ವಿರಾಟ್ ಕೊಹ್ಲಿ RCB ಗೆಲುವಿಗೆ ಕಾರಣ ಅಲ್ಲವೇ ಅಲ್ಲ.. ಕೆಕೆಆರ್ ಕ್ಯಾಪ್ಟನ್ ರಹಾನೆ ಅಚ್ಚರಿ ಹೇಳಿಕೆ!

author-image
Bheemappa
Updated On
ವಿರಾಟ್ ಕೊಹ್ಲಿ RCB ಗೆಲುವಿಗೆ ಕಾರಣ ಅಲ್ಲವೇ ಅಲ್ಲ.. ಕೆಕೆಆರ್ ಕ್ಯಾಪ್ಟನ್ ರಹಾನೆ ಅಚ್ಚರಿ ಹೇಳಿಕೆ!
Advertisment
  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ ಕಾರಣ ಯಾರು?
  • ಕೆಕೆಆರ್ ಬ್ಯಾಟಿಂಗ್​ ಬಲವನ್ನೇ ಇವರು ಕಸಿದುಕೊಂಡು ಬಿಟ್ಟರು
  • ವಿರಾಟ್ ಕೊಹ್ಲಿ ಕುರಿತು ಕೆಕೆಆರ್ ಕ್ಯಾಪ್ಟನ್ ಹೇಳಿರುವುದು ಏನು?

ಉದ್ಘಾಟನಾ ಪಂದ್ಯದಲ್ಲೇ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿಯಾಗಿ ಜಯಭೇರಿ ಬಾರಿಸಿದೆ. ಇದರಿಂದ ವಿಶ್ವದ್ಯಾಂತ ಇರುವ ಆರ್​ಸಿಬಿ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಲ್ಲದೇ ಸೋಶಿಯಲ್​ ಮೀಡಿಯಾದಲ್ಲಿ ತಂಡಕ್ಕೆ ವಿಶ್ ಮಾಡುತ್ತಿದ್ದಾರೆ. ಆದರೆ ಇದರ ಮಧ್ಯೆ ಕೆಕೆಆರ್ ನಾಯಕ ಅಜಿಂಕ್ಯಾ ರಹಾನೆ, ಆರ್​ಸಿಬಿ ಗೆಲುವಿಗೆ ವಿರಾಟ್​ ಕೊಹ್ಲಿ ಕಾರಣ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ.

ತಂಡ ಮುಗಿದ ಬಳಿಕ ಮಾತನಾಡಿದ ಕೆಕೆಆರ್ ನಾಯಕ ರಹಾನೆ, ಆರಂಭದಲ್ಲೇ ಒಂದು ವಿಕೆಟ್ ಕಳೆದುಕೊಂಡರು ನಿರ್ಭೀತಿಯಿಂದ ಬ್ಯಾಟಿಂಗ್ ಮಾಡುತ್ತಿದ್ದೇವು. 9.5 ಓವರ್​ಗೆ 107 ರನ್​ಗೆ ಒಂದು ವಿಕೆಟ್ ಅಷ್ಟೇ ಹೋಗಿತ್ತು. ಪವರ್ ಪ್ಲೇನಲ್ಲಿ ಬಂದ ರನ್​ ನೋಡಿದರೆ, ನಾವು 200, 210 ರನ್​ ಗಳಿಸುವ ಗುರಿ ಹೊಂದಿದ್ದೇವು. ಆದರೆ ಮ್ಯಾಚ್​ನ ದಿಕ್ಕು ಬದಲಿಸಿದವರು ಎಂದರೆ ವಿರಾಟ್ ಕೊಹ್ಲಿ ಅಲ್ಲ, ಆರ್​ಸಿಬಿ ಬೌಲರ್ಸ್​ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಆಸ್ತಿ ತೆರಿಗೆದಾರರೇ ಎಚ್ಚರ.. ಏಪ್ರಿಲ್ 1ರಿಂದ ಹೊಸ ತೆರಿಗೆ ನಿಯಮ; 100% ದಂಡ ಯಾರಿಗೆ?

publive-image

ಸುನಿಲ್ ನರೈನ್ ಹಾಗೂ ನಾನು ನಿರ್ಭೀತಿಯಿಂದ ಬ್ಯಾಟ್​ ಬೀಸುವಾಗ ಆರ್​ಸಿಬಿ ಬೌಲರ್​ ರಸಿಕ್ ಸಲ್ಮಾನ್ ಅವರು ನರೈನ್​ ಅವರ ವಿಕೆಟ್ ಪಡೆದು ತಂಡಕ್ಕೆ ದೊಡ್ಡ ತಿರುವು ಕೊಟ್ಟರು. ಇದೇ ವೇಳೆ ಈ ಅವಕಾಶ ಬಳಸಿಕೊಂಡ ಕೃನಾಲ್ ಪಾಂಡ್ಯ ಕೆಕೆಆರ್ ಮೇಲೆ ಸವಾರಿ ಮಾಡೇ ಬಿಟ್ಟರು. ನನ್ನನ್ನು ಹಾಗೂ ವೆಂಕಟೇಶ್ ಅಯ್ಯರ್ ಅವರ ವಿಕೆಟ್ ಪಡೆದು ಕೆಕೆಆರ್ ಬ್ಯಾಟಿಂಗ್ ಬಲಕ್ಕೆ ತಡೆ ಹೊಡ್ಡಿದರು. ಹೀಗಾಗಿ ಕೆಕೆಆರ್​ 5 ವಿಕೆಟ್​ಗೆ 145 ರನ್​ ಗಳಿಸಿ ಬ್ಯಾಟಿಂಗ್​ನಲ್ಲಿ ಹಿಡಿತ ಕಳೆದುಕೊಂಡಿತು ಎಂದು ರಹಾನೆ ಹೇಳಿದ್ದಾರೆ.

13ನೇ ಓವರ್​ನಲ್ಲಿ 2, 3 ವಿಕೆಟ್​ ಬಿದ್ದಿದ್ದರಿಂದ ನಮ್ಮ ಬ್ಯಾಟಿಂಗ್ ವೇಗ ಕುಸಿಯಿತು. 200, 210 ರನ್​ಗಳ ಗುರಿಯಡೆಗೆ ಇದ್ದ ನಮ್ಮ ಟಾರ್ಗೆಟ್ ಸಡನ್ ಆಗಿ ಬದಲಾಯಿತು. ಕ್ರೀಸ್​​ನಲ್ಲಿ ವೆಂಕಟೇಶ್ ಅಯ್ಯರ್, ನಾನು ಬ್ಯಾಟಿಂಗ್ ಮಾಡುವಾಗ ಡಬಲ್ ಹಂಡ್ರೆಡ್ ಬಾರಿಸಬಹುದು ಎಂದು ಚರ್ಚಿಸಿದ್ದೇವು. ಆದರೆ ವಿಕೆಟ್ ಬಿದ್ದಿರುವುದು ಕೆಕೆಆರ್​ ತಂಡದ ಎಲ್ಲ ಆಲೋಚನೆಗಳನ್ನು ತಲೆ ಕೆಳಗೆ ಮಾಡಿತು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment