್ ಪಟೇಲ್ ಹೆಸರನ್ನು ಹೇಳಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕ ವಿರುದ್ಧ ಫೈನಲ್ಗೆ ಯಾರಿಗೆ ಚಾನ್ಸ್.. ಎದುರಾಳಿಗೆ ಬೃಹತ್ ಟಾರ್ಗೆಟ್ ಕೊಟ್ಟ ವಿದರ್ಭ
ಅಕ್ಷರ್ ಪಟೇಲ್ ಸದ್ಯ ಕ್ರಿಕೆಟ್ನಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತಿರುವ ಯಂಗ್ ಆಲ್ರೌಂಡರ್ ಆಗಿದ್ದಾರೆ. ಅಲ್ಲದೇ ಈ ಸಲ ಡೆಲ್ಲಿ ಕ್ಯಾಪಿಟಲ್ಸ್ 16.5 ಕೋಟಿ ರೂಪಾಯಿ ಕೊಟ್ಟು ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಡೆಲ್ಲಿ ತಂಡದ ಭರವಸೆ ಆಟಗಾರ ಎನ್ನುವ ಹೆಸರು ಕೂಡ ಇದೆ. ನಾಯಕನ ಸ್ಥಾನಕ್ಕಾಗಿ ಡೆಲ್ಲಿ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಇದಕ್ಕೆ ಫುಲಿಸ್ಟಾಪ್ ಬೀಳುವಂತೆ ಕಾಣುತ್ತಿದೆ.
ಡೆಲ್ಲಿ ಕ್ಯಾಪ್ಟನ್ ಸ್ಥಾನದ ರೇಸ್ನಲ್ಲಿ ಅಕ್ಷರ್ ಪಟೇಲ್ ಮುಂಚೂಣಿಯಲ್ಲಿದ್ದಾರೆ. 2019 ರಿಂದ ಫ್ರಾಂಚೈಸಿಯಲ್ಲಿರುವ ಅಕ್ಷರ್ ಪಟೇಲ್ ಈ ಹಿಂದೆ ಐಪಿಎಲ್ ಋತುಗಳಲ್ಲಿ ಕೆಲವು ಪಂದ್ಯಗಳಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸಿದ ಅನುಭವ ಇದೆ. ನಂಬಿಕೆಯ ಆಟಗಾರನು ಆಗಿದ್ದಾರೆ. ಹೀಗಾಗಿ ಫ್ರಾಂಚೈಸಿ ಕೆ.ಎಲ್ ರಾಹುಲ್‌ಗಿಂತ ಅಕ್ಷರ್ ಪಟೇಲ್ ಅವರಿಗೆ ಖಾಯಂ ನಾಯಕನ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ